ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ: ಮೇ 20 ರಿಂದ ಶತಚಂಡಿ ಯಾಗದ ಆಯೋಜನೆ!
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ನಗರ, ಫೋಂಡಾ, ಗೋವಾ, ಮೇ 19 (ಸುದ್ದಿ) – ಕಾಶ್ಮೀರದ ಪಹಲ್ಗಾಮ್ ಆಕ್ರಮಣದ ನಂತರ ಭಾರತವು ಬಲವಾದ ಪ್ರತ್ಯುತ್ತರ ನೀಡಿದರೂ, ‘ಕದನ ವಿರಾಮ’ ಘೋಷಣೆಯಾಗಿದ್ದರೂ, ಪಾಕಿಸ್ತಾನದಿಂದ ವಿವಿಧ ಮಾರ್ಗಗಳ ಮೂಲಕ ಭಾರತ ವಿರೋಧಿ ಕೃತ್ಯಗಳು ಮುಂದುವರೆಯುತ್ತಿವೆ. ಆದ್ದರಿಂದ, ಭಾರತ-ಪಾಕ್ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಭಾರತಕ್ಕೆ ವಿಜಯ ಸಿಗಬೇಕು ಎಂದು ಸನಾತನ ಸಂಸ್ಥೆಯ ವತಿಯಿಂದ ಶತಚಂಡಿ ಯಾಗವನ್ನು ನಡೆಯಲಿದೆ. ಈ ಯಾಗವು ಮೇ 20 ರಿಂದ ಮೇ 22 ರವರೆಗೆ ಮಧ್ಯಾಹ್ನ 4 ರಿಂದ ರಾತ್ರಿ 8 ರವರೆಗೆ ಫರ್ಮಾಗುಡಿ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿರುವ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ನಗರ’ದಲ್ಲಿ ನಡೆಯಲಿದೆ. ತಮಿಳುನಾಡಿನ ಇರೋಡನ ಗುರುಮೂರ್ತಿ ಶಿವಾಚಾರ್ಯ ಮತ್ತು ಶಿವಾಗಮ ವಿದ್ಯಾ ನಿಧಿ ಆಗಮಾಚಾರ್ಯ ಶ್ರೀ. ಅರುಣಕುಮಾರ ಗುರುಮೂರ್ತಿ ಸೇರಿದಂತೆ 25 ಇತರ ಪುರೋಹಿತರು ಈ ಯಾಗದ ಪೌರೋಹಿತ್ಯವನ್ನು ವಹಿಸಲಿದ್ದಾರೆ. ಈ ಯಾಗದಲ್ಲಿ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿ ನಾಗರಿಕರು ಭಾಗವಹಿಸಿ ‘ಭಾರತದ ವಿಜಯ’ಕ್ಕಾಗಿ ಪ್ರಾರ್ಥಿಸುವಂತೆ ಕೋರಲಾಗಿದೆ. ದೇವಭೂಮಿ, ತಪೋಭೂಮಿ, ಅವತಾರಭೂಮಿ ಮತ್ತು ಭೂಮಿಯ ಮೇಲಿನ ಏಕೈಕ ಸನಾತನ ರಾಷ್ಟ್ರವಾದ ಭಾರತದ ರಕ್ಷಣೆ ಮತ್ತು ವಿಜಯಕ್ಕಾಗಿ ನಡೆಯುವ ಶತಚಂಡಿ ಯಜ್ಞದಲ್ಲಿ ಸಪ್ತಶತಿಯ ಸಾಮೂಹಿಕ ಪಾಠ, ಯಜ್ಞ ವಿಧಿ, ಆಹುತಿ ಮತ್ತು ಪೂರ್ಣಾಹುತಿ ಇತ್ಯಾದಿ ಕಾರ್ಯಕ್ರಮಗಳು ಇರಲಿವೆ.
‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ನಗರ’ದಲ್ಲಿ ಇನ್ನೂ 3 ದಿನಗಳ ಕಾಲ ‘ಸೌಂದೇಕರ ಕುಟುಂಬ’ದ ಪ್ರಾಚೀನ ಶಸ್ತ್ರಾಸ್ತ್ರಗಳು, ಕೊಲ್ಲಾಪುರದ ‘ಸವ್ಯಸಾಚಿ ಗುರುಕುಲಂ’ನ ಶಸ್ತ್ರಾಸ್ತ್ರ ಪ್ರದರ್ಶನ, ಪುಣೆಯ ‘ಶಿವಾಯಿ ಸಂಸ್ಥಾನ’ದ ಶಸ್ತ್ರಾಸ್ತ್ರ ಪ್ರದರ್ಶನವನ್ನು ಏರ್ಪಡಿಸಲಾಗುವುದು. ಈ ಶಸ್ತ್ರಾಸ್ತ್ರ ಪ್ರದರ್ಶನವನ್ನು 6 ಸಾವಿರ ಚದರ ಅಡಿ ಪ್ರದೇಶದಲ್ಲಿ ಭವ್ಯ ಸ್ವರೂಪದಲ್ಲಿ ಆಯೋಜಿಸಲಾಗಿದೆ. ಈ ಪ್ರದರ್ಶನದ ಸಮಯವು ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ ಇರುತ್ತದೆ.