ಹಿಂದೂಗಳ ಸಂಘಟಿತ ವಿರೋಧದ ಪರಿಣಾಮ!
ಚೆನ್ನೈ (ತಮಿಳುನಾಡು) – ಇಲ್ಲಿನ ಮದ್ರಾಸ್ ವಿಶ್ವವಿದ್ಯಾಲಯವು ‘ಭಾರತದಲ್ಲಿ ಕ್ರೈಸ್ತ ಧರ್ಮವನ್ನು ಹೇಗೆ ಪ್ರಚಾರ ಮಾಡುವುದು?’ ಮತ್ತು ‘ಈ ಧರ್ಮದ ಅವಶ್ಯಕತೆ ಏನು?’ ಎಂಬ ವಿಷಯಗಳ ಕುರಿತು ಆಯೋಜಿಸಿದ್ದ ಉಪನ್ಯಾಸವನ್ನು ಅಂತಿಮವಾಗಿ ರದ್ದುಗೊಳಿಸಲು ನಿರ್ಧರಿಸಿದೆ. ಈ ಕಾರ್ಯಕ್ರಮ ನಡೆಯಲಿದೆ ಎಂಬುದು ಬೆಳಕಿಗೆ ಬಂದ ನಂತರ ಹಿಂದೂಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗವು ಈ ಉಪನ್ಯಾಸವನ್ನು ಆಯೋಜಿಸಿತ್ತು. ಉಪನ್ಯಾಸದ ವಿಷಯಕ್ಕೂ ಈ ವಿಷಯಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ ಇಂತಹ ಉಪನ್ಯಾಸವನ್ನು ಏಕೆ ಆಯೋಜಿಸಲಾಯಿತು? 20 ನೇ ಶತಮಾನದ ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮತ್ತು ತಮಿಳು ಬ್ರಾಹ್ಮಣರಾದ ಎಸ್. ಸುಬ್ರಹ್ಮಣ್ಯ ಅಯ್ಯರ್ ಅವರ ಹೆಸರಿನಲ್ಲಿ ಆಯೋಜಿಸಲಾದ ಉಪನ್ಯಾಸಕ್ಕೆ ಕ್ರೈಸ್ತ ಧರ್ಮದ ಸಂಬಂಧವೇನು? ಎಂಬ ಪ್ರಶ್ನೆಗಳನ್ನು ಹಿಂದೂಗಳು ಎತ್ತಿದ್ದರು.
ಹೆಚ್ಚುತ್ತಿರುವ ವಿರೋಧದಿಂದಾಗಿ, ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗವು ಅಧಿಕೃತ ಪತ್ರವನ್ನು ಪ್ರಕಟಿಸಿ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದಾಗಿ ಘೋಷಿಸಿತು. ವಿಭಾಗದ ಮುಖ್ಯಸ್ಥ ಡಾ. ಜೆ. ಸುಂದರರಾಜನ್ ಅವರ ಸಹಿ ಇರುವ ಈ ಪತ್ರದಲ್ಲಿ ಆಡಳಿತಾತ್ಮಕ ಕಾರಣಗಳಿಂದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಆದಾಗ್ಯೂ, ಈ ಉಪನ್ಯಾಸಕ್ಕೆ ಹೇಗೆ ಅನುಮೋದನೆ ನೀಡಲಾಯಿತು? ಎಂಬ ಪ್ರಮುಖ ಅಂಶದ ಬಗ್ಗೆ ಈ ಪತ್ರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.