ಪೊಲೀಸರು 16 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳನ್ನು ‘ವಯಸ್ಕ’ ಎಂದು ಪರಿಗಣಿಸಿ ಮೊಕದ್ದಮೆ ಹೂಡಲಿದ್ದಾರೆ!
ರಾಂಚಿ (ಝಾರಖಂಡ್) – ರಾಜ್ಯದ ಧನಬಾದ ಜಿಲ್ಲೆಯಲ್ಲಿರುವ ನಿಚಿತಪುರದಲ್ಲಿನ ಕರೋ ನದಿಯ ಬಳಿ ಒಂದು ವಿವಾಹ ಸಮಾರಂಭದಿಂದ ಮನೆಗೆ ಹಿಂದಿರುಗುತ್ತಿದ್ದಾಗ 5 ಅಪ್ರಾಪ್ತ ಬಾಲಕಿಯರ ಮೇಲೆ 18 ಅಪ್ರಾಪ್ತ ಬಾಲಕರು ಬಲಾತ್ಕಾರ ಎಸಗಿದ್ದಾರೆ. ಎಲ್ಲಾ 18 ಬಲಾತ್ಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ಬಂಧಿಸಲಾಗಿದೆ. ಈ 18 ಜನರಲ್ಲಿ 16 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಾಗಿದ್ದಾರೆ, ಅವರನ್ನು ‘ವಯಸ್ಕ’ ಎಂದು ಪರಿಗಣಿಸಿ ಮೊಕದ್ದಮೆ ನಡೆಸಲಾಗುವುದು, ಎಂದು ಜಾರ್ಖಂಡ್ ಪೊಲೀಸ್ ಮಹಾನಿರ್ದೇಶಕ ಅನುರಾಗ್ ಗುಪ್ತಾ ಮಾಹಿತಿ ನೀಡಿದ್ದಾರೆ.
1. ಸಂತ್ರಸ್ಥ ಹುಡುಗಿಯರು ಒಂದು ಮದುವೆ ಸಮಾರಂಭದಿಂದ ಹಿಂತಿರುಗುತ್ತಿದ್ದಾಗ 18 ಅಪ್ರಾಪ್ತರು ಅವರನ್ನು ತಡೆದು, ಅವರ ಮೇಲೆ ಬಲಾತ್ಕಾರ ಮಾಡಿ, ಘಟನೆಯ ಬಗ್ಗೆ ಎಲ್ಲಿಯೂ ಹೇಳಬಾರದೆಂದು ಬೆದರಿಕೆ ಹಾಕಿದ್ದಾರೆ.
2. ಹುಡುಗರ ಹಿಡಿತದಿಂದ ತಪ್ಪಿಸಿಕೊಂಡು ಬಾಲಕಿಯರು ಮನೆಗೆ ತಲುಪಿ ತಮ್ಮ ಕುಟುಂಬಗಳಿಗೆ ತಮ್ಮ ಮೇಲಾಗಿರುವ ಬಲಾತ್ಕಾರದ ಬಗ್ಗೆ ತಿಳಿಸಿದರು. ಕುಟುಂಬವು ಪೊಲೀಸರಿಗೆ ಹೋಗಿ ದೂರು ನೀಡಿತು. ಪೊಲೀಸರು ತಕ್ಷಣ ಪ್ರಕರಣ ದಾಖಲಿಸಿಕೊಂಡು ಎಲ್ಲ ಕಾಮುಕರನ್ನು ಬಂಧಿಸಿದ್ದಾರೆ.
3. ಜಾರ್ಖಂಡ್ ಪೊಲೀಸ್ ಮಹಾನಿರ್ದೇಶಕ ಅನುರಾಗ್ ಗುಪ್ತಾ ಮಾತನಾಡಿ, ಸಮಾಜದಲ್ಲಿ ಮಕ್ಕಳು ಇಂತಹ ಕೊಳಕು ಕೃತ್ಯಗಳನ್ನು ಮಾಡಲು ಧೈರ್ಯ ಪಡದಿರಲು, ’16 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳನ್ನು ವಯಸ್ಕ’ ಎಂದು ಪರಿಗಣಿಸಿ ವಿಚಾರಣೆ ನಡೆಸಲಾಗುವುದು, ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಕಲಿಯುವ ವಯಸ್ಸಿನಲ್ಲೇ ಮಕ್ಕಳು ಬಲಾತ್ಕಾರದಂತಹ ಹೀನ ಕೃತ್ಯಗಳನ್ನು ಎಸಗುವುದು ಖೇದಕರವಾಗಿದೆ. ಇದು ಸಮಾಜದ ನೈತಿಕತೆ ಕುಸಿದಿರುವುದರ ಸೂಚನೆಯಾಗಿದೆ. ಅಂತಹವರಿಗೆ ಕಠಿಣ ಶಿಕ್ಷೆ ಆಗುವುದು ಆವಶ್ಯಕವಾಗಿದೆ! |