ಸಾತಾರಾದಲ್ಲಿ ನಿರಪರಾಧಿ ಹಿಂದೂಗಳ ಮೇಲಿನ ಅನ್ಯಾಯವನ್ನು ಎತ್ತಿ ತೋರಿಸುವ ‘ದಾಭೋಲ್ಕರ್ ಹತ್ಯಾ ಆಣಿ ಮಿ’ ಪುಸ್ತಕದ ಬಿಡುಗಡೆ !

ಸಾತಾರಾ – ಇಂದು ‘ಸಭ್ಯ’ ಎಂಬ ಪದವು ‘ಷಂಢ’ ಆಗಿದೆ. ಬಂಗಾಳ, ಕರ್ನಾಟಕದಲ್ಲಿ ಹಿಂದೂ ಆಗಿರುವುದು ಅಪರಾಧವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ನ್ಯಾಯಾಂಗ ಮತ್ತು ಆಡಳಿತ ವ್ಯವಸ್ಥೆಯನ್ನು ಬ್ರಿಟಿಷರು ಸ್ಥಾಪಿಸಿದ್ದಾರೆ. ಡಾ. ದಾಭೋಲ್ಕರ ಅವರ ಅಂಧಶ್ರದ್ಧೆಯ ವಿರುದ್ಧದ ಹೋರಾಟ ಕೇವಲ ಹಿಂದೂಗಳ ವಿರುದ್ಧವಾಗಿತ್ತು. ಹಿಂದೂ ಸಮಾಜವು ಷಂಢವಾಗಿದೆ. ಭಾರತದಲ್ಲಿ ಇಂದು ಪ್ರತಿ ನಗರದಲ್ಲೂ ‘ಮಿನಿ ಪಾಕಿಸ್ತಾನ’ ನಿರ್ಮಾಣವಾಗಿದೆ. ಬಾಂಗ್ಲಾದೇಶಿಗಳು ನುಸುಳಿದ್ದಾರೆ. ಬಂಗಾಲದಲ್ಲಿ ಇದೇ ಜನರು ಹಿಂದೂಗಳ ಹತ್ಯೆ ಮಾಡಿದ್ದಾರೆ. ಹಿಂದೂಗಳು ಇಂದು ಸಂಘಟಿತರಾಗುವುದು ಅವಶ್ಯಕವಾಗಿದೆ. ನ್ಯಾಯವಾದಿ ಸಂಜೀವ ಪುನಾಳೆಕರ ಅವರು ಡಾ. ದಾಭೋಲ್ಕರ ಹತ್ಯೆ ಪ್ರಕರಣದ ಖಟ್ಲೆಯನ್ನು ನಡೆಸುತ್ತಿರುವಾಗಲೇ ಅವರನ್ನು ಬಂಧಿಸಲಾಗುತ್ತದೆ. ಈ ಬಗ್ಗೆ ನ್ಯಾಯಾಲಯದಿಂದ ಎಂದಿಗೂ ಉತ್ತರ ಸಿಗುವುದಿಲ್ಲ. ಡಾ. ದಾಭೋಲ್ಕರ ಪ್ರಕರಣದಲ್ಲಿ ೧೦ ವರ್ಷಗಳ ಕಾಲ ಜೈಲಿನಲ್ಲಿಟ್ಟ ನಂತರ ಆರೋಪಿಗಳನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಲಾಗುತ್ತದೆ. ಇದರಲ್ಲಿ ಆರೋಪಿಗಳ ಜೀವನ ವ್ಯರ್ಥವಾಗುತ್ತದೆ, ಇದರ ಬಗ್ಗೆ ಯಾರೂ ಏನನ್ನೂ ಮಾತನಾಡುವುದಿಲ್ಲ ಎಂದು ಸ್ವಾತಂತ್ರ್ಯವೀರ ಸಾವರಕರ ರಾಷ್ಟ್ರೀಯ ಸ್ಮಾರಕದ ಕಾರ್ಯಕಾರಿ ಅಧ್ಯಕ್ಷ ಶ್ರೀ. ರಣಜಿತ ಸಾವರಕರರು ಹೇಳಿದರು. ನಿರಪರಾಧಿ ಹಿಂದೂವಿನ ಮೇಲಿನ ಅನ್ಯಾಯವನ್ನು ಎತ್ತಿ ತೋರಿಸುವ ಮತ್ತು ಸತ್ಯ, ಹೋರಾಟ ಮತ್ತು ಅಧಿಕಾರದ ಆಟದ ಹಿಂದಿನ ಕಪ್ಪು ಸತ್ಯವನ್ನು ಅನಾವರಣಗೊಳಿಸುವ ‘ದಾಭೋಲ್ಕರ ಹತ್ಯೆ ಮತ್ತು ನಾನು’ ಪುಸ್ತಕದ ಬಿಡುಗಡೆ ಸಮಾರಂಭವು ಏಪ್ರಿಲ್ ೧೮ ರಂದು ಸಾತಾರಾದ ಸಿದ್ಧಿವಿನಾಯಕ ಮಂಗಲ ಕಾರ್ಯಾಲಯದಲ್ಲಿ ನೆರವೇರಿತು. ಆ ಸಮಯದಲ್ಲಿ ಮಾತನಾಡುತ್ತಾ ಅವರು ಹೀಗೆ ಹೇಳಿದರು. ಸಾತಾರಾದ ಸಮಸ್ತ ಹಿಂದುತ್ವನಿಷ್ಠ ಸಂಘಟನೆಗಳು ಈ ಸಮಾರಂಭವನ್ನು ಆಯೋಜಿಸಿದ್ದವು.
ಶ್ರೀ. ರಣಜಿತ ಸಾವರಕರ, ‘ದಾಭೋಲ್ಕರ ಹತ್ಯೆ ಮತ್ತು ನಾನು’ ಪುಸ್ತಕದ ಲೇಖಕ ಶ್ರೀ. ವಿಕ್ರಮ ಭಾವೆ, ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸಗಢ ರಾಜ್ಯಗಳ ಸಂಘಟಕ ಶ್ರೀ. ಸುನೀಲ ಘನವಟ ಮತ್ತು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ಶ್ರೀ. ಸಂಜೀವ ಪುನಾಳೆಕರ ಹಾಗೂ ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಹಾಗೂ ನ್ಯಾಯವಾದಿ ಶ್ರೀ. ವೀರೇಂದ್ರ ಇಚಲಕರಂಜಿಕರ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ೩೦೦ ಕ್ಕೂ ಹೆಚ್ಚು ರಾಷ್ಟ್ರ ಮತ್ತು ಧರ್ಮಪ್ರೇಮಿಗಳು ಆಗಮಿಸಿದ್ದರು.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !