Pakistan Army Chief Statement : ‘ಭಾರತದ ಅನಗತ್ಯ ಮತ್ತು ಹೇಡಿತನದ ದಾಳಿಯ ವಿರುದ್ಧ ಉಕ್ಕಿನ ಗೋಡೆಯಂತೆ ನಿಂತ ಹುತಾತ್ಮರಿಗೆ ಶ್ರದ್ಧಾಂಜಲಿ!’ (ಅಂತೆ)

ಪಾಕಿಸ್ತಾನ ಸೇನೆಯ ‘ಫೀಲ್ಡ್ ಮಾರ್ಷಲ್’ ಆದ ನಂತರ ಅಸೀಮ್ ಮುನೀರ್ ಹೇಳಿಕೆ

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅವರಿಗೆ ಬಡ್ತಿ ನೀಡಿ ‘ಫೀಲ್ಡ್ ಮಾರ್ಷಲ್’ ಆಗಿ ನೇಮಿಸಲಾಗಿದೆ. ಪಾಕಿಸ್ತಾನದ ಇತಿಹಾಸದಲ್ಲಿ ಸೇನಾ ಮುಖ್ಯಸ್ಥರೊಬ್ಬರು ಫೀಲ್ಡ್ ಮಾರ್ಷಲ್ ಆಗಿ ಬಡ್ತಿ ಪಡೆದಿರುವುದು ಇದು ಎರಡನೇ ಬಾರಿ. ಈ ಹಿಂದೆ ಅಯೂಬ್ ಖಾನ್ ಫೀಲ್ಡ್ ಮಾರ್ಷಲ್ ಆಗಿದ್ದರು. ಈ ಹುದ್ದೆಯಿಂದ ಯಾವುದೇ ಅಧಿಕಾರಿ ಎಂದಿಗೂ ನಿವೃತ್ತಿಯಾಗುವುದಿಲ್ಲ. ಮುನೀರ್ ಅವರನ್ನು ಗೌರವಿಸಲು ರಾವಲ್ಪಿಂಡಿಯ ಸೇನಾ ಪ್ರಧಾನ ಕಚೇರಿಯಲ್ಲಿ ಸಮಾರಂಭವನ್ನು ಆಯೋಜಿಸಲಾಗಿತ್ತು. ಸನ್ಮಾನದ ನಂತರ ಮುನೀರ್ ಮಾತನಾಡಿ, “ಈ ಸನ್ಮಾನವು ಇಡೀ ಪಾಕಿಸ್ತಾನಿ ಸಮಾಜಕ್ಕೆ ಮತ್ತು ಪಾಕಿಸ್ತಾನದ ಸಶಸ್ತ್ರ ಪಡೆಗಳಲ್ಲಿನ ಶೂರ ಪುರುಷರು ಮತ್ತು ಮಹಿಳೆಯರಿಗೆ, ವಿಶೇಷವಾಗಿ ಪಾಕಿಸ್ತಾನದ ವಿರುದ್ಧ ಭಾರತದ ಅನಗತ್ಯ, ಹೇಡಿತನದ ಮತ್ತು ಅಕ್ರಮ ದಾಳಿಯ ವಿರುದ್ಧ ಉಕ್ಕಿನ ಗೋಡೆಯಂತೆ ನಿಂತ ಹುತಾತ್ಮರಿಗೆ ಶ್ರದ್ಧಾಂಜಲಿಯಾಗಿದೆ” ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತದ ದಾಳಿಯಲ್ಲಿ ಸೋತ ನಂತರವೂ ಮುನೀರ್ ಅವರಿಗೆ ಬಡ್ತಿ ನೀಡಲಾಗಿದೆ ಎಂದರೆ, ಅಲ್ಲಿನ ವ್ಯವಸ್ಥೆ ಎಷ್ಟು ಹಾಸ್ಯಾಸ್ಪದವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಇಂತಹ ವ್ಯವಸ್ಥೆಯು ಭಾರತದ ಮೇಲೆ ಮಾಡುವ ಆರೋಪಗಳಿಗೆ ಯಾರೂ ಕಿವಿಗೊಡುವುದಿಲ್ಲ!