ಉತ್ತರ ಪ್ರದೇಶದಲ್ಲಿ ಮತಾಂತರಕ್ಕಾಗಿ ಕ್ರೈಸ್ತ ಮಿಷನರಿಗಳ ತಂಡ ಸಕ್ರೀಯ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದಲ್ಲಿ ಹಿಂದೂಗಳು ಮತ್ತು ಮುಸಲ್ಮಾನರನ್ನು ದೊಡ್ಡ ಪ್ರಮಾಣದಲ್ಲಿ ಮತಾಂತರಗೊಳಿಸಲು ಕ್ರೈಸ್ತರು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅನೇಕ ತಂಡಗಳು ಸಕ್ರೀಯವಾಗಿವೆ. ಮತಾಂತರದ ದರಗಳು ಸಹ ಬಹಿರಂಗವಾಗಿವೆ. ಸಿಕ್ಕಿದ ಮಾಹಿತಿಯ ಪ್ರಕಾರ, ಸಂಪೂರ್ಣ ಕುಟುಂಬವನ್ನು ಮತಾಂತರಗೊಳಿಸುವ ದಲ್ಲಾಳಿಗೆ 20 ಸಾವಿರ ರೂಪಾಯಿ ನೀಡಲಾಗುತ್ತದೆ, ಧರ್ಮ ಬದಲಾಯಿಸಿ ಹುಡುಗಿಯ ಮದುವೆ ಮಾಡಿಕೊಟ್ಟರೆ ಹೆಚ್ಚುವರಿಯಾಗಿ 15 ಸಾವಿರ ರೂಪಾಯಿ ನೀಡಲಾಗುತ್ತದೆ. ಪ್ರಸಿದ್ಧ ಶಾಲೆಗಳಿಂದ ಪ್ರತಿಷ್ಠಿತ ಸಂಸ್ಥೆಗಳವರೆಗೆ ಅನೇಕರು ಮಿಷನರಿಗಳ ಈ ಮತಾಂತರದ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ. ಹಣದ ಕೊರತೆ ಇಲ್ಲದಿರುವುದರಿಂದ ಮತಾಂತರ ಮಾಡುವ ತಂಡಗಳ ಜಾಲವು ಗ್ರಾಮೀಣ ಮಟ್ಟಕ್ಕೂ ಹರಡಿದೆ. ಮತಾಂತರ ಮಾಡುವ ದಲ್ಲಾಳಿಗಳು ‘ಪ್ರಚಾರಕರು’ ಎಂದು ಕೆಲಸ ಮಾಡುತ್ತಿದ್ದಾರೆ.

ತಂಡವು ಹೇಗೆ ಕೆಲಸ ಮಾಡುತ್ತದೆ?

1. ಇಂತಹ ದಲ್ಲಾಳಿಗಳನ್ನು ‘ತಂಡದ ಪ್ರಚಾರಕರು’ ಎಂದು ಪ್ರತಿ ಗ್ರಾಮದಲ್ಲಿ ನಿಯೋಜಿಸಲಾಗುತ್ತದೆ. ಅವರು ಅಗತ್ಯವಿರುವವರನ್ನು ಗುರಿಯಾಗಿಸುತ್ತಾರೆ. ಹಣದ ಕೊರತೆಯಿರುವ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಜನರು ಅವರ ಗುರಿಯಾಗಿದ್ದಾರೆ. ಇಂತಹ ಜನರನ್ನು ಪ್ರಾರ್ಥನಾ ಸಭೆಗಳಿಗೆ ಕರೆತರುವ ಜವಾಬ್ದಾರಿ ಪ್ರಚಾರಕರದ್ದಾಗಿದೆ. ಮಿಷನರಿಗಳು ಪ್ರತಿ ವರ್ಗವನ್ನು ಗಮನದಲ್ಲಿಟ್ಟುಕೊಂಡು ಪ್ರಚಾರಕರನ್ನು ನೇಮಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಧರ್ಮೋಪದೇಶಕರು ತಮ್ಮ ಸಮುದಾಯದ ಜನರನ್ನು ಮನವೊಲಿಸುವಲ್ಲಿ ಮತ್ತು ಅವರನ್ನು ತಮ್ಮ ಧರ್ಮವನ್ನು ಬದಲಾಯಿಸಲು ಪ್ರೇರೇಪಿಸುವಲ್ಲಿ ಯಶಸ್ವಿಯಾಗುತ್ತಾರೆ. ಈ ಸಂಪೂರ್ಣ ಕಾರ್ಯಾಚರಣೆಯನ್ನು ಧರ್ಮೋಪದೇಶಕರು ಮತ್ತು ಪಾದ್ರಿಗಳ ಮೂಲಕ ನಡೆಸಲಾಗುತ್ತದೆ.

2. ಮತಾಂತರ ಮಾಡುವ ತಂಡಗಳಿಗೆ ಕೆಲವು ಚರ್ಚ್‌ಗಳಿಂದ ಹಣ ಸಿಗುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿಯೊಬ್ಬರು, ‘ಜೋಶುವಾ ಪ್ರಾಜೆಕ್ಟ್’ ವೆಬ್‌ಸೈಟ್‌ನಿಂದ ಮತಾಂತರದ ಸಂಪೂರ್ಣ ಜಾಲವನ್ನು ಅರ್ಥಮಾಡಿಕೊಳ್ಳಬಹುದು, ಎಂದು ಹೇಳಿದ್ದಾರೆ.

3. ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯಲ್ಲಿ ಮತಾಂತರಕ್ಕೆ ಪ್ರಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಇದರಲ್ಲಿ ಇಕೋನಾ ಪ್ರದೇಶದ ಮತಾಂತರದ ಪ್ರಕರಣದಲ್ಲಿ ಹರೀಶ್ ಸಿಂಗ್ ಹೆಸರು ಮುನ್ನೆಲೆಗೆ ಬಂದಿದೆ. ಅವನು 5 ವರ್ಷಗಳ ಹಿಂದೆ ಪಂಜಾಬ್‌ನಲ್ಲಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದ. ಗ್ರಾಮಕ್ಕೆ ಹಿಂದಿರುಗಿದ ನಂತರ ಅವನು ತಮ್ಮ ಗುಡಿಸಲಿನಲ್ಲಿ ಪ್ರಾರ್ಥನಾ ಸಭೆಗಳನ್ನು ಆಯೋಜಿಸಲು ಪ್ರಾರಂಭಿಸಿದ. ಭದ್ರತಾ ಸಂಸ್ಥೆಗಳು ದಾಳಿ ನಡೆಸಿದ ನಂತರ ಅವರು ನಾಪತ್ತೆಯಾಗಿದ್ದಾನೆ.

4. ನೇಪಾಳ ಗಡಿಯ ಸಮೀಪದ ಪ್ರದೇಶಗಳಲ್ಲಿ ಈ ರೀತಿಯ ತಂಡಗಳು ಸಕ್ರಿಯವಾಗಿವೆ ಎಂದು ತಿಳಿದುಬಂದಿದೆ. ದೇವಿಪಾಟಣ ವಿಭಾಗದ ಶ್ರಾವಸ್ತಿ, ಬಹ್ರೈಚ್, ಬಲರಾಮಪುರ ಮತ್ತು ಗೊಂಡಾದಂತಹ ಸೂಕ್ಷ್ಮ ಜಿಲ್ಲೆಗಳಲ್ಲಿ ಮತಾಂತರ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಪೊಲೀಸರಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.

5. ಈ ಬಗ್ಗೆ ಪೊಲೀಸ್ ಮಹಾನಿರೀಕ್ಷಕ ಅಮಿತ ಪಾಠಕ ಮಾತನಾಡಿ, ಈ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳ ಮೇಲೆ ಸೂಕ್ಷ್ಮ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ.

ಉತ್ತರ ಪ್ರದೇಶದ 13 ಜಿಲ್ಲೆಗಳಲ್ಲಿಯೇ ಮತಾಂತರದ 4 ಸಾವಿರದ 500 ಕ್ಕೂ ಹೆಚ್ಚು ತಂಡಗಳು ಸಕ್ರೀಯ!

ರಾಜ್ಯದಲ್ಲಿ ಮತಾಂತರ ವಿರೋಧಿ ಕಾನೂನು ಇದ್ದರೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕ್ರೈಸ್ತರು ಮತಾಂತರ ಮಾಡಲು ಧೈರ್ಯ ಮಾಡುತ್ತಿದ್ದಾರೆ ಎಂದರೆ ಅವರ ದೃಷ್ಟಿಯಲ್ಲಿ ಕಾನೂನಿಗೆ ಬೆಲೆಯೇ ಇಲ್ಲ ಎಂದು ಅರ್ಥೈಸಿಕೊಳ್ಳಬಹುದು!

ಮತಾಂತರಕ್ಕಾಗಿ ಜಿಲ್ಲಾ ಮಟ್ಟದಲ್ಲಿ ತಂಡಗಳು ಸಕ್ರಿಯವಾಗಿವೆ. ಇದಕ್ಕಾಗಿ ಪ್ರಯಾಗರಾಜ್‌ನ ಸಂಗಮ ನಗರದಲ್ಲಿ ಅತಿ ಹೆಚ್ಚು 443 ಸಕ್ರಿಯ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದುಬಂದಿದೆ. ಮಹಾರಾಜಗಂಜ್‌ನಲ್ಲಿ 398, ಬಹ್ರೈಚ್‌ನಲ್ಲಿ 378, ಶ್ರಾವಸ್ತಿಯಲ್ಲಿ 320, ಬಲರಾಮಪುರದಲ್ಲಿ 330, ಗೊಂಡಾದಲ್ಲಿ 340, ಅಯೋಧ್ಯೆಯಲ್ಲಿ 333, ಅಂಬೇಡ್ಕರ್ ನಗರದಲ್ಲಿ 347, ಸೀತಾಪುರದಲ್ಲಿ 326, ಸಿದ್ಧಾರ್ಥ ನಗರದಲ್ಲಿ 345, ಅಮೇಠಿಯಲ್ಲಿ 317, ರಾಯ್‌ಬರೇಲಿಯಲ್ಲಿ 323 ಮತ್ತು ಪಿಲಿಭೀತ್‌ನಲ್ಲಿ 346 ಸಕ್ರಿಯ ತಂಡಗಳು ಹಿಂದೂಗಳನ್ನು ಮತಾಂತರ ಮಾಡುವ ಕಾರ್ಯಾಚರಣೆಯಲ್ಲಿ ತೊಡಗಿವೆ. ಉತ್ತರ ಪ್ರದೇಶದಲ್ಲಿ ಮತಾಂತರ ಪ್ರಕರಣಗಳಲ್ಲಿ ಕಠಿಣ ಕ್ರಮದ ಕಾನೂನು ಜಾರಿಯಲ್ಲಿದ್ದರೂ ಇದೆಲ್ಲವೂ ನಡೆಯುತ್ತಿದೆ.

ಸಂಪಾದಕೀಯ ನಿಲುವು

ಮತಾಂತರದ ವಿರುದ್ಧ ಕೇಂದ್ರ ಸರಕಾರವು ಕಾನೂನು ರೂಪಿಸುವುದು ಅಪೇಕ್ಷಿತವಿದೆ; ಆದರೆ, ಇದುವರೆಗೆ ಆಗದ ಕಾರಣ ಇಂತಹ ಘಟನೆಗಳನ್ನು ತಡೆಯಲು ಅಡಚಣೆಗಳು ಬರುತ್ತಿವೆ. ಹಿಂದೂಗಳು ಕಾನೂನು ರೂಪಿಸಲು ಸರಕಾರದ ಮೇಲೆ ಒತ್ತಡ ಹೇರುವುದು ಅಗತ್ಯವಾಗಿದೆ!