
(ಇಫ್ತಾರ್ ಎಂದರೆ ಮುಸ್ಲಿಮರು ರಂಜಾನ್ ಸಮಯದಲ್ಲಿ ಉಪವಾಸವನ್ನು ಬಿಡುವುದು)
ಲಂಡನ್ (ಬ್ರಿಟನ್) – ರಂಜಾನ್ ಅಂಗವಾಗಿ ಮಾರ್ಚ್ 4 ರಂದು ಬ್ರಿಟನ್ ಸಂಸತ್ತಿನ ‘ಹೌಸ್ ಆಫ್ ಕಾಮನ್ಸ್’ ನಲ್ಲಿ ಮೊದಲ ಬಾರಿಗೆ ಇಫ್ತಾರ್ ಔತಣಕೂಟವನ್ನು ಆಯೋಜಿಸಲಾಗಿತ್ತು. ಈ ಇಫ್ತಾರ್ ನಲ್ಲಿ ಇಮಾಮರು ಅರೇಬಿಕ್ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಉಪಸ್ಥಿತರಿದ್ದರು. ಅವರು, “ಗಾಜಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಬ್ರಿಟನ್‌ನಲ್ಲಿರುವ ಮುಸ್ಲಿಮರು ತೊಂದರೆ ಅನುಭವಿಸುತ್ತಿದ್ದಾರೆ. ಬ್ರಿಟನ್‌ನಲ್ಲಿರುವ ಮುಸ್ಲಿಮರಿಗೆ ಈ ಸಮಯವು ಗಾಜಾ ಸಂಘರ್ಷ ಮತ್ತು ಪ್ಯಾಲೆಸ್ಟೀನಿಯನ್ನರ ದುಃಖದಿಂದ ಕಷ್ಟಕರವಾಗಿತ್ತು” ಎಂದು ಹೇಳಿದರು. (ಹಮಾಸ್ ದಾಳಿಯಲ್ಲಿ ಹತರಾದ ಇಸ್ರೇಲಿ ನಾಗರಿಕರ ಕುಟುಂಬಗಳಿಗೆ ಬ್ರಿಟನ್ ಪ್ರಧಾನಿ ದುಃಖಿಸುವುದಿಲ್ಲವೇ? – ಸಂಪಾದಕರು) ಈ ಸಂದರ್ಭದಲ್ಲಿ ಪ್ರಧಾನಿಯವರು ಮುಸ್ಲಿಮರೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಿದರು ಮತ್ತು ಅವರ ಕೊಡುಗೆಗಳಿಗಾಗಿ ಧನ್ಯವಾದ ಅರ್ಪಿಸಿದರು. ಸಂಸತ್ತಿನ ಸರ್ವಪಕ್ಷೀಯ ಗುಂಪು ‘ದಿ ಬಿಗ್ ಇಫ್ತಾರ್’ ಎಂಬ ಶೀರ್ಷಿಕೆಯಡಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಬ್ರಿಟನ್ ರಾಜಮನೆತನದಿಂದ ಪ್ರಾಚೀನ ‘ವಿಂಡ್ಸರ್ ಕ್ಯಾಸಲ್’ ನಲ್ಲಿ ಇಫ್ತಾರ್ ಆಯೋಜನೆ

ಮಾರ್ಚ್ 2, 2025 ರಂದು ಬ್ರಿಟನ್ ರಾಜಮನೆತನದ ಪ್ರಾಚೀನ ಕೋಟೆ ‘ವಿಂಡ್ಸರ್ ಕ್ಯಾಸಲ್’ ನಲ್ಲಿ ಇಫ್ತಾರ್ ಔತಣಕೂಟವನ್ನು ಆಯೋಜಿಸಲಾಗಿತ್ತು. ಈ ಕೋಟೆಯ 1 ಸಹಸ್ರ ವರ್ಷಗಳ ಇತಿಹಾಸದಲ್ಲಿ ಇದು ಮೊದಲ ಬಾರಿಗೆ ನಡೆದಿದೆ. ಈ ಕಾರ್ಯಕ್ರಮದಲ್ಲಿ 350 ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಬ್ರಿಟನ್ ರಾಜ ಚಾರ್ಲ್ಸ್ III ಆಯೋಜಿಸಿದ್ದರು. ಅವರು ಸ್ವತಃ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಪಾದಕೀಯ ನಿಲುವುಬ್ರಿಟನ್ನಲ್ಲಿ ಕ್ರೈಸ್ತರ ಜನಸಂಖ್ಯೆ ಕಡಿಮೆಯಾಗಿ ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿರುವ ಕಾರಣ, ಅಲ್ಲಿನ ರಾಜಕಾರಣಿಗಳು ಮುಸ್ಲಿಮರನ್ನು ಓಲೈಸುತ್ತಿದ್ದಾರೆ ಮತ್ತು ಈ ಘಟನೆ ಅದರ ಸಂಕೇತವಾಗಿದೆ! |
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia