|

ಮುಂಬಯಿ – ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಯಾರನ್ನೂ ಅವಮಾನಿಸಿಲ್ಲ. (ಛತ್ರಪತಿ ಸಂಭಾಜಿ ಮಹಾರಾಜರನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ ಔರಂಗಜೇಬನನ್ನು ಹೊಗಳುವುದು ಛತ್ರಪತಿ ಸಂಭಾಜಿ ಮಹಾರಾಜರ ಜೊತೆಗೆ 110 ಕೋಟಿ ಹಿಂದೂ ಜನರ ಘೋರ ಅವಮಾನವಾಗಿದೆ! – ಸಂಪಾದಕರು) ನಾನು ಛತ್ರಪತಿ ಶಿವಾಜಿ ಮಹಾರಾಜರು, ಛತ್ರಪತಿ ಸಂಭಾಜಿ ಮಹಾರಾಜರು, ಡಾ. ಬಾಬಾಸಾಹೇಬ್ ಅಂಬೇಡ್ಕರ್, ಮಹಾತ್ಮ ಜ್ಯೋತಿಬಾ ಫುಲೆ, ರಾಜರ್ಷಿ ಶಾಹು ಮಹಾರಾಜರು ಈ ಎಲ್ಲಾ ಮಹಾನ್ ವ್ಯಕ್ತಿಗಳನ್ನು ಗೌರವಿಸುತ್ತೇನೆ. ಎಲ್ಲರೂ ಅವರನ್ನು ಗೌರವಿಸಬೇಕು. ಅವರನ್ನು ಆದರ್ಶವಾಗಿ ಪರಿಗಣಿಸಿ ಮುನ್ನಡೆಯಬೇಕು. ನಾನು ಔರಂಗಜೇಬನ ಬಗ್ಗೆ ನೀಡಿದ ಹೇಳಿಕೆಯನ್ನು ಇತಿಹಾಸಕಾರರು ನೀಡಿದ ಮಾಹಿತಿಯ ಆಧಾರದ ಮೇಲೆ ನೀಡಿದ್ದೆ; ಆದರೆ ಆ ಹೇಳಿಕೆಯಿಂದಾಗಿ ವಿಧಾನಸಭೆಯ ಕಲಾಪ ಮುಂದೂಡಬಾರದಿತ್ತು. ವಿಧಾನಸಭೆಯಲ್ಲಿ ನಾವು ಬಹಳಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ಜನರ ಕೆಲಸಗಳು ಬಾಕಿ ಇವೆ. ವಿಧಾನಸಭೆಯ ಕಲಾಪ ಸುಗಮವಾಗಿ ನಡೆಯಲು ನಾನು ನನ್ನ ಹೇಳಿಕೆಯನ್ನು ಹಿಂಪಡೆಯುತ್ತೇನೆ ಎಂದು ಸಮಾಜವಾದಿ ಪಕ್ಷದ ಶಾಸಕ ಅಬು ಆಜ್ಮಿ ನಾಚಿಕೆಗೇಡಿನ ಹೇಳಿಕೆ ನೀಡಿದ್ದಾರೆ. ಅವರು ‘ಔರಂಗಜೇಬ ಉತ್ತಮ ಆಡಳಿತಗಾರ’ ಎಂದು ಹೇಳಿಕೆ ನೀಡಿದ್ದರು. ಆ ಬಗ್ಗೆ ಅವರ ಮೇಲೆ ಟೀಕೆಗಳು ವ್ಯಕ್ತವಾಗಿವೆ ಮತ್ತು ರಾಜ್ಯ ಸರಕಾರದ ಬಜೆಟ್ ಅಧಿವೇಶನದಲ್ಲಿ ಗದ್ದಲ ಉಂಟಾಗಿ ಕಲಾಪ ಮುಂದೂಡಲಾಗಿತ್ತು.
ಸಂಪಾದಕೀಯ ನಿಲುವು‘ಕಳ್ಳನಿಗೊಂಡು ಪಿಳ್ಳೆನೆವ’ ಶಾಸಕ ಅಬು ಆಜ್ಮಿ ಅವರ ಹಳೆಯ ವೃತ್ತಿಯಾಗಿದೆ; ಆದರೆ ಅವರ ವಿರುದ್ಧ ಯಾವುದೇ ಸರಕಾರವೂ ಪರಿಣಾಮಕಾರಿ ಕ್ರಮ ಕೈಗೊಳ್ಳದ ಕಾರಣ ಅವರು ಈ ರೀತಿಯ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹವರ ಬಾಯಿ ಮುಚ್ಚಿಸಲು ಅವರ ವಿರುದ್ಧ ದೇಶದ್ರೋಹದ ಮೊಕದ್ದಮೆ ಹೂಡುವುದರ ಜೊತೆಗೆ ಔರಂಗಜೇಬನ ಗೋರಿಯನ್ನು ಕೆಡವಲು ಸರಕಾರ ಕ್ರಮ ಕೈಗೊಳ್ಳಬೇಕು. |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ