ತಮಿಳು ಬ್ರಾಹ್ಮಣ ನ್ಯಾಯಾಧೀಶರ ಹೆಸರಿನಲ್ಲಿ ಕಾರ್ಯಕ್ರಮದ ಆಯೋಜನೆ !
(ಡಿಎಂಕೆ ಎಂದರೆ ದ್ರಾವಿಡ ಮುನ್ನೇತ್ರ ಕಳಗಂ, ಅಂದರೆ ದ್ರಾವಿಡ ಪ್ರಗತಿ ಸಂಘ)
ಚೆನ್ನೈ (ತಮಿಳುನಾಡು) – ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ‘ಭಾರತದಲ್ಲಿ ಕ್ರೈಸ್ತ ಧರ್ಮವನ್ನು ಹೇಗೆ ಹರಡುವುದು?’ ಎಂಬ ವಿಷಯದ ಕುರಿತು ಉಪನ್ಯಾಸವನ್ನು ಆಯೋಜಿಸಲಾಗಿದೆ. ವಿಶೇಷವೆಂದರೆ, 100 ವರ್ಷಗಳ ಹಿಂದೆ ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಮತ್ತು ತಮಿಳು ಬ್ರಾಹ್ಮಣರಾದ ಎಸ್. ಸುಬ್ರಮಣ್ಯ ಅಯ್ಯರ್ ಅವರ ಹೆಸರಿನಲ್ಲಿ ಈ ಉಪನ್ಯಾಸವನ್ನು ಆಯೋಜಿಸಲಾಗಿದೆ. ಮಾರ್ಚ್ 14 ರಂದು ಆಯೋಜಿಸಲಾಗುವ ಈ ಕಾರ್ಯಕ್ರಮದಲ್ಲಿ ಕೆ. ಶಿವಕುಮಾರ್ ಅವರು ಭಾಷಣ ಮಾಡಲಿದ್ದು, ಉಪನ್ಯಾಸದ ಕರಪತ್ರವು ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಇದರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂಗಳಲ್ಲಿ ಆಕ್ರೋಶದ ಅಲೆ ಎದ್ದಿದೆ.
1. ಪ್ರಸಾರವಾದ ಈ ಕರಪತ್ರದ ಪ್ರಕಾರ, ವಿಶ್ವವಿದ್ಯಾಲಯದ ‘ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗ’ವು ‘ಸರ್ ಎಸ್. ಸುಬ್ರಮಣ್ಯ ಅಯ್ಯರ್ ಎಂಡೋಮೆಂಟ್ ಲೆಕ್ಚರ್’ ಅಡಿಯಲ್ಲಿ ‘ಭಾರತದಲ್ಲಿ ಕ್ರೈಸ್ತ ಧರ್ಮವನ್ನು ಹೇಗೆ ಹರಡುವುದು?’ ಮತ್ತು ‘ಈ ಧರ್ಮ ಏಕೆ ಅವಶ್ಯಕ?’ ಎಂಬ ವಿಷಯಗಳ ಕುರಿತು ಉಪನ್ಯಾಸವನ್ನು ಆಯೋಜಿಸಿದೆ.
2. ಈ ಉಪನ್ಯಾಸದ ಮುಖ್ಯ ಭಾಷಣಕಾರರು ಇಂಜಿನಿಯರ್ ಕೆ. ಶಿವಕುಮಾರ್ (ಮುಖ್ಯ ಇಂಜಿನಿಯರ್, ಭಾಗ್ಯನಗರ) ಆಗಿರುತ್ತಾರೆ.
3. ವಿಶೇಷವೆಂದರೆ, ವಿಶ್ವವಿದ್ಯಾಲಯದಲ್ಲಿ ಕ್ರೈಸ್ತ ಅಧ್ಯಯನಕ್ಕಾಗಿ ಪ್ರತ್ಯೇಕ ವಿಭಾಗವಿದ್ದರೂ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗವು ಈ ಧಾರ್ಮಿಕ ಉಪನ್ಯಾಸವನ್ನು ಆಯೋಜಿಸಿರುವುದು ಅನುಮಾನಾಸ್ಪದವಾಗಿದೆ ಎಂದು ಪರಿಗಣಿಸಲಾಗಿದೆ.
ಭಾಜಪದಿಂದ ವಿರೋಧ !
‘ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ‘ಭಾರತದಲ್ಲಿ ಕ್ರೈಸ್ತ ಧರ್ಮವನ್ನು ಹೇಗೆ ಹರಡುವುದು?’ ಎಂಬ ವಿಷಯದ ಕುರಿತು ಉಪನ್ಯಾಸ! ಮತಾಂಧತೆ? ಉಗ್ರ ಪ್ರಚಾರ? ಯಾರಾದರೂ ಏನಾದರೂ ಹೇಳಲು ಬಯಸುತ್ತೀರಾ?’ ಎಂದು ತಮಿಳುನಾಡಿನ ಭಾಜಪ ರಾಜ್ಯ ಕಾರ್ಯದರ್ಶಿ ಡಾ. ಎಸ್.ಜಿ. ಸೂರ್ಯ ಅವರು ‘ಎಕ್ಸ್’ ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಮತ್ತೊಂದೆಡೆ, ಹಿರಿಯ ಚಿಂತಕ ಎಸ್. ಗುರುಮೂರ್ತಿ ಅವರು, ‘ಈ ಕಾರ್ಯಕ್ರಮವು ಕ್ರೈಸ್ತ ಧರ್ಮದ ಪ್ರತಿಷ್ಠೆಯನ್ನು ಹೆಚ್ಚಿಸುವುದಿಲ್ಲ, ಬದಲಿಗೆ ಕ್ರೈಸ್ತ ಧರ್ಮವು ವ್ಯಕ್ತಿಗಳನ್ನು ಮಾತ್ರವಲ್ಲ, ಬೌದ್ಧಿಕ ಸಂಸ್ಥೆಗಳನ್ನು ಸಹ ಮೋಸದ ರೀತಿಯಲ್ಲಿ ಪ್ರಭಾವಿಸಿದೆ ಎಂಬುದನ್ನು ಸಾಬೀತುಪಡಿಸುತ್ತದೆ’ ಎಂದು ಹೇಳಿದ್ದಾರೆ.
Subramania Ayyar Endowment Lecture in “University of Madras” on “How to spread Christianity in India!” by one ‘Siva’ Kumar!
Fundamentalism? Fanaticism? Anyone? pic.twitter.com/umXYJWOkAl
— Dr.SG Suryah (@SuryahSG) March 7, 2025
ವಿಶ್ವವಿದ್ಯಾಲಯದ ಪ್ರತಿಷ್ಠೆಯ ಮೇಲೆ ಪರಿಣಾಮ!
ಮದ್ರಾಸ್ ವಿಶ್ವವಿದ್ಯಾಲಯವು ಪ್ರಸಿದ್ಧ ಗಣಿತಜ್ಞ ಶ್ರೀನಿವಾಸ ರಾಮಾನುಜನ್, ಭಾರತದ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್, ಭೌತಶಾಸ್ತ್ರಜ್ಞ ಸಿ.ವಿ. ರಾಮನ್, ಹಿಂದೂ ಆಧ್ಯಾತ್ಮಿಕ ಗುರು ಸ್ವಾಮಿ ಚಿನ್ಮಯಾನಂದ ಸರಸ್ವತಿ ಅವರಂತಹ ಅನೇಕ ಮಹಾನ್ ವ್ಯಕ್ತಿಗಳನ್ನು ರೂಪಿಸಿದೆ. ಈ ಘಟನೆಯು ಮದ್ರಾಸ್ ವಿಶ್ವವಿದ್ಯಾಲಯದ ಪ್ರತಿಷ್ಠೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.
ಸಂಪಾದಕೀಯ ನಿಲುವು
|