ಅಮೇರಿಕದ ಮಧ್ಯಸ್ಥಿಕೆಯಲ್ಲಿ ಸೌದಿ ಅರೇಬಿಯಾದಲ್ಲಿ ಭಾರತದೊಂದಿಗೆ ಶಾಂತಿ ಮಾತುಕತೆ ನಡೆಯಬಹುದಂತೆ!- ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್

  • ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರ ಹಾಸ್ಯಾಸ್ಪದ ಹೇಳಿಕೆ!

  • ಯುನೈಟೆಡ್ ಅರಬ್ ಎಮಿರೇಟ್ಸ್ ಸ್ಥಳವನ್ನೂ ಸಹ ಸೂಚಿಸಿದ್ದಾರೆ!

ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್

ಇಸ್ಲಾಮಾಬಾದ್ (ಪಾಕಿಸ್ತಾನ) – ಭಾರತ ಮತ್ತು ಪಾಕಿಸ್ತಾನದ ನಡುವಿನ ಶಾಂತಿ ಮಾತುಕತೆ ಸೌದಿ ಅರೇಬಿಯಾದಲ್ಲಿ ನಡೆಯಬಹುದು. ಇದರಲ್ಲಿ ಅಮೇರಿಕ ಮಧ್ಯಸ್ಥಿಕೆ ವಹಿಸುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಹೇಳಿದ್ದಾರೆ. ‘ಪಾಕಿಸ್ತಾನ ಕದನವಿರಾಮಕ್ಕೆ ಬೇಡಿಕೆ ಇಟ್ಟಿರಲಿಲ್ಲ. ಒಂದು ವೇಳೆ ಪಾಕಿಸ್ತಾನ ಹಾಗೆ ಮಾಡಿದ್ದರೆ, ಇಡೀ ಜಗತ್ತಿಗೇ ತಿಳಿದಿರುತ್ತಿತ್ತು’ ಎಂದು ಅವರು ಸುಳ್ಳು ಹೇಳಿಕೆಯನ್ನು ನೀಡಿದರು.

ಶಹಬಾಜ್ ಷರೀಫ್ ಮಾತು ಮುಂದುವರೆಸಿ

. ಉಭಯ ದೇಶಗಳ ‘ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್ಸ್ (ಡಿ.ಜಿ.ಎಮ್.ಒ. – ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು) ನಡುವಿನ ಚರ್ಚೆಯಲ್ಲಿ, ಸಂಘರ್ಷ ಪ್ರಾರಂಭವಾಗುವ ಮೊದಲು ಮೇ ೭ ರಂದು ಉಭಯ ದೇಶಗಳ ಸೈನ್ಯಗಳು ಇದ್ದ ಸ್ಥಳಕ್ಕೆ ಹಿಂತಿರುಗುತ್ತವೆ ಎಂದು ಒಪ್ಪಿಕೊಳ್ಳಲಾಯಿತು.

. ಭಾರತ ಯುದ್ಧವನ್ನು ಪ್ರಾರಂಭಿಸಿತು, ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ೬ ಭಾರತೀಯ ವಿಮಾನಗಳನ್ನು ಹೊಡೆದುರುಳಿಸಿತು, ಅನೇಕ ಡ್ರೋನ್‌ಗಳನ್ನು ನಾಶಪಡಿಸಿತು ಮತ್ತು ‘ಎಸ್-೪೦೦’ ವಾಯು ರಕ್ಷಣಾ ವ್ಯವಸ್ಥೆಯನ್ನೂ ಸಹ ಗುರಿಪಡಿಸಿತು. ನಾವು ಇನ್ನಷ್ಟು ವಿಮಾನಗಳನ್ನು ಹೊಡೆದುರುಳಿಸಬಹುದಿತ್ತು; ಆದರೆ ನಾವು ಸಂಯಮ ವಹಿಸಿದೆವು. (ಏಟು ತಿಂದ ನಂತರ ಆತ್ಮವಿಶ್ವಾಸದಿಂದ ಸುಳ್ಳು ಹೇಳುವುದಕ್ಕೆ ಪಾಕಿಸ್ತಾನ ಒಂದು ಉತ್ತಮ ಉದಾಹರಣೆ! – ಸಂಪಾದಕರು)

. ಭಾರತದೊಂದಿಗಿನ ಸಂಘರ್ಷದಲ್ಲಿ ಪಾಕಿಸ್ತಾನ ಚೀನೀ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬಳಸಿಕೊಂಡಿತು. ಪಾಕಿಸ್ತಾನವು ಚೀನಾಕ್ಕೆ ‘ಮಾರ್ಕೆಟಿಂಗ್ ರಾಷ್ಟ್ರ’ ವಾಗಿದೆ. (ಚೀನಾದಿಂದ ಅನೇಕ ಬಾರಿ ಮೋಸಗೊಂಡ ನಂತರವೂ ಅದರ ಮುಂದೆ ಹೀನಾಯವಾಗಿರುವ ಪಾಕಿಸ್ತಾನದ ಬಗ್ಗೆ ಚೀನಾ ಕರುಣೆ ಇಟ್ಟುಕೊಂಡಿರುವುದು ಅಸತ್ಯವಾಗಿದೆ. ಸಹಜವಾಗಿ, ಬಡತನದಲ್ಲಿ ನರಳುತ್ತಿರುವ ಪಾಕಿಸ್ತಾನಕ್ಕೆ ಇದಕ್ಕಿಂತ ಬೇರೆ ಆಯ್ಕೆ ಯಾವುದಿದೆ? – ಸಂಪಾದಕರು)

ಯುದ್ಧದ ಸಮಯದಲ್ಲಿ ಇಸ್ರೇಲಿ ಸಿಬ್ಬಂದಿ ಭಾರತದಲ್ಲಿ ಉಪಸ್ಥಿತರಿದ್ದರು! – ಪಾಕಿಸ್ತಾನದ ಹೇಳಿಕೆ

ಯುದ್ಧದ ಸಮಯದಲ್ಲಿ ಇಸ್ರೇಲಿ ಸಿಬ್ಬಂದಿ ಭಾರತದಲ್ಲಿ ಉಪಸ್ಥಿತರಿದ್ದಾರೆಯೇ ಎಂದು ಷರೀಫ್ ಅವರನ್ನು ಕೇಳಿದಾಗ, ಇಸ್ರೇಲಿಗಳು ಭಾರತದಲ್ಲಿದ್ದರು ಎಂಬ ವರದಿಗಳಿವೆ ಎಂದು ಷರೀಫ್ ಹೇಳಿದರು. ಈ ಯುದ್ಧದಲ್ಲಿ ಇಸ್ರೇಲ್ ಭಾರತಕ್ಕೆ ದೊಡ್ಡ ಸಹಾಯ ಮಾಡಿದೆ.

ಸಂಪಾದಕೀಯ ನಿಲುವು

ಸೌದಿ ಅರೇಬಿಯಾ ಆಗಿರಲಿ ಅಥವಾ ಯುನೈಟೆಡ್ ಅರಬ್ ಎಮಿರೇಟ್ಸ್ ಇರಲಿ, ಯಾರೂ ಪಾಕಿಸ್ತಾನಕ್ಕೆ ಭಿಕ್ಷೆ ನೀಡುವುದಿಲ್ಲ. ಭಾರತದೊಂದಿಗೆ ನಿಕಟ ಸಂಬಂಧ ಹೊಂದಿರುವ ಯಾವುದೇ ದೇಶದ ಹೆಸರನ್ನು ಪಾಕಿಸ್ತಾನ ಹೇಳುತ್ತಿದ್ದರೆ, ಅದು ಅವರು ಕಂಡ ಹಗಲುಗನಸು. ಇಂತಹ ಅಪಕ್ವ ಮತ್ತು ಹಾಸ್ಯಾಸ್ಪದ ಹೇಳಿಕೆಗಳನ್ನು ಖಂಡಿಸಲು ಭಾರತ ಸಮಯ ವ್ಯರ್ಥ ಮಾಡಬಾರದು ಎಂದು ರಾಷ್ಟ್ರಪ್ರೇಮಿಗಳು ಭಾವಿಸುತ್ತಾರೆ!