|
ಸೋಯಗಾವ್ (ಜಿಲ್ಲಾ ಛತ್ರಪತಿ ಸಂಭಾಜಿನಗರ) – ಸೋಯಗಾವ್ ತಾಲೂಕಿನ ಬಹುಲ್ಖೇಡದ ಅಫ್ರೋಜ್ ನಜೀರ್ ಪಠಾಣ್ ಎಂಬ ಯುವಕ ಇನ್‌ಸ್ಟಾಗ್ರಾಮ್‌ನಲ್ಲಿ ಛತ್ರಪತಿ ಸಂಭಾಜಿ ಮಹಾರಾಜರನ್ನು ಅವಮಾನಿಸುವ ಮತ್ತು ಔರಂಗಜೇಬನ ಹಾಡಿಹೊಗಳುವ ಆಕ್ಷೇಪಾರ್ಹ ವೀಡಿಯೊವನ್ನು ಪ್ರಸಾರ ಮಾಡಿದ್ದಾನೆ. ಇದರಿಂದಾಗಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. “ಆರೋಪಿ ವಿರುದ್ಧ ಪ್ರಕರಣ ದಾಖಲಾಗುವವರೆಗೆ ಹಿಂದಕ್ಕೆ ಸರಿಯುವುದಿಲ್ಲ” ಎಂದು ಶಿವಾಜಿ ಮಹಾರಾಜರ ಭಕ್ತರು ದೃಢವಾದ ನಿಲುವು ತಳೆದಿದ್ದರು. ಆದ್ದರಿಂದ ಪೊಲೀಸರು ಆರೋಪಿ ಯುವಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಂಪಾದಕೀಯ ನಿಲುವುರಾಜ್ಯದಲ್ಲಿ ಹಿಂದುತ್ವನಿಷ್ಠ ಸರಕಾರವಿದ್ದರೂ ಮತ್ತು ಯಾರ ಹೆಸರಿನಲ್ಲಿ ಜಿಲ್ಲೆಯ ಹೆಸರಿದೆಯೋ ಆ ಛತ್ರಪತಿ ಸಂಭಾಜಿ ಮಹಾರಾಜರನ್ನು ಅವಮಾನಿಸುವವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡಿನ ಸಂಗತಿಯಲ್ಲವೇ ? |