Indian Airforce Chief Expresses Concern : ರಕ್ಷಣಾ ಯೋಜನೆಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳದಿದ್ದರೆ ಯುದ್ಧ ಸಿದ್ಧತೆಯ ಮೇಲೆ ಪರಿಣಾಮ ಬೀರುತ್ತದೆ!

ವಾಯುಪಡೆ ಮುಖ್ಯಸ್ಥ ಅಮರ್‌ಪ್ರೀತ್ ಸಿಂಗ್ ಇವರಿಂದ ವಿಷಾದ !

ವಾಯುಪಡೆ ಮುಖ್ಯಸ್ಥ ಅಮರ್‌ಪ್ರೀತ್ ಸಿಂಗ್

ನವದೆಹಲಿ – ಸಮಯದ ಮಿತಿಯನ್ನು ಪಾಲಿಸದಿರುವುದು ಒಂದು ದೊಡ್ಡ ಸಮಸ್ಯೆಅಗಿದೆ. ರಕ್ಷಣಾ ಯೋಜನೆಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳದಿದ್ದರೆ, ಯುದ್ಧದ ಸಿದ್ಧತೆಯ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಸೇನೆ ಬಲಿಷ್ಠವಾಗಿದ್ದಾಗ ಯುದ್ಧಗಳು ಗೆಲ್ಲಲ್ಪಡುತ್ತವೆ. ಅವರನ್ನು ಬಲಪಡಿಸುವುದು ನಮ್ಮ ಜವಾಬ್ದಾರಿ ಎಂದು ಭಾರತದ ವಾಯುಪಡೆ ಮುಖ್ಯಸ್ಥ, ಅಂದರೆ ಏರ್ ಚೀಫ್ ಮಾರ್ಷಲ್ ಅಮರ್‌ಪ್ರೀತ್ ಸಿಂಗ್ ಅವರು ಸೇನೆಗೆ ಸಂಬಂಧಿಸಿದ ಯೋಜನೆಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳದಿರುವ ಬಗ್ಗೆ ಮತ್ತೊಮ್ಮೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕೂಡ ಅವರು ತೇಜಸ್ ಯುದ್ಧ ವಿಮಾನಗಳ ಬಗ್ಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದರು. ಅವರು ಇಲ್ಲಿ ಒಂದು ಸಮ್ಮೇಳನದಲ್ಲಿ ಮಾತನಾಡುತ್ತಿದ್ದರು.

ವಾಯುಪಡೆ ಮುಖ್ಯಸ್ಥ ಅಮರ್‌ಪ್ರೀತ್ ಸಿಂಗ್ ಅವರು ಮಾತು ಮುಂದುವರೆಸಿ, ಸಮಯಕ್ಕೆ ಸರಿಯಾಗಿ ಪೂರ್ಣಗೊಂಡ ಒಂದೇ ಒಂದು ಯೋಜನೆಯೂ ಇಲ್ಲ. ನಾವು ಪೂರೈಸಲು ಸಾಧ್ಯವಾಗದ ಭರವಸೆಗಳನ್ನು ಏಕೆ ನೀಡುತ್ತೇವೆ ಎಂಬುದು ವಿಚಾರ ಮಾಡುವ ವಿಷಯವಾಗಿದೆ. ಅನೇಕ ಬಾರಿ ಯೋಜನೆಯ ಒಪ್ಪಂದಕ್ಕೆ ಸಹಿ ಹಾಕುವಾಗ, ಅದು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದಿಲ್ಲ ಎಂದು ನಮಗೆ ತಿಳಿದಿರುತ್ತದೆ, ಆದರೂ ನಾವು ಅದಕ್ಕೆ ಸಹಿ ಹಾಕುತ್ತೇವೆ. ಇದರಿಂದ ಸಂಪೂರ್ಣ ವ್ಯವಸ್ಥೆ ಹದಗೆಡುತ್ತದೆ. ‘ತೇಜಸ್ ಎಂಕೆ 1 ಎ’ ಯುದ್ಧ ವಿಮಾನಗಳಿಗಾಗಿ ಫೆಬ್ರವರಿ 2021 ರಲ್ಲಿ ‘ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌’ನೊಂದಿಗೆ 48 ಸಾವಿರ ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮಾರ್ಚ್ 2024 ರಿಂದ ವಿಮಾನಗಳ ಪೂರೈಕೆ ಪ್ರಾರಂಭವಾಗಬೇಕಿತ್ತು; ಆದರೆ ಇಂದಿನವರೆಗೂ ಒಂದೇ ಒಂದು ವಿಮಾನವೂ ಬಂದಿಲ್ಲ. ನಾವು ಇಂದಿಗಾಗಿ ಸಿದ್ಧರಾಗಿರಬೇಕು, ಆಗ ಮಾತ್ರ ನಾವು ಭವಿಷ್ಯಕ್ಕಾಗಿ ಸಿದ್ಧತೆ ಮಾಡಿಕೊಳ್ಳಬಹುದು. ಮುಂದಿನ 10 ವರ್ಷಗಳಲ್ಲಿ ಕೈಗಾರಿಕೆಯಿಂದ ಹೆಚ್ಚಿನ ಉತ್ಪಾದನೆ ಇರುತ್ತದೆ; ಆದರೆ ಇಂದು ಇರುವ ಅಗತ್ಯಗಳನ್ನು ಇಂದೇ ಪೂರೈಸಬೇಕಾಗುತ್ತದೆ. ಒಮ್ಮೆ ನಾವು ಯಾವುದಾದರೂ ವಿಷಯಕ್ಕೆ ಬದ್ಧರಾದ ನಂತರ, ನಾವು ಅದನ್ನು ಪೂರೈಸಲೇಬೇಕು.

ಸಂಪಾದಕೀಯ ನಿಲುವು

ಸರಕಾರಿ ಸಂಸ್ಥೆಗಳು ಕೈಗೊಳ್ಳುವ ಕೆಲಸಗಳು ಎಂದಿಗೂ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದಿಲ್ಲ, ಇದರಿಂದ ಸಾಮಾನ್ಯ ಜನರಿಗೆ ಹೇಗೆ ತೊಂದರೆಯಾಗುತ್ತದೋ, ಹಾಗೆಯೇ ಸೇನೆಗೂ ಆಗುತ್ತದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಆದ್ದರಿಂದ, ಸರಕಾರವು ಪ್ರಮುಖವಾಗಿ ರಕ್ಷಣಾ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕು!