ವಿಜಿಲೆನ್ಸ್ ಅಧಿಕಾರಿಗಳನ್ನು ನೋಡುತ್ತಿದ್ದಂತೆ ನೋಟುಗಳ ಕಟ್ಟುಗಳನ್ನು ಕಿಟಕಿಯಿಂದ ಹೊರಗೆ ಎಸೆದನು!

ಭುವನೇಶ್ವರ (ಒಡಿಶಾ) – ಇಲ್ಲಿ ವಿಜಿಲೆನ್ಸ್ (ಲೋಕಾಯುಕ್ತ) ವಿಭಾಗದ ಅಧಿಕಾರಿಗಳು ಒಡಿಶಾ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಇಂಜಿನಿಯರ್ ವೈಕುಂಠನಾಥ ಸಾರಂಗಿ ಅವರ 7 ಸ್ಥಳಗಳಲ್ಲಿ ದಾಳಿ ನಡೆಸಿ, 2 ಕೋಟಿ ರೂಪಾಯಿಗಳಿಗಿಂತ ಅಧಿಕ ಅಕ್ರಮ ನಗದು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಮತ್ತು ದುಬಾರಿ ಬಟ್ಟೆಗಳೂ ಸಿಕ್ಕಿವೆ. ಈ ವೇಳೆ, ಅಧಿಕಾರಿಗಳನ್ನು ನೋಡುತ್ತಿದ್ದಂತೆ ಇಂಜಿನಿಯರ್ ತನ್ನ ಮನೆಯ ಕಿಟಕಿಯಿಂದ 500 ರೂಪಾಯಿಗಳ ನೋಟುಗಳ ಕಟ್ಟುಗಳನ್ನು ಹೊರಗೆ ಎಸೆಯಲು ಪ್ರಾರಂಭಿಸಿದನು. ಅಧಿಕಾರಿಗಳು ಆ ಹಣವನ್ನೂ ವಶಪಡಿಸಿಕೊಂಡಿದ್ದಾರೆ.
ಸಂಪಾದಕೀಯ ನಿಲುವುಸರಕಾರಿ ಅಧಿಕಾರಿಗಳು ಭ್ರಷ್ಟರು ಎಂಬುದು ದೇಶದ ಜನರ ಭಾವನೆ. ಇವರಲ್ಲಿ ಎಣಿಕೆಯಷ್ಟು ಜನರು ಮಾತ್ರ ಸಿಕ್ಕಿಬೀಳುತ್ತಾರೆ, ಆದರೆ ಉಳಿದವರು ರಾಜಾರೋಷವಾಗಿ ಭ್ರಷ್ಟಾಚಾರ ಮಾಡುತ್ತಿರುತ್ತಾರೆ. ಎಲ್ಲಿಯವರೆಗೆ ಪ್ರತಿಯೊಬ್ಬ ಭ್ರಷ್ಟಾಚಾರಿ ಸಿಕ್ಕಿಬೀಳುವುದಿಲ್ಲ ಮತ್ತು ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ದೇಶ ಭ್ರಷ್ಟಾಚಾರ ಮುಕ್ತವಾಗಲು ಸಾಧ್ಯವಿಲ್ಲ! |
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ