ಉತ್ತರ ಪ್ರದೇಶ ವಿಧಾನ ಪರಿಷತ್ತಿನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಂದ ಸಮಾಜವಾದಿ ಪಕ್ಷಕ್ಕೆ ಬೇಡಿಕೆ
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಅಬು ಅಜ್ಮಿಯನ್ನು (ಸಮಾಜವಾದಿ) ಪಕ್ಷದಿಂದ ತೆಗೆದುಹಾಕಿ ಉತ್ತರ ಪ್ರದೇಶಕ್ಕೆ ಕಳುಹಿಸಿರಿ. ನಾವು ಚಿಕಿತ್ಸೆ ನೀಡುತ್ತೇವೆ. ಉತ್ತರ ಪ್ರದೇಶವು ಅಂತಹ ಜನರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಮಾಜವಾದಿ ಪಕ್ಷವನ್ನು ಟೀಕಿಸಿದರು. ಅಬು ಅಜ್ಮಿ ಔರಂಗಜೇಬನನ್ನು ವೈಭವೀಕರಿಸುವ ಹೇಳಿಕೆ ನೀಡಿದ ನಂತರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಮಾಜವಾದಿ ಪಕ್ಷವನ್ನು ಟೀಕಿಸುವಾಗ ಮೇಲಿನ ಹೇಳಿಕೆಯನ್ನು ನೀಡಿದರು.
ಈ ಜನರು ಮಹಾಕುಂಭಕ್ಕೆ ಶಾಪ ನೀಡುತ್ತಾರೆ ಮತ್ತು ಔರಂಗಜೇಬನ ಬಗ್ಗೆ ಹೆಮ್ಮೆಪಡುತ್ತಾರೆ!
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾತನಾಡುತ್ತಾ, ಸಮಾಜವಾದಿ ಪಕ್ಷವು ಒಂದು ಕಡೆ ಮಹಾಕುಂಭಮೇಳವನ್ನು ದೂಷಿಸಿತು ಮತ್ತು ಈಗ ದೇಶದ ದೇವಸ್ಥಾನಗಳನ್ನು ನಾಶಪಡಿಸಿದ ಔರಂಗಜೇಬನಂತಹ ವ್ಯಕ್ತಿಯನ್ನು ಸಮಾಜವಾದಿ ಪಕ್ಷದ ಓರ್ವ ಶಾಸಕರು ಹೊಗಳುತ್ತಿದ್ದಾರೆ, ಆದಾಗ್ಯೂ ಆ ಹೇಳಿಕೆಯನ್ನು ಸಮಾಜವಾದಿ ಪಕ್ಷ ಏಕೆ ಖಂಡಿಸುತ್ತಿಲ್ಲ ಎಂದು ಕೇಳಿದರು. ಸಮಾಜವಾದಿ ಪಕ್ಷಕ್ಕೆ ತನ್ನ ಶಾಸಕರ ಮೇಲೆ ಯಾವುದೇ ನಿಯಂತ್ರಣವಿಲ್ಲ. ಸಮಾಜವಾದಿ ಪಕ್ಷವು ಆ ನಾಯಕ (ಅಬು ಅಜ್ಮಿ) ಔರಂಗಜೇಬನನ್ನು ವೈಭವೀಕರಿಸುವ ಹೇಳಿಕೆಯನ್ನು ಖಂಡಿಸಬೇಕು ಮತ್ತು ಅವನನ್ನು ಪಕ್ಷದಿಂದ ಹೊರಹಾಕಬೇಕು. ಈ ಜನರು ಮಹಾಕುಂಭಕ್ಕೆ ಶಾಪ ಹಾಕುತ್ತಾರೆ ಮತ್ತು ಔರಂಗಜೇಬನ ಬಗ್ಗೆ ಹೆಮ್ಮೆಪಡುತ್ತಾರೆ.
ಹಿಂದೂ ಮಕ್ಕಳು ಸತ್ತ ನಂತರವೂ ತಮ್ಮ ಹೆತ್ತವರ ಸೇವೆ ಮಾಡುತ್ತಾರೆ ಎಂದು ಶಹಜಹಾನ ಹೇಳಿದ್ದನು.
ಮುಖ್ಯಮಂತ್ರಿಯವರು ತಮ್ಮ ಮಾತು ಮುಂದುವರಿಸಿ, ಸಮಾಜವಾದಿ ಪಕ್ಷದ ಜನರಿಗೆ ಔರಂಗಜೇಬ್ ಹೆಮ್ಮೆಯ ವಿಷಯವಾಗಿದ್ದಾನೆ. ಅವನು ತನ್ನ ಸ್ವಂತ ತಂದೆಯನ್ನು ಬಂಧಿಸಿ ಕಾರಾಗೃಹದಲ್ಲಿ ದಬ್ಬಿದ್ದನು. ಅವರನ್ನು ಪ್ರತಿ ಹನಿ ನೀರಿಗಾಗಿ ಹಾತೊರೆಯುವಂತೆ ಮಾಡಿದ್ದನು. ಆದ್ದರಿಂದ ಮುಸ್ಲಿಮರಲ್ಲಿ ಯಾರೂ ಅವನನ್ನು ಔರಂಗಜೇಬ್ ಎಂದು ಕರೆಯುವುದಿಲ್ಲ; ಏಕೆಂದರೆ ನೀವು ಮಕ್ಕಳಿಗೆ ಆ ಹೆಸರು ಇಟ್ಟಾಗ, ಅದು ಎಂತಹ ಹೆಸರು ತರುತ್ತಾರೆ ಎಂದು ನಿಮಗೆ ತಿಳಿದಿರುತ್ತದೆ. ಔರಂಗಜೇಬನು ಭಾರತವನ್ನು ಇಸ್ಲಾಮೀಕರಣಗೊಳಿಸಲು ಪ್ರಯತ್ನಿಸುತ್ತಿದ್ದನು. ಔರಂಗಜೇಬನ ತಂದೆ ಬಾದಶಾಹ ಷಹಜಹಾನ್ ತನ್ನ ಜೀವನ ಚರಿತ್ರೆಯಲ್ಲಿ ಔರಂಗಜೇಬನಂತಹ ಮಗ ಯಾವುದೇ ಕುಟುಂಬದಲ್ಲಿ ಹುಟ್ಟಬಾರದು ಎಂದು ಬರೆದಿದ್ದಾರೆ. ಹಿಂದೂ ಮಕ್ಕಳು ನಮಗಿಂತ ಉತ್ತಮರು. ಅವರು ತಮ್ಮ ಜೀವನದುದ್ದಕ್ಕೂ ತಮ್ಮ ಹೆತ್ತವರ ಸೇವೆ ಮಾಡುವುದಲ್ಲದೆ, ಅವರ ಮರಣದ ನಂತರವೂ ಪ್ರತಿ ವರ್ಷ ಅವರಿಗೆ ಶ್ರಾದ್ಧವನ್ನು ಮಾಡುತ್ತಾರೆ.
ಸಂಪಾದಕೀಯ ನಿಲುವುಇದನ್ನು ಕೇವಲ ಯೋಗಿ ಆದಿತ್ಯನಾಥ ಮಾತ್ರ ಹೇಳಬಲ್ಲರು, ಇತರರಿಗೆ ಆ ಧೈರ್ಯ ಇಲ್ಲ; ಏಕೆಂದರೆ ಯೋಗಿ ಆದಿತ್ಯನಾಥ ಒಬ್ಬ ಸಂತರಾಗಿದ್ದಾರೆ. ಅವರಿಗೆ ಸಾಧನೆಯ ಬಲವಿದೆ, ಈಶ್ವರನ ಮತ್ತು ಅವರ ಗುರುಗಳ ಆಶೀರ್ವಾದವಿದೆ. ಪ್ರತಿಯೊಬ್ಬ ಆಡಳಿತಗಾರನೂ ಹೀಗೆಯೇ ಇದ್ದರೆ, ಹಿಂದೂ ರಾಷ್ಟ್ರ ಬರಲು ಹೆಚ್ಚು ಸಮಯ ತಗಲುವುದಿಲ್ಲ! |