
೧. ‘ಪೂರ್ವಗ್ರಹ’ ಈ ಸ್ವಭಾವದೋಷವನ್ನು ಸಕಾಲದಲ್ಲಿ ದೂರ ಮಾಡದಿದ್ದರೆ ಅದು ಮನುಷ್ಯನ ಜೀವನ ನಾಶಪಡಿಸುತ್ತದೆ
‘ಪೂರ್ವಗ್ರಹ’ ಈ ಸ್ವಭಾವದೋಷವು ಯುವಕರಿಗೆ ಹೋಲಿಸಿದರೆ ವಯಸ್ಸಾದವರಲ್ಲಿ ಹೆಚ್ಚು ಕಂಡು ಬರುತ್ತದೆ. ಇದಕ್ಕೆ ಒಂದು ಕಾರಣವೆಂದರೆ, ಜೀವನದುದ್ದಕ್ಕೂ ನಡೆದ ಘಟನೆಗಳಲ್ಲಿನ ಸ್ವಭಾವದೋಷ ಮತ್ತು ಅಹಂನ ಅಂಶಗಳ ಸಂಸ್ಕಾರಗಳ ಹೊರೆಯೊಂದಿಗೆ ವಯಸ್ಸಾದವರು ತಮ್ಮ ಜೀವನ ವನ್ನು ನಡೆಸುತ್ತಿರುತ್ತಾರೆ. ವಿವಾಹಿತ, ವಯಸ್ಸಾದ, ಸಾಂಸಾರಿಕ ಮಹಿಳೆಯರಲ್ಲಿ ಇದರ ಪ್ರಮಾಣವು ಹೆಚ್ಚಾಗಿರುವುದು ಕಂಡು ಬರುತ್ತದೆ. ಮಹಿಳೆಯರು ಕೆಲವು ವಿಷಯಗಳನ್ನು ಮುಕ್ತವಾಗಿ ಮಾತನಾಡುತ್ತಾರೆ, ಅದೇ ರೀತಿ ಅವರು ತಮ್ಮ ಮನಸ್ಸಿನಲ್ಲಿಯೂ ಕೆಲವು ವಿಷಯಗಳನ್ನು ಸಂಗ್ರಹಿಸಿಡುತ್ತಾರೆ. ಮಾತನಾಡುವುದರಿಂದ ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಪರಸ್ಪರರನ್ನು ಅರ್ಥಮಾಡಿಕೊಳ್ಳಲು ಕೆಲವೊಮ್ಮೆ ಕಷ್ಟವಾಗುತ್ತದೆ. ಪುರುಷರು ತಮ್ಮ ಮನಸ್ಸಿನ ವಿಚಾರಗಳನ್ನು ಹೆಚ್ಚಾಗಿ ಹೇಳಿಕೊಳ್ಳುವುದಿಲ್ಲ. ಅವರು ಸಹ ಈ ರೀತಿಯಾಗಿ ಒಳಗೊಳಗೆ ಕೊರಗÀÄತ್ತಾರೆ. ಒಟ್ಟಿನಲ್ಲಿ ‘ಪೂರ್ವಗ್ರಹ’ ಎಂಬ ಸ್ವಭಾವದೋಷವನ್ನು ಸಕಾಲದಲ್ಲಿ ದೂರ ಮಾಡದಿದ್ದರೆ, ಅದು ಮನುಷ್ಯನ ಜೀವನವನ್ನು ನಾಶಪಡಿಸುತ್ತದೆ. ಪೂರ್ವಗ್ರಹ ಎಂಬ ಸ್ವಭಾವದೋಷದಿಂದ ಜೀವನದಲ್ಲಿ ಅನೇಕ ತಪ್ಪು ತಿಳುವಳಿಕೆಗಳನ್ನು ಎದುರಿಸಬೇಕಾಗುತ್ತದೆ. ಪೂರ್ವಗ್ರಹ ಎಂಬ ಸ್ವಭಾವದೋಷದ ಜೊತೆಗೆ ನಮ್ಮಲ್ಲಿರುವ ಇತರ ಸ್ವಭಾವದೋಷಗಳು ಮತ್ತು ಅಹಂನ ಅಂಶಗಳ ಮೇಲೆ ‘ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಯ ಪ್ರಕ್ರಿಯೆ’ ಯನ್ನು ಮಾಡಿ ಜಯಿಸಬಹುದು.
೨. ‘ಪೂರ್ವಗ್ರಹ’ ಎಂಬ ಸ್ವಭಾವದೋಷವನ್ನು ಜಯಿಸಲು ಮಾಡಬೇಕಾದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದ ಪ್ರಯತ್ನಗಳು
೨ ಅ. ದೈಹಿಕ ಸ್ತರ : ಸಾಧನೆ ಮಾಡುವಾಗ ನಾವು ಅನೇಕ ಪ್ರಸಂಗಗಳು ಎದುರಿಸುತ್ತಿರುತ್ತವೆ. ಸೇವೆಯಲ್ಲಿ ಸಹಸಾಧಕರ ಜೊತೆ, ನಮ್ಮ ಸಂಬಂಧಿಕರೊಂದಿಗೆ ಇಂತಹ ಅನುಭವಗಳು ಬರುತ್ತವೆ. ಪ್ರತಿಯೊಬ್ಬ ಸಾಧಕನು ಸಾಧನೆ ಮಾಡಿ ಸ್ವಭಾವದೋಷ ಮತ್ತು ಅಹಂನ ಲಕ್ಷಣಗಳನ್ನು ದೂರ ಮಾಡಲು ಪ್ರಯತ್ನಿಸುತ್ತಿರುತ್ತಾನೆ. ಸಾಧಕರು ಈ ಮುಂದಿನ ಪ್ರಯತ್ನ ಮಾಡಬೇಕು.
೧. ಸಾಧಕರೊಂದಿಗೆ ಸೇವೆ ಮಾಡುವಾಗ, ಯಾರಾದರೊಬ್ಬ ಸಾಧಕನು ತಪ್ಪಾಗಿ ಏನಾದರೂ ಮಾತನಾಡಿದನೆಂದು ಅವನೊಂದಿಗೆ ಸೇವೆ ಮಾಡುವ ಇತರ ಸಾಧಕರು ತಕ್ಷಣ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳದೇ, ಆ ಪ್ರಸಂಗವನ್ನು ಸಾಧನೆಯ ದೃಷ್ಟಿಯಿಂದ ನೋಡಲು ಪ್ರಯತ್ನಿಸಬೇಕು. ಇತರರನ್ನು ದೂಷಿಸುತ್ತಾ ಕೂರದೇ, ಆದ ತಪ್ಪನ್ನು ಒಪ್ಪಿಕೊಂಡು ಪುನಃ ಹುರುಪಿನಿಂದ ಸೇವೆ ಮಾಡುವವನು ದೇವರಿಗೆ ಇಷ್ಟವಾಗುತ್ತಾನೆ.
೨. ಪೂರ್ವಗ್ರಹವನ್ನು ಮರೆತು ಸಹಜವಾಗಿ ವರ್ತಿಸಲು ಆರಂಭ ದಲ್ಲಿ ಒಮ್ಮೆಲೆ ಯಾರಿಗಾದರೂ ಸಾಧ್ಯವಾಗದಿದ್ದರೆ, ಅವರು ಇತರರ ಸಹಾಯ ಪಡೆದು ಪ್ರಯತ್ನಿಸಬೇಕು.
೩. ನಡೆದ ಪ್ರಸಂಗಗಳ ಬಗ್ಗೆ ಪರಸ್ಪರ ಮುಕ್ತವಾಗಿ ತಕ್ಷಣವೇ ಮಾತನಾಡಿಕೊಳ್ಳಬೇಕು. ಇಲ್ಲಿ ವಿನಯದಿಂದ ಮತ್ತು ತಿಳುವಳಿಕೆ ಯಿಂದ ಮಾತನಾಡುವುದು ಬಹಳ ಮುಖ್ಯ.
೪. ಯಾವುದೇ ಸಾಧಕ/ಸಾಧಕಿಯೊಂದಿಗೆ ಏನಾದರೂ ಪ್ರಸಂಗ ಘಟಿಸಿದ್ದರೆ, ಪದೇ ಪದೇ ಆ ಬಗ್ಗೆ ವಿಚಾರ ಮಾಡುವುದನ್ನು ತಪ್ಪಿಸಬೇಕು.
೫. ಚಿಕ್ಕ ಮಕ್ಕಳೊಂದಿಗೆ ಇಂತಹದೇನಾದರೂ ನಡೆದರೆ, ಉದಾ: ಯಾರಾದರೂ ಅವರನ್ನು ರೇಗಿಸಿದರೆ; ಆದರೆ ಅದೇ ರೇಗಿಸಿದ ವ್ಯಕ್ತಿಯು ಮತ್ತೇ ಆ ಮಗುವನ್ನು ಮುದ್ದಾಡಿದರೆ, ಆ ಮಗು ತಕ್ಷಣವೇ ಆ ವ್ಯಕ್ತಿಯ ಬಳಿಗೆ ಆನಂದದಿಂದ ಹೋಗುತ್ತದೆ. ಕೇವಲ ಒಂದು ನಿಮಿಷದ ಹಿಂದಿನ ಕೋಪವನ್ನು ಸಹ ಆ ಮಗು ಮರೆಯುತ್ತದೆ. ಇದನ್ನು ದೊಡ್ಡವರು ಚಿಕ್ಕ ಮಕ್ಕಳಿಂದ ಕಲಿಯವಂತಿದೆ. ಅದಕ್ಕಾಗಿಯೇ ಚಿಕ್ಕ ಮಕ್ಕಳನ್ನು ನೋಡಿದರೆ ಆನಂದವಾಗುತ್ತದೆ; ಏಕೆಂದರೆ ಅವರ ಮನಸ್ಸಿನಲ್ಲಿ ಯಾವುದೇ ವಿಚಾರಗಳಿರುವುದಿಲ್ಲ. ಅವು ನಿರ್ಮಲವಾಗಿರುತ್ತವೆ. ಅಂತಹ ನಿರ್ಮಲ ಮನಸ್ಸನ್ನು ಹೊಂದಲು ಸಾಧಕರು ಪ್ರಯತ್ನಿಸಬೇಕು.
೬. ಪ್ರತಿದಿನ ಸಹಸಾಧಕರನ್ನು ನೋಡುವಾಗ, ‘ಆಶ್ರಮಕ್ಕೆ ಬಂದ ಮೊದಲ ದಿನ ನಾವು ಎಲ್ಲ ಸಾಧಕರನ್ನು ಯಾವ ಭಾವದಿಂದ ನೋಡುತ್ತಿದ್ದೆವು’, ಅದನ್ನು ನೆನಪಿಸಿಕೊಳ್ಳಬೇಕು ಮತ್ತು ಅದೇ ಭಾವವನ್ನು ಇಟ್ಟುಕೊಳ್ಳಲು ಪ್ರಯತ್ನಿಸಬೇಕು.
೭. ಸಂಬಂಧಿಕರ ಬಗ್ಗೆ ವಿಚಾರ ಬಂದರೆ, ಮನಸ್ಸಿಗೆ ಹೇಳಬೇಕು, ‘ನಾವು ಸಾಧನೆಯಲ್ಲಿದ್ದು ನಮ್ಮ ಸ್ವಭಾವದೋಷ ಮತ್ತು ಅಹಂಅನ್ನು ಹೋಗಲಾಡಿಸಲು ಎಷ್ಟು ಕಷ್ಟಪಡಬೇಕಾಗುತ್ತಿದೆ ? ಸಂಬಂಧಿಕರಿಗೆ ಸಾಧನೆ ದೂರದ ಮಾತು; ಆದರೆ ‘ಸ್ವಭಾವದೋಷ- ನಿರ್ಮೂಲನಾ ಪ್ರಕ್ರಿಯೆ’ ಎಂದರೇನು ? ಎಂಬುದೂ ಗೊತ್ತಿಲ್ಲ.’ ಇಂತಹ ಪ್ರಯತ್ನಗಳನ್ನು ಮಾಡಿದಾಗ ನಮ್ಮ ಮನಸ್ಸಿನಲ್ಲಿ ಅವರ ಬಗ್ಗೆಯೂ ಪೂರ್ವಗ್ರಹದ ವಿಚಾರಗಳು ಬರುವುದು ನಿಲ್ಲುತ್ತವೆ. ಇದನ್ನು ಮಾಡುವಾಗ ದೇವರ ಮೇಲೆ ಸಂಪೂರ್ಣ ನಂಬಿಕೆ ಇಡಬೇಕು ಮತ್ತು ಪ್ರಕ್ರಿಯೆಯ ಪ್ರಯತ್ನಗಳನ್ನು ಮುಂದುವರೆಸಬೇಕು.
೨ ಆ. ಮಾನಸಿಕ ಸ್ತರ : ಮನುಷ್ಯನ ಒಳ್ಳೆಯ ವಿಚಾರಗಳು ಅಥವಾ ಅವನ ದೋಷಗಳಿಗೆ ಮೂಲ ಕಾರಣ ಅವನ ಮನಸ್ಸೇ ಆಗಿರುತ್ತದೆ. ಮನಸ್ಸು ಒಂದು ಮಗುವಿನಂತೆ ಇರುತ್ತದೆ. ನೀವು ಅದನ್ನು ಹೇಗೆ ರೂಪಿಸುತ್ತೀರೋ ಅದು ಹಾಗೆ ರೂಪುಗೊಳ್ಳುತ್ತದೆ. ಅದಕ್ಕೆ ಒಳ್ಳೆಯ ವಿಚಾರಗಳ ಸಂಸ್ಕಾರ ನೀಡಿದರೆ, ಅದು ‘ಒಳ್ಳೆಯ ಮನಸ್ಸು’ ಆಗುತ್ತದೆ. ಅದಕ್ಕೆ ‘ಕೆಟ್ಟ ವಿಷಯಗಳನ್ನು ಹೇಳಿದರೆ ಅದು ‘ಕೆಟ್ಟ ಮನಸ್ಸು ಆಗುತ್ತದೆ. ನಮ್ಮ ಮನಸ್ಸಿನ ಶಕ್ತಿಯನ್ನು ನಾವು ಯಾವ ದಿಕ್ಕಿನಲ್ಲಿ ಹರಿಸುತ್ತೇವೆಯೋ ಅದು ಆ ಕಾರ್ಯವನ್ನು ಮಾಡು ತ್ತದೆ. ನಾವು ಮನಸ್ಸಿನ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ.
೧. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯ ಅಡಿಯಲ್ಲಿ ಪೂರ್ವಗ್ರಹ ಎಂಬ ಸ್ವಭಾವದೋಷದ ವ್ಯಾಪ್ತಿಯನ್ನು ತೆಗೆದು, ‘ಪೂರ್ವಗ್ರಹ ಈ ಸ್ವಭಾವದೋಷದಿಂದ ನಮ್ಮೊಂದಿಗೆ ನಡೆದ ಪ್ರಸಂಗಗಳ, ನಮ್ಮಿಂದಾದ ತಪ್ಪುಗಳ ಬಗ್ಗೆ ಒಮ್ಮೆ ಅಧ್ಯಯನ ಮಾಡಬೇಕು.’
೨. ‘ಆ ಪ್ರಸಂಗಗಳ ಹಿಂದೆ ನಮ್ಮ ನಡುವಳಿಕೆಯ ಮೂಲ ಕಾರಣವೇನಿತ್ತು ? ನಮ್ಮಿಂದ ತಪ್ಪಾಗುವುದರ ಹಿಂದೆ ಪೂರ್ವಗ್ರಹ ಎಂಬ ಸ್ವಭಾವದೋಷ ಹೇಗೆ ಕಾರಣವಾಗಿತ್ತು ?’, ಇತ್ಯಾದಿ ವಿಷಯಗಳನ್ನು ಅಧ್ಯಯನ ಮಾಡಬೇಕು.
೩. ಮನಸ್ಸು ಮತ್ತು ಬುದ್ಧಿಗೆ ಅರಿವಾಗಲು ಶಿಕ್ಷಾಪದ್ಧತಿಯನ್ನು ಬಳಸಬೇಕು.
೪. ಸಂಬಂಧಿತ ಸಾಧಕರಲ್ಲಿ ಕೇಳಿ ಮನಸ್ಸಿನಲ್ಲಿ ಯೋಗ್ಯ ಸಂಸ್ಕಾರ ಮೂಡಿಸಲು ಪೂರ್ವಗ್ರಹ ಈ ಸ್ವಭಾವದೋಷಕ್ಕೆ ಸ್ವಯಂ ಸೂಚನೆಗಳನ್ನು ತಯಾರಿಸಿಕೊಳ್ಳಬೇಕು ಮತ್ತು ನಿಯಮಿತವಾಗಿ ಸ್ವಯಂಸೂಚನೆಗಳ ಸತ್ರಗಳನ್ನು ಮಾಡಬೇಕು. ‘ಮನಸ್ಸಿಗೆ ತಗಲಿದ ‘ಸ್ವಭಾವದೋಷಗಳು ಮತ್ತು ಅಹಂಕಾರದ ವಿಕಾರ’ ಎಂಬ ರೋಗ ನಿರ್ಮೂಲನೆಗಾಗಿ ‘ಸ್ವಯಂಸೂಚನಾ ಸತ್ರಗಳನ್ನು’ ಮಾಡುವುದು ರಾಮಬಾಣ ಉಪಾಯವಾಗಿದೆ.
೨ ಇ. ಆಧ್ಯಾತ್ಮಿಕ ಸ್ತರ : ಯಾವುದೇ ಕಾರ್ಯವು ಈಶ್ವರನ ಬೆಂಬಲವಿಲ್ಲದೇ ಪೂರ್ಣಗೊಳ್ಳುವುದಿಲ್ಲ. ಸಾಧಕರ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ಅವರು ನಡೆಸುತ್ತಿರುವ ಪ್ರಕ್ರಿಯೆ ಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಸಂಕಲ್ಪವಿದೆ. ಸಾಧಕರು ಪ್ರಾಮಾಣಿಕವಾಗಿ ಮತ್ತು ಛಲದಿಂದ ಪ್ರಕ್ರಿಯೆಯನ್ನು ನಡೆಸಿ ಈ ಸಂಕಲ್ಪದ ಆಧ್ಯಾತ್ಮಿಕ ಉನ್ನತಿಗಾಗಿ ಪೂರ್ಣ ಲಾಭ ಪಡೆದುಕೊಳ್ಳಬೇಕು.
೧. ‘ಆಶ್ರಮವು ‘ಗುರುಗಳ ಮನೆ’ಯಾಗಿದೆ ಮತ್ತು ಆಶ್ರಮದಲ್ಲಿ ವಾಸಿಸುವ ಸಾಧಕರು ಗುರುಗಳ ವಿವಿಧ ರೂಪಗಳಾಗಿದ್ದಾರೆ’, ಎಂಬ ಭಾವದಿಂದ ಎಲ್ಲರನ್ನೂ ನೋಡಬೇಕು.
೨. ಸ್ವಭಾವದೋಷಗಳನ್ನು ದೂರಗೊಳಿಸÀಲು ಸಂಪೂರ್ಣ ಶರಣಾಗತಭಾವದಿಂದ ಪ್ರಾರ್ಥಿಸಬೇಕು.
೩. ಇಲ್ಲಿಯವರೆಗೆ ಈ ಸ್ವಭಾವದೋಷಗಳಿಂದಾದ ಗಂಭೀರ ತಪ್ಪುಗಳಿಗಾಗಿ ದೇವರಲ್ಲಿ ಕ್ಷಮೆ ಯಾಚಿಸಬೇಕು ಮತ್ತು ನಂತರ ಸಹಸಾಧಕರು ಹಾಗೂ ಸಂಬಂಧಿಕರಲ್ಲಿ (ಪರಿಸ್ಥಿತಿಗೆ ಅನುಗುಣ ವಾಗಿ ನಿರ್ಧರಿಸಬೇಕು) ಕ್ಷಮೆಯನ್ನು ಕೇಳಬಹುದು.
೪. ಪೂರ್ವಗ್ರಹ ಎಂಬ ಸ್ವಭಾವದೋಷದ ವ್ಯಾಪ್ತಿಯನ್ನು ತೆಗೆದ ನಂತರ ಮತ್ತು ಸ್ವಯಂಸೂಚನೆಗಳನ್ನು ತಯಾರಿಸಿದ ನಂತರ, ಅವು ಗಳನ್ನು ಸೂಕ್ಷ್ಮರೂಪದಲ್ಲಿ ಮೊದಲು ದೇವರ ಚರಣಗಳಲ್ಲಿ ಇಡಬೇಕು.
೫. ಪೂರ್ವಗ್ರಹ ಎಂಬ ಸ್ವಭಾವದೋಷದ ವ್ಯಾಪ್ತಿ ತೆಗೆದಿದ್ದರೆ, ಅದರ ಸುತ್ತಲೂ ನಾಮಜಪದ ಮಂಡಲ ಹಾಕಿ ಆ ಬರಹಕ್ಕೆ ವಿಭೂತಿ ಅಥವಾ ಸುಗಂಧದ್ರವವನ್ನು(ಅತ್ತರ) ಹಚ್ಚಿಡಬೇಕು. ಆ ಬರಹವನ್ನು ‘ಪರಾತ್ಪರ ಗುರು ಡಾ. ಆಠವಲೆಯವರ (ಗುರುಗಳ) ಛಾಯಾಚಿತ್ರಮಯ ಜೀವನದರ್ಶನ’, ಅವರ ಚರಿತ್ರೆ ಅಥವಾ ಸನಾತನದ ಲಭ್ಯವಿರುವ ಯಾವುದೇ ಒಂದು ಗ್ರಂಥದಲ್ಲಿ ಇಡಬಹುದು. ಇದರಿಂದ ಈಶ್ವರೀ ತತ್ತ್ವವು ಕಾರ್ಯನಿರತವಾಗಿ ನಮ್ಮ ಮೇಲೆ ಆಧ್ಯಾತ್ಮಿಕ ಸ್ತರದ ಉಪಾಯ ಆಗುತ್ತದೆ ಮತ್ತು ಸ್ವಭಾವದೋಷ ಗಳು ದೂರವಾಗಲು ನಮಗೆ ದೇವರ ಬಲವೂ ಸಿಗುತ್ತದೆ.
೩. ಸ್ವಭಾವದೋಷಗಳನ್ನು ಹೋಗಲಾಡಿಸಲು ಗುರುಕೃಪೆ ಆವಶ್ಯಕ ! ನಾವು ಎಷ್ಟೇ ಪ್ರಯತ್ನಿಸಿದರೂ ಸ್ವಭಾವದೋಷಗಳು ತಕ್ಷಣವೇ ಹೋಗುವುದಿಲ್ಲ. ಇದಕ್ಕೆ ಸಾಧನೆಯ, ಅಂದರೆ ಗುರುಕೃಪೆಯ ಬೆಂಬಲವೂ ಆವಶ್ಯಕವಾಗಿದೆ. ‘ಗುರುಕೃಪೆ ಯಿಂದಲೇ ಸ್ವಭಾವದೋಷಗಳು ಮತ್ತು ಅಹಂ ಬೇಗನೆ ನಿರ್ಮೂಲನೆಯಾಗುತ್ತದೆ’, ಎಂಬುದನ್ನು ಪ್ರತಿಯೊಬ್ಬರು ಗಮನದಲ್ಲಿಟ್ಟುಕೊಳ್ಳಬೇಕು. ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸನಾತನ ಸಂಸ್ಥೆಯ ಸಾಧಕರಿಗೆ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನಾ ಪ್ರಕ್ರಿಯೆ’ಯ ಮೂಲಕ ದೊರೆತಿರುವ ಈ ಅದ್ವಿತೀಯ ಸಂಜೀವಿನಿ ಕಲಿಯುಗವನ್ನು ಎದುರಿಸಿ ಪಾರಾಗಲು ಸಿಕ್ಕಿರುವ ‘ದೈವೀ ವರದಾನವೇ’ ಆಗಿದೆ. ಈ ಘೋರ ಆಪತ್ಕಾಲದಲ್ಲಿ ದೊರೆತಿರುವ ಇದು ಸುವರ್ಣಾವಕಾಶವಾಗಿದೆ. ‘ಈ ದೈವೀ ವರದಾನದ ಪೂರ್ಣ ಲಾಭವನ್ನು ಪಡೆದುಕೊಂಡು ಗುರುಗಳ ಕೃಪೆಯನ್ನು ಸಂಪಾದಿಸಬೇಕು’, ಎಂದು ಭಗವಂತನ ಚರಣಗಳಲ್ಲಿ ಪ್ರಾರ್ಥನೆ.
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ.
ಸಾಧನೆಯಲ್ಲಿನ ಒಂದು ದೊಡ್ಡ ಅಡಚಣೆ – ಪೂರ್ವಗ್ರಹಪರಾತ್ಪರ ಗುರು ಡಾ. ಆಠವಲೆಯವರು ಸಾಧನೆಗೆ ಸಂಬಂಧಿಸಿದ ಮಾರ್ಗದರ್ಶನದಲ್ಲಿ ಓರ್ವ ಮಹಿಳೆಗೆ ಸಂಬಂಧಿಸಿದ ಒಂದು ಪ್ರಸಂಗವನ್ನು ಹೇಳಿದ್ದಾರೆ. ಆ ಮಹಿಳೆಗೆ ಅವಳ ಅತ್ತೆಯವರು ಹೇಳಿದ ಒಂದು ವಿಷಯ ಇಷ್ಟವಾಗಲಿಲ್ಲ ಮತ್ತು ಅತ್ತೆಯ ಮಾತು ಆಕೆಯ ಮನಸ್ಸಿಗೆ ನಾಟಿತ್ತು. ಪರಾತ್ಪರ ಗುರು ಡಾ. ಆಠವಲೆಯವರು ಆ ಮಹಿಳೆಗೆ, ”ನಿಮ್ಮ ಅತ್ತೆಯವರು ನಿಮಗೆ ಹಾಗೆ ಯಾವಾಗ ಹೇಳಿದ್ದರು ?”, ಎಂದು ಕೇಳಿದರು. ಆಗ ಆ ಮಹಿಳೆಯು, ‘ಐವತ್ತು ವರ್ಷಗಳ ಹಿಂದೆ ! ಈಗ ಅವರು ಇಲ್ಲ. ಅವರು ನಿಧನರಾಗಿ ಬಹಳ ವರ್ಷಗಳಾಗಿವೆ”, ಎಂದು ಹೇಳಿದಳು. ಪೂರ್ವಗ್ರಹದಿಂದ ಕೂಡಿದ ಒಂದು ವಿಚಾರವೂ ನಮಗೆ ಎಷ್ಟು ಅಪಾಯಕಾರಿಯಾಗಬಹುದು ? ಮತ್ತು ಮನುಷ್ಯನ ಮುಂದಿನ ಜೀವನವನ್ನು ದುಃಖಕರ ಮಾಡಬಹುದು, ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಅದೇ ಸಮಯದಲ್ಲಿ ಆ ಮಹಿಳೆಯು ತನ್ನ ಅತ್ತೆಯೊಂದಿಗೆ ಮುಕ್ತವಾಗಿ ಮಾತನಾಡಿದ್ದರೆ, ಅಷ್ಟು ವರ್ಷಗಳವರೆಗೆ ಆ ವಿಚಾರ ಅವಳ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಗೊಳ್ಳುತ್ತಿರಲಿಲ್ಲ. ಅತ್ತೆಯವರು ಏನೋ ಹೇಳಿದರೆಂದು, ಅಷ್ಟು ಮನಸ್ಸಿಗೆ ಹಚ್ಚಿಕೊಂಡರೆ, ಸಂಸಾರ ಹೇಗೆ ನಡೆಯುತ್ತದೆ ? ಕುಟುಂಬದಲ್ಲಿ ಪರಸ್ಪರರನ್ನು ಸಂಭಾಳಿಸಿಕೊಂಡು ಆನಂದ ದಿಂದ ಬದುಕುವುದು ಮುಖ್ಯವಾಗಿರುತ್ತದೆ. ಅನೇಕ ಬಾರಿ ಇವೆಲ್ಲವನ್ನೂ ಮರೆತು ಮಹಿಳೆಯು ಮನೆಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. |
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !