Pakistan should Hand Over terrorists in its country to India! : ಪಾಕಿಸ್ತಾನ ತನ್ನ ದೇಶದಲ್ಲಿರುವ ಭಯೋತ್ಪಾದಕರನ್ನು ಭಾರತಕ್ಕೆ ಒಪ್ಪಿಸಬೇಕು. ಭಾರತದ ರಾಯಭಾರಿ ಜೆ.ಪಿ. ಸಿಂಗ್

ಇಸ್ರೇಲ್ ನಲ್ಲಿನ ಭಾರತದ ರಾಯಭಾರಿ ಜೆ.ಪಿ. ಸಿಂಗ್ ಅವರ ಬೇಡಿಕೆ

ಭಯೋತ್ಪಾದಕ ಹಫೀಜ್ ಸಯೀದ್ ಮತ್ತು ಇಸ್ರೇಲ್‌ಗೆ ಭಾರತದ ರಾಯಭಾರಿ ಜೆ.ಪಿ.ಸಿಂಗ್

ಟೆಲ್ ಅವೀವ್ (ಇಸ್ರೇಲ) – ಪಾಕಿಸ್ತಾನದ ವಿರುದ್ಧ ಭಾರತದ ‘ಆಪರೇಷನ್ ಸಿಂದೂರ’ ತಾತ್ಕಾಲಿಕವಾಗಿ ನಿಂತಿದೆ; ಆದರೆ ಅದು ಕೊನೆಗೊಂಡಿಲ್ಲ. ಅಮೆರಿಕಾ ಮುಂಬಯಿ ಮೇಲಿನ ಭಯೋತ್ಪಾದಕ ದಾಳಿಯ ಮುಖ್ಯ ಸೂತ್ರಧಾರ ತಹವ್ವೂರ್ ಹುಸೇನ್ ರಾಣಾನನ್ನು ಭಾರತಕ್ಕೆ ಒಪ್ಪಿಸಿದಂತೆ, ಪಾಕಿಸ್ತಾನ ಕೂಡ ಹಾಫೀಜ್ ಸಯೀದ್, ಸಾಜಿದ್ ಮೀರ್ ಮತ್ತು ಝಾಕಿರ್ ಉರ್ ರೆಹಮಾನ್ ಲಖ್ವಿ ಅವರಂತಹ ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಭಾರತದ ಇಸ್ರೇಲ್ ರಾಯಭಾರಿ ಜೆ.ಪಿ. ಸಿಂಗ್ ಅವರು ಅಲ್ಲಿನ ಒಂದು ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಭಾರತವು ಹಲವು ವರ್ಷಗಳಿಂದ ಈ ಬೇಡಿಕೆಯನ್ನು ಮಾಡುತ್ತಿದೆ; ಆದರೆ ಪಾಕಿಸ್ತಾನ ಅದನ್ನು ತಿರಸ್ಕರಿಸುತ್ತಿದೆ. ಹೀಗಾಗಿ, ಇಂತಹ ಬೇಡಿಕೆಗಳನ್ನು ಮಾಡುವ ಬದಲು, ಅಮೆರಿಕಾ ಒಸಾಮಾ ಬಿನ್ ಲಾಡೆನ್‌ ನನ್ನು ಪಾಕಿಸ್ತಾನದಲ್ಲಿ ಹೋಗಿ ಹತ್ಯೆ ಮಾಡಿ ಆತನ ದೇಹವನ್ನು ಸಮುದ್ರಕ್ಕೆ ಎಸೆದಂತೆ ಭಾರತವೂ ಮಾಡುವುದು ಈಗ ಅತ್ಯಗತ್ಯವಾಗಿದೆ!