
‘ಪ್ರತಿಯೊಬ್ಬರಿಗೆ ಒಂದಲ್ಲ ಒಂದು ಹವ್ಯಾಸವಿರುತ್ತದೆ. ಹವ್ಯಾಸ ಸಾತ್ತ್ವಿಕ ವಾಗಿರುವುದು ಮತ್ತು ಆ ಹವ್ಯಾಸ ವನ್ನು ಕಾಪಾಡುವ ವ್ಯಕ್ತಿ ಮೂಲತಃ ಸಾತ್ತ್ವಿಕವಾಗಿರುವುದು ಆವಶ್ಯಕವಾಗಿದೆ, ಇಲ್ಲದಿದ್ದರೆ, ಆ ವ್ಯಕ್ತಿ ಮತ್ತು ಪರೋಕ್ಷ ರೀತಿಯಲ್ಲಿ ಸಮಾಜಕ್ಕೂ ಹಾನಿಯಾಗುತ್ತದೆ. ವ್ಯಕ್ತಿಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತುವ ಈ ಯುಗದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ‘ವ್ಯಕ್ತಿ, ಕಲೆ ಮತ್ತು ಆ ಮಾಧ್ಯಮದಿಂದ ಸಮಾಜ’ ಇವುಗಳ ಸರ್ವಾಂಗೀಣ ಉತ್ಕರ್ಷಕ್ಕಾಗಿ ಮೇಲಿಂದ ಮೇಲೆ ಅಮೂಲ್ಯ ಮಾರ್ಗದರ್ಶನ ಮಾಡಿದ್ದಾರೆ. ಅವರು ನನಗೆ ಮಾಡಿದ ಅಮೂಲ್ಯ ಮಾರ್ಗದರ್ಶನದ ಬಗ್ಗೆ ಅವರ ಚರಣಗಳಲ್ಲಿ ಕೃತಜ್ಞತಾಭಾವದಿಂದ ನಾನು ಈ ಬರವಣಿಗೆಯನ್ನು ಮಾಡಿದ್ದೇನೆ.
೧. ಬಾಲ್ಯದಿಂದಲೇ ನೃತ್ಯದ ಆಸಕ್ತಿ ಇರುವುದು; ಆದರೆ ನೃತ್ಯದ ಶಾಸ್ತ್ರೀಯ ಶಿಕ್ಷಣ ಪಡೆಯಲು ಸಾಧ್ಯವಾಗದಿರುವುದು
ನನಗೆ ಬಾಲ್ಯದಿಂದಲೇ ನೃತ್ಯದಲ್ಲಿ ಆಸಕ್ತಿ ಇತ್ತು; ಆದರೆ ನನಗೆ ಅದರ ಶಾಸ್ತ್ರೀಯ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ‘ನನ್ನ ನೃತ್ಯದ ಮೇಲೆ ಕೇವಲ ದೇವರ ಅಧಿಕಾರವಿದೆ. ದೇವದಾಸಿಯರು ಯಾವ ರೀತಿ ದೇವರಿಗಾಗಿ ನೃತ್ಯ ಮಾಡುತ್ತಿದ್ದರೋ, ಅದೇ ರೀತಿ ನನಗೆ ದೇವರಿಗಾಗಿ ನೃತ್ಯ ಮಾಡುವುದಿದೆ’, ಎಂಬ ವಿಚಾರವಿರಿಸಿದ ಕಾರಣ ಶಿಕ್ಷಣ ಪಡೆಯಲಿಲ್ಲವೆಂದು ಎಂದಿಗೂ ದುಃಖವಾಗಲಿಲ್ಲ. ‘ಇದು ದೇವರ ಆಯೋಜನೆಯೇ ಆಗಿತ್ತು’, ಎಂಬುದು ಈಗ ನನ್ನ ಗಮನಕ್ಕೆ ಬರುತ್ತದೆ. ನನಗೆ ಶಾಸ್ತ್ರೀಯ ನೃತ್ಯದ ಶಿಕ್ಷಣ ಸಿಕ್ಕಿದ್ದರೆ, ಆ ಬಗ್ಗೆ ಅಹಂಕಾರ ಬರಬಹುದಿತ್ತು ಮತ್ತು ನಾನು ಜೀವನದ ನಿಜವಾದ ಧ್ಯೇಯದಿಂದ ದೂರ ಹೋಗುತ್ತಿದ್ದೆನು.
೨. ‘ನೃತ್ಯ’ವು ಭಾವಭಾವನೆಗಳನ್ನು ವ್ಯಕ್ತಮಾಡುವ ಯೋಗ್ಯ ಮಾಧ್ಯಮವಾಗಿದೆ’, ಎಂದು ಅನಿಸುವುದು
೨ ಅ. ನಡೆದಾಡುವಾಗ, ಮಾತನಾಡುವಾಗ ನೃತ್ಯ ಮಾಡುವುದು ಮತ್ತು ನೃತ್ಯಕ್ಕಾಗಿ ಸಂಗೀತದ ಆವಶ್ಯಕತೆ ಅನಿಸದಿರುವುದು : ನೃತ್ಯವನ್ನು ಮಾಡಲು ನನಗೆ ಏನೂ ಬೇಕಾಗುತ್ತಿರಲಿಲ್ಲ. ನೃತ್ಯಕ್ಕೆ ನಾನು ಬೇರೆ ಸಮಯವನ್ನೂ ನೀಡುತ್ತಿರಲಿಲ್ಲ. ನಡೆದಾಡುವಾಗ, ಮಾತನಾಡುವಾಗ, ಮನೆಯ ಕೆಲಸಗಳನ್ನು ಮಾಡುವಾಗ, ನಾನು ಯಾವಾಗಲೂ ನೃತ್ಯವನ್ನು ಮಾಡುತ್ತಿದ್ದೆ. ನೃತ್ಯಕ್ಕೆ ಸಂಗೀತ ಇರಲೇಬೇಕು ಎಂದೇನೂ ಇರಲಿಲ್ಲ. ಯಾವಾಗಲಾದರೊಮ್ಮೆ ಮನಸ್ಸಿನಲ್ಲಿ ಬಂದರೆ, ಗುಡುಗು ಅಥವಾ ಮಳೆಯ ಶಬ್ದಗಳ ನಾದಕ್ಕೂ ನೃತ್ಯವನ್ನು ಮಾಡುತ್ತಿದ್ದೆ.
೨ ಆ. ‘ನೃತ್ಯವೇ ಮನಸ್ಸಿನಲ್ಲಿನ ಭಾವಭಾವನೆಗಳನ್ನು ವ್ಯಕ್ತ ಮಾಡುವ ಮಾಧ್ಯಮವಾಗಿದೆ’, ಎಂದು ಅನಿಸುವುದು : ನನಗಾಗಿ ‘ನೃತ್ಯ’ವು ಮನಸ್ಸಿನ ಭಾವನೆಯನ್ನು ವ್ಯಕ್ತ ಮಾಡುವ ಮಾಧ್ಯಮವಾಗಿತ್ತು. ನನಗೆ ಸಿಟ್ಟು ಬಂದರೆ, ಅದನ್ನು ದೂರ ಮಾಡಲು ನಾನು ಬಹಳ ವೇಗದಿಂದ ನೃತ್ಯ ಮಾಡುತ್ತಿದ್ದೆ. ನನಗೆ ದುಃಖವಾದರೆ, ನಾನು ಆನಂದವನ್ನು ವ್ಯಕ್ತ ಮಾಡುವ ನೃತ್ಯವನ್ನು ಮಾಡುತ್ತಿದ್ದೆ. ನನಗೆ ಏನಾದರೂ ತೊಂದರೆಯಾಗುತ್ತಿದ್ದರೆ, ನಾನು ಅದನ್ನು ದೇವರಿಗೆ ನೃತ್ಯದ ಮೂಲಕ ಹೇಳುತ್ತಿದ್ದೆ.
೩. ನೃತ್ಯದ ಮಾಧ್ಯಮದಿಂದ ಆಧ್ಯಾತ್ಮಿಕ ತೊಂದರೆ ಪ್ರಕಟವಾಗುವುದು
೩ ಅ. ಪರಾತ್ಪರ ಗುರು ಡಾಕ್ಟರರು ‘ಆಧ್ಯಾತ್ಮಿಕ ತೊಂದರೆಯಿಂದ ನೃತ್ಯ ಮಾಡುತ್ತಿರುವೆ’, ಎಂದು ಗಮನಕ್ಕೆ ತಂದು ಕೊಡುವುದು : ೨೦೦೭ ರಲ್ಲಿ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ನೃತ್ಯದ ಸಂದರ್ಭದಲ್ಲಿ ಸಂಶೋಧನೆಯ ದೃಷ್ಟಿಯಿಂದ ನೃತ್ಯದ ಪ್ರಯೋಗಗಳು ನಡೆದಿದ್ದವು. ಆಗ ನನಗೂ ನೃತ್ಯ ಮಾಡಲು ಹೇಳಿದ್ದರು. ‘ದೇವರು (ಪರಾತ್ಪರ ಗುರು ಡಾ. ಆಠವಲೆ) ನನ್ನ ನೃತ್ಯವನ್ನು ನೋಡಲಿದ್ದಾರೆ’, ಎಂಬ ವಿಚಾರದಿಂದ ನಾನು ನೃತ್ಯ ಮಾಡಿದೆನು. ಈ ನೃತ್ಯದ ಪ್ರಯೋಗದ ನಂತರ ಪರಾತ್ಪರ ಗುರು ಡಾಕ್ಟರರು ನನಗೆ, ”ಆಧ್ಯಾತ್ಮಿಕ ತೊಂದರೆಯಿಂದಾಗಿ ನೀನು ನೃತ್ಯವನ್ನು ಮಾಡುತ್ತಿರುವೆ’’, ಎಂದು ಹೇಳಿದರು. ಅವರು ನನ್ನ ಗಮನಕ್ಕೆ ಇದನ್ನು ತಂದು ಕೊಟ್ಟಾಗ ನನಗೆ ಮೊದಲು ಅದನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ. ನನ್ನ ಮನಸ್ಸಿನಲ್ಲಿ ‘ನಾನು ನೃತ್ಯವನ್ನು ಸಂಪೂರ್ಣ ಪವಿತ್ರ ಭಾವನೆಯಿಂದ ಮಾಡುತ್ತಿದ್ದು ನಾನು ‘ಉಪಾಸನೆ ಮತ್ತು ಸಾಧನೆ’ ಈ ಭಾವದಿಂದ ನೃತ್ಯ ಮಾಡುತ್ತೇನೆ’, ಎಂಬ ವಿಚಾರ ಬರುತ್ತಿತ್ತು. ಕ್ರಮೇಣ ನನ್ನ ಮನಸ್ಸಿನ ಈ ವಿಚಾರವನ್ನು ಗುರುದೇವರೇ (ಪರಾತ್ಪರ ಗುರು ಡಾ. ಆಠವಲೆಯವರೇ) ದೂರ ಮಾಡಿದರು.
೩ ಆ. ”ಸಾಧನೆಯನ್ನು ಮಾಡದಿದ್ದರೆ, ಈ ಜನ್ಮದಲ್ಲಿ ಮತ್ತು ಮುಂದಿನ ಜನ್ಮದಲ್ಲಿಯೂ ದುಃಖವನ್ನು ಭೋಗಿಸುತ್ತಿದ್ದಳು’’, ಎಂದು ಪರಾತ್ಪರ ಗುರು ಡಾಕ್ಟರರು ಹೇಳುವುದು : ನೃತ್ಯದ ಪ್ರಯೋಗವನ್ನು ನೋಡಲು ಬಹಳಷ್ಟು ಸಾಧಕರು ಬರುತ್ತಿದ್ದರು. ನನ್ನ ನೃತ್ಯದಲ್ಲಿನ ನೈಪುಣ್ಯ ಮತ್ತು ಸಹಜತೆಯನ್ನು ನೋಡಿ ಓರ್ವ ಸಾಧಕನು ನನ್ನ ಎದುರೇ ಪರಾತ್ಪರ ಗುರು ಡಾಕ್ಟರರಲ್ಲಿ, ”ಇವಳು ಸಾಧನೆಯನ್ನು ಮಾಡದಿದ್ದರೆ, ನೃತ್ಯಾಂಗನೆಯಾಗುತ್ತಿದ್ದಳೇ ?’’ ಎಂದು ಕೇಳಿದನು.
ಆಗ ಪರಾತ್ಪರ ಗುರು ಡಾಕ್ಟರರು, ”ಸಾಧನೆಯನ್ನು ಮಾಡದಿದ್ದರೆ, ಈ ಜನ್ಮದಲ್ಲಿ ಮತ್ತು ಮುಂದಿನ ಜನ್ಮದಲ್ಲಿಯೂ ಇವಳು ದುಃಖವನ್ನು ಅನುಭವಿಸುತ್ತಿದ್ದಳು’’, ಎಂದು ಹೇಳಿದರು. ಆಗ ನನಗೆ ‘ವೈಯಕ್ತಿಕ ಭಾವ-ಭಾವನೆಗಳಿಗೆ ಮಹತ್ವವಿರುವುದಿಲ್ಲ. ‘ನಾನು ದೇವರಿಗಾಗಿ ನೃತ್ಯ ಮಾಡುತ್ತೇನೆ’, ಈ ವಿಚಾರಗಳಿಗೆ ಯಾವುದೇ ಅರ್ಥವಿಲ್ಲ. ಸ್ಥಳ-ಕಾಲ ಅಂದರೆ ವ್ಯಕ್ತಿ ಮತ್ತು ಕಾಲವು ಅನುಕೂಲಕರವಾಗಿರಬೇಕು. ಸಂಕಟಕಾಲದಲ್ಲಿ ಸಾಧನೆ ಇಲ್ಲದಿದ್ದರೆ, ಯೋಗ್ಯ ಕೃತಿಗಳ ಅಪಲಾಭವಾಗುತ್ತದೆ’, ಎಂಬುದು ತಿಳಿಯಿತು.
೪. ಒಂದು ವರ್ಷ ಪೂರ್ತಿ ಪ.ಪೂ. ಭಕ್ತರಾಜ ಮಹಾರಾಜರ ಭಜನೆಗಳಿಗನುಸಾರ ನೃತ್ಯ ಮಾಡುವುದು
೪ ಅ. ೨೦೦೭ ರಲ್ಲಿ ಒಂದು ವರ್ಷ ಪ.ಪೂ ಭಕ್ತರಾಜ ಮಹಾರಾಜರು ರಚಿಸಿ, ಸಂಗೀತ ಕೊಟ್ಟಿರುವ ಭಜನೆಗಳ ಆಧಾರದಲ್ಲಿ ನೃತ್ಯ ಮಾಡುವುದು : ರಾಮನಾಥಿ ಆಶ್ರಮದಲ್ಲಿ ನಡೆದ ಪ್ರಯೋಗದಲ್ಲಿ ‘ಪ.ಪೂ. ಭಕ್ತರಾಜ ಮಹಾರಾಜರ (ಪ.ಪೂ ಬಾಬಾ) ಭಜನೆಗಳಲ್ಲಿ ಅತ್ಯಧಿಕ ಚೈತನ್ಯವಿದೆ ಮತ್ತು ಅವುಗಳಿಂದ ಚೈತನ್ಯ ಸಿಗುತ್ತದೆ’, ಎಂಬ ನಿಷ್ಕರ್ಷ ಹೊರಟಿತ್ತು. ಆದುದರಿಂದ ಮುಂದಿನ ಸಂಪೂರ್ಣ ೧ ವರ್ಷ ನಾನು ಪ.ಪೂ ಬಾಬಾ ಇವರು ಬರೆದ ಸಂಗೀತ ಸಂಯೋಜನೆ ಮಾಡಿದ ಭಜನೆಗಳ ಆಧಾರದಲ್ಲಿ ನೃತ್ಯ ಮಾಡಿದೆನು. ೨೦೦೮ ರಲ್ಲಿ ನಾನು ರಾಮನಾಥಿ ಆಶ್ರಮಕ್ಕೆ ಬಂದೆನು. ಆಗ ಬಹಳಷ್ಟು ಸಾಧಕರು ‘ನಿನ್ನ ಆಧ್ಯಾತ್ಮಿಕ ತೊಂದರೆ ಕಡಿಮೆಯಾಗಿದೆ’, ಎಂದು ನನಗೆ ಹೇಳಿದರು.
೪ ಆ. ಪರಾತ್ಪರ ಗುರು ಡಾ. ಆಠವಲೆಯವರು ‘ಕೆಟ್ಟ ಶಕ್ತಿಯು ಸ್ವಭಾವದೋಷಗಳ ದುರ್ಲಾಭ ಪಡೆದು ತನ್ನ ಸಾಧನೆಯನ್ನು ಹೆಚ್ಚಿಸಿಕೊಂಡು ಪ.ಪೂ. ಭಕ್ತರಾಜ ಮಹಾರಾಜರ ಭಜನೆಗಳಿಗನುಸಾರ ನೃತ್ಯ ಮಾಡುತ್ತದೆ’, ಎಂದು ಹೇಳಿ ಸ್ವಭಾವದೋಷಗಳನ್ನು ಕಂಡುಹಿಡಿದು ಅವುಗಳಿಗೆ ಪರಿಹಾರ ಕಂಡುಹಿಡಿಯಲು ಹೇಳುವುದು :
ಒಂದು ಸಲ ನನ್ನ ತಂದೆಯವರು ಪರಾತ್ಪರ ಗುರು ಡಾಕ್ಟರರಿಗೆ, ”ಪ.ಪೂ ಬಾಬಾರವರ ಭಜನೆಗಳನ್ನು ಕೇಳಿ ಇವಳು ನೃತ್ಯ ಮಾಡುತ್ತಾಳೆ’’, ಎಂದು ಹೇಳಿದರು. ಪರಾತ್ಪರ ಗುರು ಡಾಕ್ಟರರು ನನಗೆ, ‘ಅದರಿಂದ ನಿನ್ನ ಆಧ್ಯಾತ್ಮಿಕ ತೊಂದರೆ ಹೆಚ್ಚಾಗುತ್ತದೆ. ಅದನ್ನು ನಿಲ್ಲಿಸು’’, ಎಂದು ಹೇಳಿದರು. ಅದಕ್ಕೆ ನಾನು ”ನಾನು ಬಾಬಾರವರ ಭಜನೆಗಳನ್ನು ಕೇಳಿ ಉಪಾಯವೆಂದು ನೃತ್ಯ ಮಾಡುತ್ತೇನೆ’’, ಎಂದು ಹೇಳಿದೆನು.
ಆಗ ಅವರು, ”ಅದರಿಂದ ಕೆಟ್ಟ ಶಕ್ತಿಯು ತನ್ನ ಸಾಧನೆಯನ್ನು ಹೆಚ್ಚಿಸಿಕೊಳ್ಳುತ್ತದೆ ಮತ್ತು ನಂತರ ನೃತ್ಯ ಮಾಡುತ್ತದೆ ಮತ್ತು ಕೆಲವು ದಿನಗಳ ನಂತರ ಪುನಃ ಸಾಧನೆಯನ್ನು ಹೆಚ್ಚಿಸಿಕೊಳ್ಳುತ್ತದೆ ಮತ್ತು ಪುನಃ ನೃತ್ಯ ಮಾಡುತ್ತದೆ, ಹೀಗೆ ಈ ಚಕ್ರವಿದೆ. ‘ಕೆಟ್ಟ ಶಕ್ತಿಯು ನಿನ್ನ ಯಾವ ಸ್ವಭಾವದೋಷಗಳ ದುರ್ಲಾಭ ಪಡೆಯುತ್ತದೆ ?’, ಎಂದು ನೋಡಿ ಅದಕ್ಕೆ ಪರಿಹಾರ ಕಂಡು ಹಿಡಿಯಲು ಕಲಿ’’, ಎಂದು ಹೇಳಿದರು. ನನ್ನ ಈ ತೊಂದರೆ ದೂರವಾಗಬೇಕಾಗಿದ್ದರೆ ನಾನು ತಂದೆಯವರು ಹೇಳಿದಂತೆ ಕೇಳಬೇಕು’’ ಎಂದು ಪರಾತ್ಪರ ಗುರು ಡಾಕ್ಟರರು ಹೇಳಿದರು.
೫. ಸಾಧನೆಯಲ್ಲಿ ಆನಂದ ಸಿಗತೊಡಗಿದಾಗ ಮಾಯಾವಿ ಸುಖದ ಸೆಳೆತ ಕಡಿಮೆಯಾಗುವುದು
‘ನೃತ್ಯವೆಂದರೆ ನಮ್ಮನ್ನು ವ್ಯಕ್ತ ಮಾಡುವುದು’, ಎಂದು ನನಗೆ ಅನಿಸುತ್ತಿತ್ತು. ನಾನು ಸರಿಯಾದ ಪದ್ಧತಿಯಲ್ಲಿ, ಸರಿಯಾದ ಸಮಯದಲ್ಲಿ ನನ್ನನ್ನು ನಾನು ವ್ಯಕ್ತಪಡಿಸಲು ಸಾಧ್ಯವಾಗುತ್ತಿರಲಿಲ್ಲ. ನನಗೆ ಶಬ್ದಗಳ ಮೂಲಕ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ಬರುವುದಿಲ್ಲ ಮತ್ತು ಮುಖ್ಯವೆಂದರೆ ಅದರಲ್ಲಿ ನನಗೆ ಆನಂದ ಸಿಗುವುದಿಲ್ಲ. ಬಹುಶಃ ಅದರಿಂದ ಕೃಪಾಳು ಗುರುದೇವರು ನನಗೆ ಲೇಖನಗಳನ್ನು ಹಿಂದಿ ಭಾಷೆಯಲ್ಲಿ ಅನುವಾದ ಮಾಡುವ
ಸೇವೆಯನ್ನು ನೀಡಿದರು. ಶಬ್ದಗಳ ಈ ವಿಶ್ವದಲ್ಲಿ ಮುಳುಗ ತೊಡಗಿದಾಗ ‘ನನ್ನ ನೃತ್ಯ ಮಾಡುವುದು’ ನಿಧಾನವಾಗಿ ಕಡಿಮೆ ಯಾಗತೊಡಗಿತು. ಸಾಧನೆಯಲ್ಲಿ ನನಗೆ ಆನಂದ ಸಿಗತೊಡಗಿದಾಗ ನನ್ನ ಈ ಮಾಯಾವಿ ಸುಖದ ಸೆಳೆತ ಕಡಿಮೆಯಾಯಿತು.
೬. ‘ಪರಾತ್ಪರ ಗುರು ಡಾಕ್ಟರರು ಏನು ಹೇಳುವರೋ, ಅದರಿಂದ ನನ್ನ ಸಾಧನೆಯಾಗಲಿದೆ’, ಎಂಬ ದೃಢ ಶ್ರದ್ಧೆ ಮನಸ್ಸಿನಲ್ಲಿದ್ದುದರಿಂದ ನೃತ್ಯದ ವಿಚಾರ ಪುನಃ ಮನಸ್ಸಿನಲ್ಲಿ ಬಾರದಿರುವುದು
ಒಂದು ಸಲ ಸತ್ಸಂಗದಲ್ಲಿ ಸಾಧಕರು ಪರಾತ್ಪರ ಗುರು ಡಾಕ್ಟರರಿಗೆ ನೃತ್ಯದ ಈ ಸಂದರ್ಭದ ಬಗ್ಗೆ ಕೇಳಿದರು; ಆದರೆ ನನಗೆ ‘ಈ ಬಗ್ಗೆ ಏನಾದರೂ ಕೇಳಬೇಕು’, ಎಂದು ಎಂದಿಗೂ ಅನಿಸಲಿಲ್ಲ. ‘ನನಗೆ ಅದು ಆವಶ್ಯಕವಿಲ್ಲದಿರಬಹುದು ಎಂದು ಪರಾತ್ಪರ ಗುರು ಡಾಕ್ಟರರು ನನಗೆ ‘ಸಾಧನೆ’ಯೆಂದು ನೃತ್ಯ ಮಾಡಲು ಎಂದಿಗೂ ಹೇಳಲಿಲ್ಲ. ನನ್ನ ಮಾರ್ಗ ಬೇರೆಯಾಗಿರಬಹುದು. ಅವರು ಏನು ಹೇಳುವರೋ, ಅದು ನನ್ನ ಸಾಧನೆಯಾಗಿದೆ’, ಎಂದು ನನಗೆ ಅನಿಸಿತು.
೭. ೨೦೧೭ ರಲ್ಲಿ ರಾಮನಾಥಿ ಆಶ್ರಮದಲ್ಲಿ ಪುನಃ ನೃತ್ಯದ ಪ್ರಯೋಗಗಳು ಆರಂಭವಾಗುವುದು, ಆಗ ಪುನಃ ಮನಸ್ಸಿನಲ್ಲಿ ನೃತ್ಯದ ವಿಚಾರಗಳು ತೀವ್ರವಾಗುವುದು
ಆಗ ನನ್ನ ಮನಸ್ಸಿನಲ್ಲಿ ನೃತ್ಯ ಮಾಡುವ ವಿಚಾರಗಳು ತೀವ್ರವಾಗಿ ಬರತೊಡಗಿದವು. ನಾನು ಒಬ್ಬರಿಬ್ಬರಿಗೆ ಇದರ ಬಗ್ಗೆ ಹೇಳಿದೆನು. ಇದೇ ಕಾಲಾವಧಿಯಲ್ಲಿ ಬೇರೆ ‘ಏನು ಮಾಡಿದರೂ ಆನಂದ ಸಿಗದಾಯಿತು’.
೮. ನಕಾರಾತ್ಮಕ ವಿಚಾರಗಳು ಬಂದಾಗ ದೇವರು ಸೂಚಿಸಿದ ಸಕಾರಾತ್ಮಕ ವಿಚಾರ ಮತ್ತು ನೃತ್ಯ ಮಾಡುವ ವಿಚಾರಗಳ ಮೇಲೆ ಜಯ ಸಾಧಿಸುವುದು !
೮ ಅ. ನೃತ್ಯದ ವಿಚಾರದಿಂದ ಮನಸ್ಸು ಅಸ್ವಸ್ಥವಾದಾಗ ‘ದೇವರು ಪರಿಸ್ಥಿತಿಯಿಂದ ಪಾರಾಗಲು ಕಲಿಸುತ್ತಿದ್ದಾನೆ’, ಎಂಬ ಸಕಾರಾತ್ಮಕ ವಿಚಾರ ಬರುವುದು : ನನಗೆ, ‘ನಾನು ಪುನಃ ಮೂಲ ಸ್ಥಿತಿಗೆ ಮರಳಿದ್ದೇನೆ. ನಾನು ಇಲ್ಲಿಯವರೆಗೆ ಮಾಡಿದ ಸಾಧನೆ ಮತ್ತು ಎಲ್ಲ ಪ್ರಯತ್ನಗಳು ವ್ಯರ್ಥವಾದವು’, ಎಂದು ಅನಿಸಿತು. ಆಗ, ‘ದೇವರು ನನಗೆ ಚಂದ್ರನ ಹದಿನಾರನೇ ಕಲೆಯನ್ನು ಕಲಿಸುತ್ತಿದ್ದಾನೆ. ಹದಿನೈದು ದಿನಗಳ ಕಾಲ ಚಂದ್ರನು ಬೆಳೆಯುತ್ತಾನೆ ಮತ್ತು ನಂತರ ಅಮಾವಾಸ್ಯೆಯವರೆಗೆ ಕ್ಷೀಣಿಸುತ್ತಾನೆ. ನಂತರ ಅವನು ಹೊಸ ತೇಜಸ್ಸಿನಿಂದ ಬೆಳೆಯುತ್ತಾನೆ ಮತ್ತು ಹೊಳೆಯುತ್ತಾನೆ. ಇದರಿಂದ ದೇವರು ಈ ಪರಿಸ್ಥಿತಿಯಿಂದ ಪಾರಾಗಲು ಕಲಿಸುತ್ತಿದ್ದಾನೆ’ ಎಂದು ಅನಿಸಿತು.
೮ ಆ. ‘ಕಲೆಗಿಂತ ವಿದ್ಯೆಯು ಶ್ರೇಷ್ಠವಾಗಿದೆ’, ಎಂಬ ವಿಚಾರ ಬಂದು ಸಕಾರಾತ್ಮಕವಾಗಿರಲು ಸಾಧ್ಯವಾಗುವುದು : ‘ನನ್ನ ಜೀವನದಲ್ಲಿ ಯಾವುದೇ ಕಲೆ ಉಳಿದಿಲ್ಲ’, ಎಂಬ ನಿರಾಶೆಯ ವಿಚಾರ ಮನಸ್ಸಿನಲ್ಲಿ ಬಂದಾಗ ‘ಕಲೆಗಿಂತ ವಿದ್ಯೆ ಶ್ರೇಷ್ಠವಾಗಿದೆ, ದೇವರು ನನಗೆ ಅಧ್ಯಾತ್ಮವಿದ್ಯಾ ವಿದ್ಯಾನಾಮ |’ (ಶ್ರೀಮದ್ಭಗವದ್ಗೀತೆ, ಅಧ್ಯಾಯ ೧೦, ಶ್ಲೋಕ ೩೨), ಅಂದರೆ ಎಲ್ಲ ವಿದ್ಯೆಗಳಲ್ಲಿ ಶ್ರೇಷ್ಠವಾದ ಅಧ್ಯಾತ್ಮವಿದ್ಯೆಯನ್ನು ಕಲಿಸುತ್ತಿದ್ದಾನೆ. ಇದು ಎಲ್ಲ ಬಂಧನಗಳಿಂದ ಮುಕ್ತ ಮಾಡುವ ವಿದ್ಯೆಯಾಗಿದೆ.
೯. ಕೃತಜ್ಞತೆ
ನನ್ನ ಮನಸ್ಸಿಲ್ಲಿ ನಕಾರಾತ್ಮಕ ವಿಚಾರಗಳು ಬಂದರೆ, ದೇವರು ತಕ್ಷಣ ಸಕಾರಾತ್ಮಕ ವಿಚಾರವನ್ನು ಸೂಚಿಸಿದನು. ಹೇ ಪ್ರಭು, ಪರಿಹಾರೋಪಾಯ ಮಾಡಿದುದರಿಂದ ನಕಾರಾತ್ಮಕ ವಿಚಾರಗಳು ದೂರವಾಗಿ ಆ ವಿಚಾರಗಳು ಈಗ ಕಡಿಮೆಯಾಗಿವೆ. ‘ದೇವರು ನನ್ನನ್ನು ಮಾಯಾವಿ ಸುಖದಿಂದ ಶಾಶ್ವತ ಆನಂದದ ಕಡೆಗೆ ಕರೆದೊಯ್ಯುತ್ತಿದ್ದಾನೆ’, ಇದಕ್ಕಾಗಿ ಅವನ ಚರಣಗಳಲ್ಲಿ ಕೃತಜ್ಞತೆಗಳು !’
೧೦. ಪ್ರಾರ್ಥನೆ
‘ನವಿಲು ನೃತ್ಯ ಮಾಡುವಾಗಲೂ ಅಳುತ್ತದೆ ಮತ್ತು ರಾಜಹಂಸವು ಸಾಯುವಾಗಲೂ ಹಾಡುತ್ತದೆ’, ಎಂದು ಹೇಳುತ್ತಾರೆ. ನಾನು ನೃತ್ಯ ಮಾಡುತ್ತಿದ್ದರೆ, ಸುಖ-ದುಃಖದಲ್ಲಿ ಸಿಲುಕುತ್ತಿದ್ದೆ. ಈಗ ದೇವರು ನನಗೆ ಅವನ ಲೀಲೆಯನ್ನು ಸ್ತುತಿಸುವ ಅವಕಾಶ ನೀಡಿದ್ದಾನೆ. ‘ನನ್ನ ಕೊನೆಯ ಉಸಿರಿನವರೆಗೂ ದೇವರ ಸ್ತುತಿಯನ್ನು ಮಾಡುವ ಭಾಗ್ಯವು ಲಭಿಸಲಿ’, ಇದೇ ದೇವರ ಚರಣಗಳಲ್ಲಿ ಪ್ರಾರ್ಥನೆ !’
– ಕು. ನಿಧಿ ದೇಶಮುಖ, ಸನಾತನ ಆಶ್ರಮ, ರಾಮನಾಥಿ, ಗೋವಾ.
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !