
ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ 83ನೇ ಜನ್ಮೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಮೇ 17 ರಿಂದ 19 ರವರೆಗೆ ಗೋವಾದ ಫರ್ಮಾಗುಡಿಯಲ್ಲಿರುವ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ನೆರವೇರಿತು. ಇದಕ್ಕೆ ಭಾರತದಾದ್ಯಂತ ವ್ಯಾಪಕ ಪ್ರಚಾರ ದೊರೆಯಿತು; ಆದರೆ ಗೋವಾದ ಕೆಲವು ಮಾಧ್ಯಮಗಳು ಇದರ ಬಗ್ಗೆ ಟೀಕಿಸಿ, ಸನಾತನ-ದ್ವೇಷವನ್ನು ತಣಿಸಿಕೊಂಡವು. ಗೋವಾದ ‘ದ ಗೋವನ್’ ಇಂಗ್ಲಿಷ್ ವೃತ್ತಪತ್ರಿಕೆ ಮೇ 18 ರಂದು ಪ್ರಕಟವಾದ ತನ್ನ ಸಂಪಾದಕೀಯದಲ್ಲಿ ಸನಾತನ ಸಂಸ್ಥೆಯನ್ನು ಟೀಕಿಸಿದೆ. ಅದರ ಖಂಡನೆ ಇಲ್ಲಿದೆ.
1. ಕಾರ್ಯಕ್ರಮಕ್ಕೆ ಗೋವಾ ಮುಖ್ಯಮಂತ್ರಿಗಳು ಉಪಸ್ಥಿತರಿದ್ದರಿಂದ ‘ದ ಗೋವನ್’ಗೆ ಹೊಟ್ಟೆ ನೋವು !
ಟೀಕೆ: ಸನಾತನ ಸಂಸ್ಥೆಯ ಸಂಸ್ಥಾಪಕರಾದ ಜಯಂತ ಅಠವಲೆಯವರ 83 ನೇ ಜನ್ಮೋತ್ಸವದ ನಿಮಿತ್ತ ಆಯೋಜಿಸಲಾಗಿದ್ದ ಸನಾತನ ಸಂಸ್ಥೆಯ 25ನೇ ವಾರ್ಷಿಕೋತ್ಸವ ಸಮಾರಂಭಕ್ಕೆ ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತರವರು ಶನಿವಾರ ಹಾಜರಿದ್ದರು. ಇಬ್ಬರು ಸಚಿವರು, ಉತ್ತರ ಗೋವಾದ ಸಂಸದರು ಹಾಗೂ ರಾಜ್ಯದ ಭಾಜಪ ಅಧ್ಯಕ್ಷರು ಸೇರಿದಂತೆ ಸಮಗ್ರ ಸರಕಾರಿ ಅಧಿಕಾರಿಗಳೊಂದಿಗೆ ಸಾವಂತರವರ ಉಪಸ್ಥಿತಿಯು ಬಹುಶಃ ಗೋವಾ ಸರಕಾರವು ತೀವ್ರ ಬಲಪಂಥೀಯ ಸಿದ್ಧಾಂತದ ಸಂಘಟನೆಗೆ ನೀಡಿದ ಮೊದಲ ಅಧಿಕೃತ ಮಾನ್ಯತೆಯಾಗಿದೆ. ಅಷ್ಟೇ ಅಲ್ಲದೆ, ಪ್ರಮೋದ ಸಾವಂತರವರು ಸನಾತನ ಸಂಸ್ಥೆಯು ಜಗತ್ತಿನಾದ್ಯಂತ ಮಾಡುತ್ತಿರುವ ಕಾರ್ಯವನ್ನು ತುಂಬು ಹೃದಯದಿಂದ ಶ್ಲಾಘಿಸಿದರು.
ಖಂಡನೆ:
1. ಸನಾತನ ಸಂಸ್ಥೆಯು ಆಧ್ಯಾತ್ಮ, ಸಮಾಜ ಸಹಾಯ, ರಾಷ್ಟ್ರ ರಕ್ಷಣೆ ಮತ್ತು ಧರ್ಮ ಜಾಗೃತಿಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂದು ಆಧ್ಯಾತ್ಮಿಕ ಸಂಸ್ಥೆಯಾಗಿದ್ದು, ಕಳೆದ 25 ವರ್ಷಗಳಿಂದ ಗೋವಾ ಸೇರಿದಂತೆ ಭಾರತದಾದ್ಯಂತ ಸಕ್ರಿಯವಾಗಿದೆ. ಈ ಸಂಸ್ಥೆ ಮಾಡಿದ ಕೆಲಸವನ್ನು ನೋಡಿಯೇ ಮುಖ್ಯಮಂತ್ರಿಗಳು ಮತ್ತು ಇತರ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನೀವು ಕೂಡ ‘ಬಲಪಂಥೀಯ ಸಿದ್ಧಾಂತದ ಸಂಸ್ಥೆ’ ಎಂದು ಸುಮ್ಮನೆ ಜಪಿಸುವುದಕ್ಕಿಂತ, ಸನಾತನ ಸಂಸ್ಥೆಯ ಕಾರ್ಯವನ್ನು ತಿಳಿದುಕೊಳ್ಳುವ ಕಷ್ಟವನ್ನು ತೆಗೆದುಕೊಳ್ಳಿರಿ.
2. ಸನಾತನ ಸಂಸ್ಥೆಯ ಕಾರ್ಯವು ವೈಶ್ವಿಕವಾಗಿದೆ. ಸನಾತನವು ಹೇಳುವ ಸಾಧನೆಯಿಂದ ಜಗತ್ತಿನಾದ್ಯಂತ ನೂರಾರು ಜನರ ಜೀವನವು ಉಜ್ವಲವಾಗಿದೆ; ಆದರೆ ಸನಾತನ- ದ್ವೇಷದಿಂದ ತುಂಬಿರುವ ‘ದಿ ಗೋವನ್’ ಗೆ ಹೊಟ್ಟೆ ನೋವು ಬಂದಿದೆ.

2. ನ್ಯಾಯಾಲಯಕ್ಕಿಂತ ತನ್ನನ್ನು ತಾನು ಶ್ರೇಷ್ಠವೆಂದು ಭಾವಿಸಿ ಸನಾತನ ಸಂಸ್ಥೆಯನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ ‘ದ ಗೋವನ್’!
ಟೀಕೆ: ಅದರ ಅನುಯಾಯಿಗಳು ಮತ್ತು ಮಾಜಿ ಅನುಯಾಯಿಗಳ ಮೇಲೆ ಆರೋಪಗಳನ್ನು ಮಾಡಲಾಗಿದೆ ಮತ್ತು ಕೆಲವು ಪ್ರಕರಣಗಳಲ್ಲಿ ಅವರನ್ನು ಹಿಂಸಾತ್ಮಕ ಕೃತ್ಯಗಳಲ್ಲಿ ಅಪರಾಧಿ ಎಂದು ತೀರ್ಮಾನಿಸಲಾಗಿದೆ, ಇದು ಸರಕಾರಗಳಿಗೆ ಈ ಸಂಘಟನೆಯಿಂದ ಅಂತರ ಕಾಯ್ದುಕೊಳ್ಳಲು ಸಹಾಯ ಮಾಡಿದೆ.
ಖಂಡನೆ: ಸನಾತನದ ಅನುಯಾಯಿಗಳು ಯಾವುದೇ ಹಿಂಸಾತ್ಮಕ ಕೃತ್ಯಗಳಲ್ಲಿ ದೋಷಿಗಳೆಂದು ಸಾಬೀತಾಗಿಲ್ಲ. ನ್ಯಾಯಾಲಯವು ಸನಾತನದ ಅನುಯಾಯಿಗಳನ್ನು ದೋಷಮುಕ್ತಗೊಳಿಸುವಾಗ ತನಿಖಾ ಏಜೆನ್ಸಿಗಳನ್ನು ತರಾಟೆಗೆ ತೆಗೆದುಕೊಂಡಿದೆ. ಲೇಖಕರು ನ್ಯಾಯಾಲಯದ ತೀರ್ಪುಗಳನ್ನು ಪರಿಶೀಲಿಸಬೇಕು !
3. ಸನಾತನ-ದ್ವೇಷದಿಂದಾಗಿ ಸನಾತನ ಸಂಸ್ಥೆಯನ್ನು ಪಾಕಿಸ್ತಾನಕ್ಕೆ ಹೋಲಿಸಿದ ‘ದ ಗೋವನ್’ !
ಟೀಕೆ: ನಿಸ್ಸಂದೇಹವಾಗಿ, ಈ ಸಂಘಟನೆಯು ಯಾವುದೇ ಹಿಂಸಾತ್ಮಕ ದಾಳಿಗಳಲ್ಲಿ ಭಾಗವಹಿಸಿರುವುದನ್ನು ನಿರಾಕರಿಸಿದೆ ಮತ್ತು ಅಪರಾಧಿಗಳೆಂದು ತೀರ್ಮಾನಿಸಲ್ಪಟ್ಟವರು ಈಗ ಅದಕ್ಕೆ ಸಂಬಂಧಿಸಿದವರಲ್ಲ ಅಥವಾ ಅದಕ್ಕೆ ಸಂಬಂಧಿಸಿದ ಎಲ್ಲರೂ ನಿರಪರಾಧಿಗಳೆಂದು ಬಿಡುಗಡೆಯಾಗಿದ್ದಾರೆ ಎಂದು ಹೇಳಿಕೊಂಡಿದೆ; ಭಾರತದಲ್ಲಿ ನಡೆದ ಪ್ರತಿಯೊಂದು ಭಯೋತ್ಪಾದಕ ದಾಳಿಯಲ್ಲೂ ಪಾಕಿಸ್ತಾನವು ತನ್ನ ಪಾತ್ರವನ್ನು ನಿರಾಕರಿಸಿದೆ. ಆದುದರಿಂದ, ಪಾಕಿಸ್ತಾನದಂತೆಯೇ, ಸನಾತನದ ಪ್ರತಿಯೊಂದು ನಿರಾಕರಣೆಯನ್ನು ವಸ್ತುನಿಷ್ಠವಾಗಿ ಪರಿಶೀಲಿಸಬೇಕು.
ಖಂಡನೆ: ಹಿಂಸಾತ್ಮಕ ಚಟುವಟಿಕೆಗಳಲ್ಲಿ ಸನಾತನ ಸಂಸ್ಥೆಯು ತನ್ನ ಮೇಲಿನ ಆರೋಪಗಳನ್ನು ತಿರಸ್ಕರಿಸುವುದು ಮತ್ತು ಪಾಕಿಸ್ತಾನವು ತನ್ನ ಮೇಲಿನ ಭಯೋತ್ಪಾದಕ ಚಟುವಟಿಕೆಗಳ ಆರೋಪಗಳನ್ನು ತಿರಸ್ಕರಿಸುವುದರ ನಡುವೆ ಭೂಮಿ-ಆಕಾಶದ ವ್ಯತ್ಯಾಸವಿದೆ. ಸನಾತನ ಸಂಸ್ಥೆಯು ಯಾವುದೇ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಭಾರತದ ಯಾವುದೇ ತನಿಖಾ ಸಂಸ್ಥೆಗಳಿಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ; ಆದರೆ ಪಾಕಿಸ್ತಾನವು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದೆ ಎಂಬುದಕ್ಕೆ ಭಾರತ ಸರಕಾರದ ಬಳಿ ಅನೇಕ ಪುರಾವೆಗಳಿವೆ. ಆದುದರಿಂದ, ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ ಮಾಡುವ ಒಂದು ಸಂಸ್ಥೆಯನ್ನು ಪಾಕಿಸ್ತಾನಕ್ಕೆ ಹೋಲಿಸುವುದು ‘ದ ಗೋವನ್’ನ ಬೌದ್ಧಿಕ ದಿವಾಳಿತನವಾಗಿದೆ !
4. ನ್ಯಾಯಾಲಯಕ್ಕಿಂತ ತನ್ನನ್ನು ತಾನು ಬುದ್ಧಿವಂತನೆಂದು ಭಾವಿಸುವ ‘ದ ಗೋವನ್’!
ಟೀಕೆ: ಕಾನೂನಿನ ದೃಷ್ಟಿಯಿಂದ ಸನಾತನ ಸಂಸ್ಥೆಯು ಬಾಂಬ್ ಸ್ಫೋಟಗಳು, ಅನೇಕ ಕೊಲೆಗಳು ಮತ್ತು ಭೂತಕಾಲದಲ್ಲಿ ನಡೆದ ಹಿಂಸಾತ್ಮಕ ಕೃತ್ಯಗಳಿಗೆ ಸಂಬಂಧಿಸಿದಂತೆ ಕೆಲವು ಮಟ್ಟಿಗೆ ನಕಾರಾತ್ಮಕತೆಯನ್ನು ಪ್ರತಿಪಾದಿಸಬಹುದು; ಆದರೆ ಸಾರ್ವಜನಿಕರ ಸ್ಮರಣೆಯು ಉಳಿದಿದೆ. ಪುರಾವೆಗಳ ಕೊರತೆಯಿಂದ ದೋಷಮುಕ್ತಗೊಳಿಸುವುದು ನಿರಪರಾಧಿತನದ ಪ್ರಮಾಣಪತ್ರವಲ್ಲ. ಕೊಲೆಯ ಪ್ರಕರಣದಲ್ಲಿ ಮುಖ್ಯ ಆರೋಪಿಯನ್ನು ದೋಷಮುಕ್ತಗೊಳಿಸಿದರೆ, ಇದರರ್ಥ ಕೊಲೆ ನಡೆದಿಲ್ಲ ಅಥವಾ ‘ಯಾರೂ’ ಕೊಲೆ ಮಾಡಿಲ್ಲ ಎಂದಲ್ಲ.
ಖಂಡನೆ: ಮಡಗಾಂವ್ ಸ್ಫೋಟದ ಪ್ರಕರಣದಲ್ಲಿ ‘ತನಿಖಾ ಸಂಸ್ಥೆಗಳಿಂದ ಸನಾತನವನ್ನು ಸಿಲುಕಿಸಲು ಪ್ರಯತ್ನಿಸಲಾಯಿತು’ ಎಂದು ತರಾಟೆಗೆ ತೆಗೆದುಕೊಳ್ಳಲಾಗಿದೆ. ‘ದ ಗೋವನ್’ ಇದನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದೆ ! ನ್ಯಾಯಾಧೀಶರ ಭೂಮಿಕೆಯಲ್ಲಿರುವ ಸಂಪಾದಕರಿಗೆ ನ್ಯಾಯವ್ಯವಸ್ಥೆಯ ಮೇಲೆ ನಂಬಿಕೆಯಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! ಪುರಾವೆಗಳ ಕೊರತೆಯಿಂದ ದೋಷಮುಕ್ತಗೊಳಿಸುವುದು ನಿರಪರಾಧಿತನದ ಪ್ರಮಾಣಪತ್ರವಲ್ಲ ಎಂದು ಹೇಳುವವರು, ‘ಹಿಂದೂ ಭಯೋತ್ಪಾದನೆ’ಯನ್ನು ತೋರಿಸಲು ಸನಾತನದ ಮೇಲೆ ಆರೋಪಿಸುವುದರ ಜೊತೆಗೆ ಸಾಧ್ವಿ ಪ್ರಜ್ಞಾಸಿಂಗ್, ಕರ್ನಲ್ ಪುರೋಹಿತ್ ಅವರಂತಹವರನ್ನು ಕೂಡ ಸಿಲುಕಿಸುವುದು ಮುಸಲ್ಮಾನಪರ ಷಡ್ಯಂತ್ರವಿತ್ತು ಎಂಬುದನ್ನು ಗಮನಿಸಬೇಕು.
5. ಗೋವಾದ ಯಾವುದೇ ಮಾಜಿ ಮುಖ್ಯಮಂತ್ರಿಗಳು ಸಂಸ್ಥೆಯು ಆಯೋಜಿಸಿದ ಕಾರ್ಯಕ್ರಮಗಳಿಗೆ ಹಾಜರಾಗಲಿಲ್ಲ ಅಥವಾ ವೇದಿಕೆಯಲ್ಲಿ ಕಾಣಿಸಲಿಲ್ಲ.
(ಆದ್ದರಿಂದ ಈಗಿನ ಮುಖ್ಯಮಂತ್ರಿಗಳು ಹಾಜರಾಗಬಾರದು ಎಂದಿದೆಯೇ ? ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರಿಗೆ ಇದು ಅರ್ಥವಾಗುವುದಿಲ್ಲವೇ ? – ಸಂಪಾದಕರು)
6. ಗೋಮಂತಕ ಭೂಮಿಯ ಮೌಲ್ಯಗಳ ಬಗ್ಗೆ ಕಾಳಜಿ ಹೊಂದಿರುವವರು ಗೋವಾದಲ್ಲಿ ನಡೆಯುತ್ತಿರುವ ಸಂಸ್ಕೃತಿಯ ಅಧಃಪತನದ ಬಗ್ಗೆ ಮಾತನಾಡಬೇಕು!
ಟೀಕೆ: ರಾಜ್ಯದ ಮುಖ್ಯಮಂತ್ರಿಯಾಗಿ ಸಂಸ್ಥೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಾವಂತರವರ ಉಪಸ್ಥಿತಿಯು ತಪ್ಪು ಸಂಕೇತವನ್ನು ನೀಡುತ್ತದೆ. ನಮ್ಮ ಧರ್ಮ, ಸಂಸ್ಕೃತಿ ಮತ್ತು ಸ್ಥಳೀಯ ಧಾರ್ಮಿಕ ಆಚರಣೆಗಳ ವೈವಿಧ್ಯತೆಗೆ ಪ್ರಾಮುಖ್ಯತೆ ನೀಡುವ ರಾಜ್ಯದಲ್ಲಿ, ಅಂತಹ ಮೌಲ್ಯಗಳಿಗೆ ಬೆದರಿಕೆಯೊಡ್ಡುವ ಜನರನ್ನು ಬೆಂಬಲಿಸುವುದಕ್ಕಿಂತ ಹೆಚ್ಚು ಅಪಮಾನಕಾರಿ ಸಂಗತಿ ಬೇರೊಂದಿಲ್ಲ.
ಖಂಡನೆ:
1. ಸಮಾಜ ಮತ್ತು ರಾಷ್ಟ್ರದ ಉನ್ನತಿಗಾಗಿ ಶ್ರಮಿಸುವ ಸಂಸ್ಥೆಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಹಾಜರಾಗುವುದು ಅವರ ಸಮಾಜ ಮತ್ತು ರಾಷ್ಟ್ರದ ಬಗೆಗಿನ ಕಾಳಜಿಯನ್ನು ತೋರಿಸುತ್ತದೆ.
2. ಗೋಮಂತಕ ಭೂಮಿಯ ನೀತಿ-ಮೌಲ್ಯಗಳ ಬಗ್ಗೆ ಕಾಳಜಿ ಹೊಂದಿರುವ ‘ದ ಗೋವನ್’ಗೆ ಮಾದಕವಸ್ತು ಕಳ್ಳಸಾಗಣೆ, ಅಸಾಂಸ್ಕೃತಿಕ ಕಾರ್ಯಕ್ರಮಗಳಿಂದಾಗುವ ಮೌಲ್ಯಗಳ ಅಧಃಪತನ, ಬಾಂಗ್ಲಾದೇಶಿ ನುಸುಳುಕೋರರ ಹೆಚ್ಚುತ್ತಿರುವ ಸಂಖ್ಯೆಯಿಂದ ಆಗುತ್ತಿರುವ ಗೋಮಂತಕ ಭೂಮಿಯ ಮೌಲ್ಯಗಳ ಅಧಪತನವು ಅಪಮಾನಕಾರಿಯಲ್ಲವೇ ?
3. ಹಳೆಯ ಗೋವಾದಲ್ಲಿನ ಶವಪ್ರದರ್ಶನವೂ ವಿವಾದಾತ್ಮಕವಾಗಿದೆ. ಕೆಲವರು ಅದನ್ನು ಭಯೋತ್ಪಾದಕರ ವೈಭವೀಕರಣ ಎಂದು ಕರೆಯುತ್ತಾರೆ. ಅಲ್ಲಿ ರಾಜ್ಯಮಟ್ಟದಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಒದಗಿಸಲಾಗುತ್ತದೆ. ಇದರ ಬಗ್ಗೆ ‘ದ ಗೋವನ್’ ಏನಾದರೂ ಹೇಳುತ್ತದೆಯೇ? ಅಥವಾ ಇದು ಸರಿಯೇ?
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ