ಪಹಲ್ಗಾಮ್ ಭಯೋತ್ಪಾದಕ ದಾಳಿಯ ಪರಿಣಾಮ

ಜೈಪುರ – ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ದೇಶಾದ್ಯಂತ ಪಾಕಿಸ್ತಾನದ ವಿರುದ್ಧ ಆಕ್ರೋಶದ ಅಲೆ ಎದ್ದಿದೆ. ಇದರ ಒಂದು ಉದಾಹರಣೆ ರಾಜಸ್ಥಾನದಲ್ಲಿ ಕಂಡುಬಂದಿದೆ. ರಾಜಸ್ಥಾನದ ರಾಜಧಾನಿ ಜೈಪುರದ ಸಿಹಿ ವ್ಯಾಪಾರಿಗಳು ಸಿಹಿತಿಂಡಿಗಳಿಂದ ‘ಪಾಕ್ ಪದವನ್ನು ತೆಗೆದುಹಾಕಲು ನಿರ್ಧರಿಸಿದ್ದಾರೆ. ಈ ನಿರ್ಧಾರಕ್ಕಾಗಿ ಜೈಪುರದ ಸಿಹಿ ವ್ಯಾಪಾರಿಗಳನ್ನು ಎಲ್ಲೆಡೆ ಶ್ಲಾಘಿಸಲಾಗುತ್ತಿದೆ.
೧. ಜೈಪುರದ ಜನರಿಗೆ ಸಿಹಿ ತಿಂಡಿಗಳನ್ನು ತಿನ್ನುವ ಅಭ್ಯಾಸ ಹೆಚ್ಚಿದೆ. ಇದರಿಂದ ನಗರದಲ್ಲಿ ನೂರಾರು ಸಿಹಿ ಅಂಗಡಿಗಳಿವೆ. ಜೈಪುರದ ಎಲ್ಲಾ ಪ್ರಸಿದ್ಧ ಸಿಹಿತಿಂಡಿಗಳಿಗೆ ‘ಪಾಕ್’ ಎಂಬ ಪದವನ್ನು ಸೇರಿಸಲಾಗುತ್ತದೆ. ‘ಗೋಂಡ್‌ಪಾಕ್’, ‘ಮೈಸೂರ್‌ಪಾಕ್’, ‘ಮಾವಾಪಾಕ್’, ‘ಅಂಜೀರ್‌ಪಾಕ್’, ‘ಕಾಜುಪಾಕ್’, ‘ದೇಸಿಪಾಕ್’ ಇವು ಈ ಸಿಹಿತಿಂಡಿಗಳ ಹೆಸರುಗಳಿದ್ದವು. ಇನ್ನು ಮುಂದೆ ಈ ಸಿಹಿತಿಂಡಿಗಳಿಗೆ ‘ಪಾಕ್’ ಬದಲಿಗೆ ‘ಶ್ರೀ’ ಎಂಬ ಪದವನ್ನು ಸೇರಿಸಲಾಗುವುದು. ಇದರಿಂದ ‘ಗೋಂಡ್‌ಪಾಕ್’ ಹೆಸರನ್ನು ‘ಗೋಂಡ್‌ಶ್ರೀ’ ಎಂದು ಬದಲಾಯಿಸಲಾಗಿದೆ. ‘ಮೈಸೂರ್‌ಪಾಕ್’ ಹೆಸರನ್ನು ‘ಮೈಸೂರ್‌ಶ್ರೀ’ ಎಂದು ಬದಲಾಯಿಸಲಾಗಿದೆ. ಇದರಿಂದ ಗ್ರಾಹಕರೂ ಕೂಡಾ ಈ ಉಪಕ್ರಮವನ್ನು ಶ್ಲಾಘಿಸಿದ್ದಾರೆ.
೨. ‘ಪಾಕ್’ ಎಂಬ ಪದವನ್ನು ಹೊಂದಿರುವ ಯಾವುದೇ ಸಿಹಿ ತಿಂಡಿಯನ್ನು ನಾವು ತಿನ್ನುವುದಿಲ್ಲ ಎಂದು ಜೈಪುರದ ಗ್ರಾಹಕರು ನಿರ್ಧರಿಸಿದ್ದಾರೆ. ಆದ್ದರಿಂದ ಜೈಪುರದ ವ್ಯಾಪಾರಿಗಳ ಈ ಉಪಕ್ರಮವು ಶೀಘ್ರದಲ್ಲೇ ದೇಶದ ಇತರ ಭಾಗಗಳಲ್ಲಿಯೂ ಅನುಸರಿಸಲ್ಪಡುತ್ತದೆ ಎಂದು ತೋರುತ್ತಿದೆ.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !