‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (ಗುರುದೇವ)ಯವರ ಕೋಣೆಯಲ್ಲಿ ಮರದ ಹಲಗೆಯ ಕಪಾಟಿನಲ್ಲಿ ಅವರ ದೇವರಮಂಟಪವಿದೆ. ಗುರುದೇವರು ಅನೇಕ ವರ್ಷಗಳಿಂದ ಅವರ ದೇವರ ಮಂಟಪದಲ್ಲಿನ ದೇವತೆಗಳ ಪೂಜೆಯನ್ನು ಮನಃಪೂರ್ವಕವಾಗಿ ಮಾಡಿದರು. ಈಗ ವಯೋಮಾನದಿಂದ ಮತ್ತು ಪ್ರಾಣಶಕ್ತಿ ಕಡಿಮೆ ಆಗಿರುವುದರಿಂದ ಅವರಿಗೆ ಪೂಜೆ ಮಾಡಲು ಆಗುವುದಿಲ್ಲ. ಆದ್ದರಿಂದ ಸನಾತನದ ಸಾಧಕಿಯರು ಅಥವಾ ಸಾಧಕರು ದೇವರಕೋಣೆಯಲ್ಲಿನ ದೇವತೆಗಳ ಪೂಜೆ ಮಾಡುತ್ತಾರೆ. ಗುರುದೇವರ ಕೋಣೆಯಲ್ಲಿನ ದೇವರಮಂಟಪದ ೨೦೧೪ ರಿಂದ ವಿವಿಧ ಪ್ರಸಂಗಗಳಲ್ಲಿ ಛಾಯಾಚಿತ್ರಗಳನ್ನು ತೆಗೆಯಲಾಗಿತ್ತು. ‘ಲೋಲಕ’ ಉಪಕರಣದಿಂದ ಈ ಛಾಯಾಚಿತ್ರಗಳ ಪರೀಕ್ಷಣೆಗಳನ್ನು ಮಾಡಲಾಯಿತು. ‘ಲೋಲಕ’ ಉಪಕರಣದಿಂದ ವಸ್ತು, ವಾಸ್ತು ಮತ್ತು ವ್ಯಕ್ತಿಯ ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆ ಅಳೆಯಬಹುದು. ಈ ವೈಶಿಷ್ಟ್ಯಪೂರ್ಣ ಸಂಶೋಧನೆಯನ್ನು ಮುಂದೆ ಕೊಡಲಾಗಿದೆ.
೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೇವರಮಂಟಪದ ಛಾಯಾಚಿತ್ರಗಳಲ್ಲಿ ಕಾಲಕ್ಕನುಸಾರ ಉತ್ತರೋತ್ತರ ಹೆಚ್ಚೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇರುವುದು
ದೇವರಮಂಟಪದ ಯಾವುದೇ ಛಾಯಾಚಿತ್ರದಲ್ಲಿ ನಕಾರಾತ್ಮಕ ಊರ್ಜೆ ಕಂಡುಬರಲಿಲ್ಲ. ಈ ಎಲ್ಲ ಛಾಯಾಚಿತ್ರಗಳಲ್ಲಿ ಸಕಾರಾತ್ಮಕ ಊರ್ಜೆ ಇದೆ. ೨೦೧೪ ರಲ್ಲಿನ ಮಂಟಪದ ಛಾಯಾಚಿತ್ರದಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ೪ ಮೀಟರ್ ಇತ್ತು.
೨೦೨೦ ರಲ್ಲಿ ಅದು ೯೩ ಮೀಟರ್ ಇತ್ತು. ಜುಲೈ ೨೦೨೧ ರಲ್ಲಿ ಮಂಟಪದಲ್ಲಿನ ಚಿತ್ರಗಳು ಮತ್ತು ಮೂರ್ತಿಗಳ ಮಂಡಣೆಯನ್ನು ಬದಲಾಯಿಸಲಾಯಿತು. ಅನಂತರ ಮಂಟಪದಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ೯೭೫ ಮೀಟರ್ ಸಿಕ್ಕಿತು. ಫೆಬ್ರುವರಿ ೨೦೨೨ ರಲ್ಲಿ ಮಂಟಪದಲ್ಲಿ ಸನಾತನ-ನಿರ್ಮಿತ ದೇವತೆಗಳ ಸಾತ್ತ್ವಿಕ ಚಿತ್ರಗಳನ್ನೂ ಇಡಲಾಗಿದೆ. ಅನಂತರ ಮುಂದಿನ ೨ ವರ್ಷಗಳಲ್ಲಿ ಮಂಟದಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿ ಅದು ೯೭೦೦ ಮೀಟರ್ ಆಯಿತು. ಇದರಿಂದ ‘ಗುರುದೇವರ ದೇವರಮಂಟಪದಿಂದ ಎಷ್ಟು ದೊಡ್ಡ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಪ್ರಕ್ಷೇಪಿಸುತ್ತಿದೆ’, ಎಂಬುದು ಗಮನಕ್ಕೆ ಬರುತ್ತದೆ. ದೇವರಮಂಟಪದ ಬೇರೆಬೇರೆ ವರ್ಷಗಳಲ್ಲಿನ ಛಾಯಾಚಿತ್ರಗಳಲ್ಲಿನ ಸಕಾರಾತ್ಮಕ ಊರ್ಜೆಯ ನೋಂದಣಿಗಳನ್ನು ಮುಂದೆ ಕೊಡಲಾಗಿದೆ.
ಟಿಪ್ಪಣಿ ೧ – ಜುಲೈ ೨೦೨೧ ರಲ್ಲಿ ದೇವರಮಂಟಪದಲ್ಲಿನ ಚಿತ್ರಗಳ ಮತ್ತು ಮೂರ್ತಿಗಳ ರಚನೆ ಬದಲಾಯಿಸಲಾಯಿತು.
ಟಿಪ್ಪಣಿ ೨ – ಜನವರಿ ೨೦೨೨ ರಲ್ಲಿ ಮಹರ್ಷಿಗಳ ಆಜ್ಞೆಗನುಸಾರ ದೇವರಮಂಟದಲ್ಲಿ ಮರದಲ್ಲಿ ಕೆತ್ತಿದ ಗರುಡನ ಮೂರ್ತಿಯನ್ನು ಇಡಲಾಯಿತು.
ಟಿಪ್ಪಣಿ ೩ – ಫೆಬ್ರುವರಿ ೨೦೨೨ ರಲ್ಲಿ ದೇವರಮಂಟಪದಲ್ಲಿ ಸನಾತನ-ನಿರ್ಮಿತ ದೇವತೆಗಳ ಸಾತ್ತ್ವಿಕ ಚಿತ್ರಗಳನ್ನೂ ಇಡಲಾಯಿತು.
೧ ಅ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೇವರಮಂಟಪದ ಛಾಯಾಚಿತ್ರಗಳಿಂದ ಉತ್ತರೋತ್ತರ ಹೆಚ್ಚೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸಲ್ಪಡುವುದರ ಕಾರಣಗಳು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹಿಂದೂ ರಾಷ್ಟ್ರದ ಸ್ಥಾಪನೆಯ (ಈಶ್ವರೀ ರಾಜ್ಯದ ಸ್ಥಾಪನೆಯ) ಮಹಾನ ಕಾರ್ಯವನ್ನು ಮಾಡುತ್ತಿದ್ದಾರೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ (ಗುರುದೇವರಿಗೆ) ಮಹರ್ಷಿಗಳು, ಹಾಗೆಯೇ ಕೆಲವು ಸಂತರು ದೇವತೆಗಳ ಕೆಲವು ಮೂರ್ತಿಗಳನ್ನು ನೀಡಿದ್ದಾರೆ. ಗುರುದೇವರು ಅತ್ಯಂತ ಭಕ್ತಿಭಾವದಿಂದ ಆ ಮೂರ್ತಿಗಳನ್ನು ತಮ್ಮ ದೇವರಮಂಟಪಲ್ಲಿ ಇಟ್ಟಿದ್ದಾರೆ. ದೇವರಮಂಟಪದಲ್ಲಿರುವ ದೇವರಿಗೆ ಅವರು ಪ್ರತಿದಿನ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾರೆ. ಅವರ ಅನನ್ಯ ಭಕ್ತಿಯಿಂದಾಗಿ ದೇವಿದೇವತೆಗಳು ಪ್ರಸನ್ನಗೊಳ್ಳುತ್ತಾರೆ. ಹಿಂದೂ ರಾಷ್ಟ್ರದ ಸ್ಥಾಪನೆಯ ಮಹಾನ ಸಮಷ್ಟಿ ಕಾರ್ಯದಲ್ಲಿ ದೇವಿದೇವತೆಗಳು ಗುರುದೇವರಿಗೆ ಸಹಾಯ ಮಾಡುತ್ತಾರೆ. ಈ ಕಾರ್ಯಕ್ಕಾಗಿ ಕಾಲಾನುಸಾರ ದೇವತೆಗಳ ತತ್ತ್ವಗಳು (ಅಂದರೆ ಆಯಾ ದೇವತೆಯ ಶಕ್ತಿ, ಭಾವ, ಚೈತನ್ಯ, ಆನಂದ ಮತ್ತು ಶಾಂತಿಯ ಸ್ಪಂದನಗಳು) ಯಾವ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆಯೋ ಅದಕ್ಕನುಸಾರ ದೇವತೆಗಳ ಮೂರ್ತಿಗಳಲ್ಲಿ ಅಥವಾ ಚಿತ್ರಗಳಲ್ಲಿ ಅವು ಪ್ರತಿಬಿಂಬಿಸುತ್ತವೆ. ಗುರುದೇವರ ಅನನ್ಯ ಭಕ್ತಿಯಿಂದಾಗಿ ಅವರ ದೇವರ ಮಂಟಪದಲ್ಲಿನ ಪ್ರತಿಯೊಂದು ಮೂರ್ತಿ ಮತ್ತು ಚಿತ್ರದಲ್ಲಿನ ಚೈತನ್ಯವು ಬಹಳ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಆದುದರಿಂದ ಗುರುದೇವರ ದೇವರಮಂಟಪದಿಂದ ಬಹಳಷ್ಟು ಚೈತನ್ಯವು ಪ್ರಕ್ಷೇಪಿಸಲ್ಪಡುತ್ತಿದೆ ಮತ್ತು ಅದರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಗುರುದೇವರ ಚೈತನ್ಯಮಯ ದೇವರಮಂಟಪವು ಇಡೀ ಸೃಷ್ಟಿಗೆ ಚೈತನ್ಯ ಪ್ರದಾನಿಸುವಂತಿದೆ.

೧ ಆ. ದೇವರಮಂಟಪದಲ್ಲಿ ದೇವತೆಗಳ ರಚನೆಯನ್ನು ಸಾತ್ತ್ವಿಕ ಮಾಡಿದರೆ ದೇವರಮಂಟಪದಿಂದ ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸಲ್ಪಡುವುದು : ಲೇಖನದಲ್ಲಿ ನೀಡಿರುವ ಛಾಯಾಚಿತ್ರ ಕ್ರ. ೧ ಮತ್ತು ಛಾಯಾಚಿತ್ರ ಕ್ರ. ೨ ಈ ದೇವರಮಂಟಪದ ಛಾಯಾಚಿತ್ರಗಳನ್ನು ಹೋಲಿಸಿದರೆ ಛಾಯಾಚಿತ್ರ ಕ್ರ. ೨ ರಲ್ಲಿ ದೇವತೆಗಳ ರಚನೆಯು ಹೆಚ್ಚು ಸಾತ್ತ್ವಿಕವಾಗಿದೆ ಎಂದು ತಿಳಿಯುತ್ತದೆ. ಆ ಛಾಯಾಚಿತ್ರದಲ್ಲಿ ಎಲ್ಲ ದೇವತೆಗಳ ಮುಖಗಳು ದರ್ಶನ ಪಡೆಯುವವರ ಎದುರಿಗಿವೆ. ಮಂಟಪದಲ್ಲಿನ ಆ ಛಾಯಾಚಿತ್ರಗಳ ಕಡೆಗೆ ನೋಡಿದಾಗ ನಮಗೂ ಹೆಚ್ಚು ಒಳ್ಳೆಯ ಮತ್ತು ಹಗುರತೆಯ ಅನುಭವವಾಗುತ್ತದೆ. ಮಂಟಪದ ಸಕಾರಾತ್ಮಕ ಊರ್ಜೆಯ ಪ್ರಭಾವಲಯದಿಂದ ಇದೇ ಗಮನಕ್ಕೆ ಬರುತ್ತದೆ. ಮಂಟಪದ ‘ಛಾಯಾಚಿತ್ರ ಕ್ರ. ೧’ರ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ೯೩ ಮೀಟರ್ ಇತ್ತು, ಅದು ದೇವತೆಗಳ ಸಾತ್ತ್ವಿಕ ರಚನೆಯಿಂದ ‘ಛಾಯಾಚಿತ್ರ ಕ್ರ. ೨’ ರಲ್ಲಿ ೧೦೦ ಪಟ್ಟು ಹೆಚ್ಚಾಗಿ ೯೬೫ ಮೀಟರ್ ಆಗಿರುವುದು, ಗಮನಕ್ಕೆ ಬಂದಿತು.

೧ ಇ. ಹಿಂದೂ ರಾಷ್ಟ್ರದ ಸ್ಥಾಪನೆಯ ಸಮಷ್ಟಿ ಕಾರ್ಯಕ್ಕಾಗಿ ಎಲ್ಲ ಉಚ್ಚ ದೇವತೆಗಳ ಆಶೀರ್ವಾದ ಸಿಗಲು ಆ ದೇವತೆಗಳ ಚಿತ್ರಗಳನ್ನು ಮಂಟಪದಲ್ಲಿ ಇಟ್ಟಾಗ ಆ ಮಂಟಪದಿಂದ ಹೆಚ್ಚು ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸಲ್ಪಡುವುದು : ಸನಾತನವು ಉಚ್ಚ ದೇವತೆಗಳ (ಗಣಪತಿ, ಶ್ರೀ ದುರ್ಗಾದೇವಿ, ಶ್ರೀ ಮಹಾಲಕ್ಷ್ಮೀ, ಶ್ರೀ ಸರಸ್ವತಿ, ಶ್ರೀರಾಮ, ಶ್ರೀಕೃಷ್ಣ, ಶಿವ, ಮಾರುತಿ ಮತ್ತು ದತ್ತ) ೯ ಸಾತ್ತ್ವಿಕ ಚಿತ್ರಗಳನ್ನು ತಯಾರಿಸಿದೆ. ಅವುಗಳಲ್ಲಿ ಆಯಾ ದೇವತೆಗಳ ತತ್ತ್ವವು ಶೇ. ೨೯ ರಿಂದ ಶೇ. ೩೧ ರಷ್ಟು ಬಂದಿದೆ. ಈ ತತ್ತ್ವವು ಕಲಿಯುಗಕ್ಕನುಸಾರ ಅತ್ಯುಚ್ಚವಾಗಿದೆ. ಇತ್ತೀಚೆಗೆ ಅಂಗಡಿಗಳಲ್ಲಿ ಲಭ್ಯವಿರುವ ಚಿತ್ರಗಳಲ್ಲಿ ದೇವತೆಗಳ ತತ್ತ್ವವು ಶೇ. ೮ ರಿಂದ ೧೫ ರಷ್ಟು ಮಾತ್ರ ಇರುತ್ತದೆ. ‘ದೇವರು ಅಥವಾ ದೇವತೆಗಳು ಇದ್ದಂತೆ ಅವರ ಚಿತ್ರಗಳನ್ನು ರಚಿಸಿದರೆ ಆ ಚಿತ್ರದಲ್ಲಿ ಶೇ. ೧೦೦ ರಷ್ಟು ದೇವತಾತತ್ತ್ವವು ಬರಬಹುದು. ಈ ಕಲಿಯುಗದಲ್ಲಿ ದೇವತೆಯ ಚಿತ್ರವನ್ನು ರಚಿಸಲು ಅವರ ಸೂಕ್ಷಾತೀಸೂಕ್ಷ್ಮ ಸ್ಪಂದನಗಳನ್ನು ಗ್ರಹಿಸುವ ಸಾಮರ್ಥ್ಯ ಮಾನವನಲ್ಲಿ ಇಲ್ಲ. ಆದುದರಿಂದ ಈ ಯುಗದಲ್ಲಿ ದೇವತೆಗಳ ಚಿತ್ರದಲ್ಲಿ ಹೆಚ್ಚೆಂದರೆ ಶೇ. ೩೦ ರಷ್ಟು ತತ್ತ್ವವು ಬರಬಹುದು.’ – ಸಂಕಲನಕಾರರು. ದೇವತೆಗಳ ಇಂತಹ ಸಾತ್ತ್ವಿಕ ಚಿತ್ರಗಳನ್ನು ದೇವರಮಂಟಪದಲ್ಲಿಟ್ಟರೆ ಮತ್ತು ಅವುಗಳನ್ನು ಭಕ್ತಿಭಾವದಿಂದ ಪೂಜಿಸಿ, ಪ್ರಾರ್ಥಿಸಿದರೆ ಅವರ ಕೃಪಾಶೀರ್ವಾದವನ್ನು ಪಡೆಯಬಹುದು. ಇದೇ ಉದ್ದೇಶದಿಂದ, ಹಾಗೆಯೇ ‘ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವುದು’, ಈ ಸಮಷ್ಟಿ ಉದ್ದೇಶವನ್ನು ಗಮನದಲ್ಲಿಟ್ಟು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು (ಗುರುದೇವರು) ೨೦೨೨ ರಲ್ಲಿ ತಮ್ಮ ದೇವರಮಂಟಪದಲ್ಲಿ ಸನಾತನ-ನಿರ್ಮಿತ ಎಲ್ಲ ದೇವತೆಗಳ ಚಿತ್ರಗಳನ್ನು ಪೂಜೆಗಾಗಿ ಇಟ್ಟರು. ‘ಅವರ ಈ ಉದ್ದೇಶವು ಯಶಸ್ವಿಯಾಗಿದೆ’, ಎಂಬುದು ದೇವರಮಂಟಪದ ‘ಛಾಯಾಚಿತ್ರ ಕ್ರ. ೨’ ಮತ್ತು ‘ಛಾಯಾಚಿತ್ರ ಕ್ರ. ೩’ ಇವುಗಳ ಸಕಾರಾತ್ಮಕ ಊರ್ಜೆಯ ಪ್ರಭಾವಲಯಗಳಿಗೆ ಹೋಲಿಸಿದರೆ ಗಮನಕ್ಕೆ ಬರುತ್ತದೆ. ದೇವರ ಮಂಟಪದಲ್ಲಿ ‘ಛಾಯಾಚಿತ್ರ ಕ್ರ. ೨’ ರ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ೯೭೫ ಮೀಟರ್‌ಗಳಷ್ಟಿತ್ತು. ದೇವರಮಂಟಪದಲ್ಲಿ ಎಲ್ಲ ಉಚ್ಚ ದೇವತೆಗಳ ಚಿತ್ರಗಳನ್ನು ಸೇರಿಸಿದ ನಂತರ (ಛಾಯಾಚಿತ್ರ ಕ್ರ. ೩) ದೇವರಮಂಟಪದ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ನಾಲ್ಕು ಪಟ್ಟುಗಳಲ್ಲಿ ಹೆಚ್ಚಾಗಿ ಅದು ೪೦೦೦ ಮೀಟರ್‌ಗಳಷ್ಟಾಯಿತು. ಇದರಿಂದ, ವ್ಯಷ್ಟಿ ಸಾಧನೆಗಾಗಿ ‘ಅನೇಕದಿಂದ ಏಕಕ್ಕೆ ಬರುವುದು’ (ಅನೇಕ ದೇವತೆಗಳ ಪೂಜೆಯಿಂದ ಒಂದು ದೇವತೆಯ ಪೂಜೆಯ ಕಡೆಗೆ ಬರುವುದು) ಇದು ಅಧ್ಯಾತ್ಮಶಾಸ್ತ್ರದ ತತ್ತ್ವವಾಗಿದೆ ಮತ್ತು ಸಮಷ್ಟಿ ಸಾಧನೆಗೆ ‘ಏಕದಿಂದ ಅನೇಕಕ್ಕೆ ಹೋಗುವುದು’ (ಒಂದು ದೇವತೆಯ ಪೂಜೆಯಿಂದ ಅನೇಕ ದೇವತೆಗಳ ಪೂಜೆಯ ಕಡೆಗೆ ಹೋಗುವುದು), ಅಂದರೆ ‘ವ್ಯಾಪಕವಾಗುವುದು’ ಇದು ತತ್ತ್ವವಾಗಿದೆ ಎಂಬುದು ಗಮನಕ್ಕೆ ಬರುತ್ತದೆ.
ಗುರುದೇವರ ಕೃಪೆಯಿಂದ ಅವರ ಚೈತನ್ಯಮಯ ದೇವರಮಂಟಪದ ಸಂಶೋಧನೆಯ ಸೇವೆಯಲ್ಲಿ ನಮ್ಮೆಲ್ಲ ಸಾಧಕರಿಗೆ ಭಾಗವಹಿಸುವ ಅವಕಾಶ ಸಿಕ್ಕಿತು, ಇದಕ್ಕಾಗಿ ಗುರುದೇವರ ಸುಕೋಮಲ ಚರಣಗಳಲ್ಲಿ ಕೋಟಿಶಃ ಕೃತಜ್ಞತೆಗಳು !’
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೮.೩.೨೦೨೫)