ನವದೆಹಲಿ – ಭಾಜಪ ಸಂಸದ ದಿನೇಶ್ ಶರ್ಮಾ ಮತ್ತು ಕೇಂದ್ರ ಸಚಿವ ಕೃಷ್ಣ ಪಾಲ್ ಗುರ್ಜರ್ ಅವರ ಸರಕಾರಿ ನಿವಾಸದ ಹೊರಗೆ ಅಳವಡಿಸಲಾದ ನಾಮಫಲಕದಲ್ಲಿನ ‘ತುಘಲಕ್ ಲೇನ್’ ಹೆಸರನ್ನು ತೆಗೆದುಹಾಕಿ, ಈಗ ‘ವಿವೇಕಾನಂದ ಮಾರ್ಗ’ ಎಂದು ಬರೆಯಲಾಗಿದೆ; ಆದರೆ ಈ ಬದಲಾವಣೆಯನ್ನು ಅಧಿಕೃತವಾಗಿ ಮಾಡಲಾಗಿಲ್ಲ.
ವಿರೋಧ ಪಕ್ಷಗಳು ಇದನ್ನು ವಿರೋಧಿಸುತ್ತಿವೆ. ಹೆಸರು ಬದಲಾವಣೆ ಎಂದರೆ ಇತಿಹಾಸದ ತಿರುಚುವಿಕೆ ಎಂದು ಅವರು ಹೇಳುತ್ತಾರೆ. ಮೊಘಲ್ ಆಡಳಿತಗಾರರ ಹೆಸರುಗಳನ್ನು ತೆಗೆದುಹಾಕಿ ಅವರ ಬದಲಿಗೆ ಭಾರತೀಯ ಮಹಾಪುರುಷರ ಹೆಸರುಗಳನ್ನು ಬರೆಯಬೇಕು ಎಂದು ಭಾಜಪ ಹೇಳುತ್ತದೆ.
ಸಂಪಾದಕೀಯ ನಿಲುವುತುಘಲಕ್, ಬಾಬರ್, ಅಕ್ಬರ್, ಹುಮಾಯೂನ್ ಮುಂತಾದ ಮೊಘಲ್ ಬಾದಶಾಹಗಳ ಹೆಸರುಗಳನ್ನು ರಸ್ತೆಗಳಿಗೆ ಬದಲಾಯಿಸುವಂತೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಪುರಸಭೆಯಿಂದ ಏಕೆ ಈಡೇರಿಸಲಾಗುತ್ತಿಲ್ಲ? ಹಿಂದೂಗಳು ಇಂತಹ ಬೇಡಿಕೆಯನ್ನು ಇನ್ನೆಷ್ಟು ವರ್ಷಗಳ ಕಾಲ ಇಡಬೇಕು? ದೆಹಲಿಯಲ್ಲಿ ಈಗ ಭಾಜಪ ಸರಕಾರ ಇರುವುದರಿಂದ ಸರಕಾರವು ಇದಕ್ಕಾಗಿ ಪ್ರಯತ್ನಿಸಬೇಕು! |