Turkey Military Operatives Killed : ಭಾರತದ ಆಕ್ರಮಣದಲ್ಲಿ ಟರ್ಕಿಯ 2 ಸೈನಿಕರು ಹತ

ಪಾಕಿಸ್ತಾನದಿಂದ ಭಾರತದ ಮೇಲೆ ಟರ್ಕಿಯ ಸೈನಿಕರಿಂದ ಡ್ರೋನ್‌ಗಳ ದಾಳಿ!

ನವದೆಹಲಿ – ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದಲ್ಲಿ ಪಾಕಿಸ್ತಾನವು ಟರ್ಕಿಯು ಸರಬರಾಜು ಮಾಡಿದ ಡ್ರೋನ್ ಗಳನ್ನು ವ್ಯಾಪಕವಾಗಿ ಬಳಸಿತು. ಈಗ ಈ ಬಗ್ಗೆ ಹೊಸ ಮಾಹಿತಿ ಹೊರಬಿದ್ದಿದೆ. ಅದರ ಪ್ರಕಾರ ಪಾಕಿಸ್ತಾನದಿಂದ ಟರ್ಕಿಯ ಒಟ್ಟು 350 ಕ್ಕೂ ಹೆಚ್ಚು ಡ್ರೋನ್ ಗಳನ್ನು ಬಳಸಲಾಯಿತು. ಇದರೊಂದಿಗೆ ಪಾಕಿಸ್ತಾನದಲ್ಲಿರುವ ಟರ್ಕಿಯ ಸೈನಿಕರು ಸಹ ಭಾರತದ ವಿರುದ್ಧ ಡ್ರೋನ್ ದಾಳಿ ನಡೆಸುವಲ್ಲಿ ಭಾಗಿಯಾಗಿದ್ದರು. ಭಾರತದ ಪ್ರತಿದಾಳಿಯಲ್ಲಿ ಡ್ರೋನಗಳನ್ನು ಹಾರಿಸುತ್ತಿದ್ದ ಟರ್ಕಿಯ 2 ಸೈನಿಕರು ಹತರಾದರು ಎಂದು ಮೂಲಗಳು ತಿಳಿಸಿವೆ.

ಸಂಪಾದಕೀಯ ನಿಲುವು

ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದಲ್ಲಿ ಟರ್ಕಿಯ ಸೈನಿಕರು ಭಾಗವಹಿಸಿದ್ದರಿಂದ ಭಾರತವು ಈ ಬಗ್ಗೆ ಟರ್ಕಿಯನ್ನು ಪ್ರಶ್ನಿಸಿ ಅದರೊಂದಿಗಿನ ಎಲ್ಲಾ ರೀತಿಯ ಸಂಬಂಧಗಳನ್ನು ಕಡಿದುಕೊಳ್ಳಬೇಕು!