ಪೂ. ರಮಾನಂದ ಗೌಡ ಇವರ ೪೯ ನೇ ಹುಟ್ಟುಹಬ್ಬದ ಪ್ರಯುಕ್ತ ಸನಾತನ ಕುಟುಂಬದ ವತಿಯಿಂದ ಕೃತಜ್ಞತಾಪೂರ್ವಕ ನಮಸ್ಕಾರಗಳು !

ಜ್ಯೇಷ್ಠ ಶುಕ್ಲ ನವಮಿಯಂದು (೪.೬.೨೦೨೫ ರಂದು) ಸನಾತನದ ೭೫ ನೇ (ಸಮಷ್ಟಿ) ಸಂತರಾದ ಪೂ. ರಮಾನಂದ ಗೌಡ ಇವರ ೪೯ ನೇ ಹುಟ್ಟುಹಬ್ಬವಿದೆ. ಆ ನಿಮಿತ್ತ ಸಾಧಕಿಗೆ ಅರಿವಾದ ಅವರ ಗುಣವೈಶಿಷ್ಟ್ಯಗಳನ್ನು ಇಲ್ಲಿ ಕೊಡಲಾಗಿದೆ.
೧. ‘ಪೂ. ರಮಾನಂದ ಗೌಡರು (ಸನಾತನ ಸಂಸ್ಥೆಯ ೭೫ ನೇ (ಸಮಷ್ಟಿ) ಸಂತರು, ವಯಸ್ಸು ೪೯ ವರ್ಷ) ಇವರ ಕಡೆಗೆ ನೋಡಿ ಭಾವಜಾಗೃತವಾಗುತ್ತದೆ.
೨. ಸಮಷ್ಟಿ ಸೇವೆಯನ್ನು ಮಾಡುವಾಗ ‘ಗುರುದೇವರ ಬಗ್ಗೆ (ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಯವರ ಬಗ್ಗೆ) ಇರುವ ಭಾವವು ನಿರಂತರ ಮನಸ್ಸಿನಲ್ಲಿ ಜಾಗೃತವಾಗಿಟ್ಟು ಸೇವೆಯನ್ನು ಹೇಗೆ ಮಾಡಬೇಕು ?’, ಎಂಬುದು ನನಗೆ ಅವರಿಂದ ಕಲಿಯಲು ಸಿಕ್ಕಿತು.
೩. ‘ಮನಸ್ಸಿನಲ್ಲಿ ಸೇವೆಯ ಭಾವವಿದ್ದರೆ ಮಾತ್ರ, ಗುರುಸೇವೆ ಯಾಗುತ್ತದೆ, ಇಲ್ಲದಿದ್ದರೆ ಕೇವಲ ಮೇಲ್ನೋಟದಲ್ಲಿ ಅಪೇಕ್ಷೆ ಯನ್ನಿಟ್ಟು ಮಾಡಿದ ಕಾರ್ಯವು ವಿಫಲವಾಗುವುದು’, ಎಂದು ನನಗೆ ಪೂ. ರಮಾನಂದ ಗೌಡರ ಮಾತುಗಳಿಂದ ಮತ್ತು ಮಾರ್ಗದರ್ಶನದಿಂದ ಅರಿವಾಯಿತು.
೪. ‘ಗುರುದೇವರ ಬಗ್ಗೆ ನನ್ನ ಮನಸ್ಸಿನಲ್ಲಿ ಉತ್ಕಟ ಭಾವವು ನಿರ್ಮಾಣವಾದರೆ ಮಾತ್ರ ನನ್ನ ಸಮಷ್ಟಿ ಮತ್ತು ವ್ಯಷ್ಟಿ ಸಾಧನೆಯು ಸಹಜವಾಗಿ ಆಗುತ್ತದೆ’, ಎಂಬುದು ನನ್ನ ಗಮನದಲ್ಲಿ ಬಂದಿತು.
೫. ಕೇವಲ ನಮ್ಮದೇ ಒಂದು ಉಪಕ್ರಮಕ್ಕೆ ಸೀಮಿತವಾಗಿರದೇ ‘ಸಂಪೂರ್ಣ ಜಿಲ್ಲೆಯ ದೃಷ್ಟಿಯಿಂದ ವ್ಯಾಪಕರಾಗಿ ಗುರುಕಾರ್ಯದ ವಿಚಾರ ಮಾಡಬೇಕು’, ಎಂದು ನನ್ನ ಗಮನಕ್ಕೆ ಬಂದಿತು.
೬. ‘ಯಾರು ಏನು ಅನ್ನುವರು ? ಯಾರಿಗೆ ಏನು ಎನಿಸುವುದು ?’, ಎಂಬುದಕ್ಕಿಂತ ‘ಗುರುಕಾರ್ಯ ಮತ್ತು ಗುರುಸೇವೆಯ ಆವಶ್ಯಕತೆ ಏನಿದೆ ?’, ಎಂಬ ವಿಚಾರವು ಪ್ರಾಧಾನ್ಯದಿಂದ ಆಗಬೇಕು’, ಇದು ನನ್ನ ಗಮನಕ್ಕೆ ಬಂದಿತು. ಇದರ ಗಾಂಭೀರ್ಯವೂ ಗಮನಕ್ಕೆ ಬಂದಿತು.
೭. ಸದ್ಗುರು ಮತ್ತು ಸಂತರು ತಪ್ಪುಗಳನ್ನು ಹೇಳುತ್ತಾರೆ. ಆ ಸಮಯದಲ್ಲಿ ‘ಸಾಧಕರಲ್ಲಿ ಬದಲಾವಣೆಯಾಗಬೇಕು’, ಇದೇ ಅವರ ಆಂತರಿಕ ತಳಮಳವಿರುತ್ತದೆ. ಅವರ ‘ಪ್ರೀತಿ ಹೇಗಿರುತ್ತದೆ ?’, ಎಂಬುದು ನನಗೆ ಹತ್ತಿರದಿಂದ ನೋಡಲು ಮತ್ತು ಅನುಭವಿಸಲು ಸಿಕ್ಕಿತು. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯ ಬಗ್ಗೆ ಸಕಾರಾತ್ಮಕತೆ ನಿರ್ಮಾಣವಾಗಿ ನನ್ನ ಭಯ ಮತ್ತು ನಕಾರಾತ್ಮಕ ನಷ್ಟವಾಯಿತು. ಗುರುದೇವಾ, ನನಗೆ ತುಂಬಾ ಕೃತಜ್ಞತೆ ಎನಿಸುತ್ತಿದೆ.’
– ಕು. ಪ್ರಾಚಿ ಶಿಂತ್ರೆ, ಪುಣೆ (೨೧.೮.೨೦೨೩)
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು