ನೌಕಾಪಡೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಸುಪ್ರಿಂ ಕೋರ್ಟ್

ನವದೆಹಲಿ: ಮಹಿಳಾ ಅಧಿಕಾರಿಯೊಬ್ಬರಿಗೆ ಖಾಯಂ ನೇಮಕಾತಿ ನೀಡದ ಕಾರಣ ನೌಕಾಪಡೆಯ ಅಧಿಕಾರಿಗಳನ್ನು ಸರ್ವೋಚ್ಚ ನ್ಯಾಯಾಲಯವು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಾಲಯವು, “ಈಗ ಸಾಕು, ನೀವು ನಿಮ್ಮ ಅಹಂಕಾರ ಬಿಟ್ಟು, ನಿಮ್ಮ ದಾರಿಯನ್ನು ಸುಧಾರಿಸಿಕೊಳ್ಳಿರಿ,” ಎಂದು ಹೇಳಿದೆ. 2007ರ ಬ್ಯಾಚ್ ನ ಶಾರ್ಟ್ ಸರ್ವಿಸ್ ಕಮಿಷನ್ ಅಧಿಕಾರಿ ಸೀಮಾ ಚೌಧರಿ ಅವರ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಾಲಯವು, “ಸಂಬಂಧಪಟ್ಟ ಅಧಿಕಾರಿಗಳು ನ್ಯಾಯಾಲಯದ ಆದೇಶಗಳನ್ನು ದಮನಿಸಬಹುದು ಎಂದು ಭಾವಿಸಿದ್ದಾರೆಯೇ? ನೀವು ಯಾವ ರೀತಿಯ ಶಿಸ್ತಿನ ಸೇನೆಯಾಗಿದ್ದೀರಿ? ಮಹಿಳಾ ಅಧಿಕಾರಿಗೆ ಖಾಯಂ ನೇಮಕಾತಿ ನೀಡಲು ನಾವು ನಿಮಗೆ ಒಂದು ವಾರ ಸಮಯ ನೀಡುತ್ತೇವೆ. ಬೇಸಿಗೆ ರಜೆಯ ನಂತರ ನ್ಯಾಯಾಲಯಕ್ಕೆ ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರಿ ” ಎಂದು ಹೇಳಿದೆ.
ಏನಿದು ಪ್ರಕರಣ ?
ಸೀಮಾ ಚೌಧರಿ ಅವರನ್ನು 2007ರ ಆಗಸ್ಟ 6 ರಂದು ಭಾರತೀಯ ನೌಕಾಪಡೆಯ ನ್ಯಾಯಾಧೀಶ ಅಡ್ವೊಕೇಟ ಜನರಲ್ ಶಾಖೆಯಲ್ಲಿ ‘ಎಸ್ಎಸ್ಸಿ ಅಧಿಕಾರಿ’ಯಾಗಿ ನೇಮಿಸಲಾಯಿತು. 2009 ರಲ್ಲಿ ಅವರನ್ನು ಲೆಫ್ಟಿನೆಂಟ್ ಆಗಿ ಮತ್ತು 2012 ರಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿ ಬಡ್ತಿ ನೀಡಲಾಯಿತು. 2016 ಮತ್ತು 2018ರಲ್ಲಿ ಎರಡು ವರ್ಷಗಳ ಸೇವಾ ವಿಸ್ತರಣೆಯನ್ನು ನೀಡಲಾಯಿತು. 2020ರ ಆಗಸ್ಟ 5 ರಂದು, ಅವರ ಸೇವೆ 2021ರ ಆಗಸ್ಟ 5ರಿಂದ ಕೊನೆಗೊಳ್ಳಲಿದೆ ಎಂದು ಅವರಿಗೆ ತಿಳಿಸಲಾಯಿತು. ಈ ಆದೇಶದ ವಿರುದ್ಧ ಸೀಮಾ ಅವರು ಸರ್ವೋಚ್ಚನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ