ಹಿರಿಯ ನ್ಯಾಯವಾದಿ ಇಂದಿರಾ ಜಯಸಿಂಹ ಇವರ ಹೇಳಿಕೆ

ನವದೆಹಲಿ – ದೇಶದಲ್ಲಿ ಜಾತ್ಯಾತೀತ ಸಂವಿಧಾನ ಅಸ್ತಿತ್ವದಲ್ಲಿರುವಾಗ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲು ಎಂದಿಗೂ ಸಾಧ್ಯವಿಲ್ಲ. ಅಂದರೆ ಯಾವತ್ತು ನೀವು ಹಿಂದೂ ರಾಷ್ಟ್ರ ಸ್ಥಾಪನೆಯ ನಿರ್ಣಯ ತೆಗೆದುಕೊಳ್ಳುವಿರಿ, ಆಗ ನೀವು ಅದನ್ನು ಸಂವಿಧಾನದವಿಲ್ಲದೆ ಮಾಡಿ. ಆ ದಿನ ಬಂದಾಗ ನಾವು ಏನು ಮಾಡಬೇಕು ಅದನ್ನು ನೋಡುವೆವು. ಇಂದಿನವರೆಗೆ ಇದರ ಬಗ್ಗೆ ನಾವು ಹೇಳಿಕೆ ನೀಡುವ ಅಗತ್ಯ ಇರಲಿಲ್ಲ ಎಂದು, ಹಿರಿಯ ನ್ಯಾಯವಾದಿ ಇಂದಿರಾ ಜಯಸಿಂಹ ಇವರು ಇಲ್ಲಿ ಹೇಳಿದರು. ಅವರು ‘ನ್ಯಾಯಮೂರ್ತಿ ಸುನಂದಾ ಭಂಡಾರೆ ಮೆಮೋರಿಯಲ್ ಲೆಕ್ಚರ್’ ಚರ್ಚಾ ಕೂಟದಲ್ಲಿ ‘ಇಂಡಿಯಾಸ್ ಮಾಡೆಲ್ ಕಾನ್ಸ್ಟಿಟ್ಯೂಷ ನ್ಯಾಲಿಜಮ್’ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು. ಆ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಮದನ ಬಿ. ಲೋಕುರ್, ದೆಹಲಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ವಿಭೂ ಬಖರು ಇವರು ಕೂಡ ಉಪಸ್ಥಿತರಿದ್ದರು.
ನ್ಯಾಯವಾದಿ ಇಂದಿರಾ ಜಯಸಿಂಹ ಇವರು ಮಂಡಿಸಿರುವ ಅಂಶಗಳು :
೧. ‘ರಾಮ’ ಇದು ನನ್ನ ಭಾರತದ ಕುರಿತಾದ ಕಲ್ಪನೆ ಅಲ್ಲ !’
‘ರಾಮ’ ಇದು ನನ್ನ ಭಾರತದ ಕುರಿತಾದ ಕಲ್ಪನೆ ಆಗಿದೆ ಎಂದು ಜನರು ಹೇಳುವುದು ನಾವು ಹಲವಾರು ಬಾರಿ ನೋಡಿದ್ದೇವೆ. ಆದರೆ ನಾನು ಅದನ್ನು ಒಪ್ಪುವುದಿಲ್ಲ. (ಜಯಸಿಂಹ ಇವರ ಹೇಳಿಕೆಯಿಂದಲೇ ಅವರ ಮನಸ್ಸಿನ ಸ್ಥಿತಿ ಏನು ಇದೆ, ಇದು ಸ್ಪಷ್ಟವಾಗುತ್ತದೆ !- ಸಂಪಾದಕರು) ರಾಮ ಇದು ನನ್ನ ಭಾರತದ ಕುರಿತಾದ ಕಲ್ಪನೆ ಅಲ್ಲ. ಭಾರತದ ಸಂವಿಧಾನ ಇದು ನನ್ನ ಭಾರತದ ಕುರಿತಾಗಿರುವ ಪರಿಕಲ್ಪನೆಯಾಗಿದೆ. (ಇಂದಿಗೂ ಯಾವುದೇ ದೇಶ ಸಂವಿಧಾನವಲ್ಲ, ಅದು ರಾಮ ರಾಜ್ಯಕ್ಕೆ ಆದರ್ಶ ಎಂದು ನಂಬಿದೆ. ಮೋಹನದಾಸ ಗಾಂಧಿ ಇವರು ಕೂಡ ರಾಮ ರಾಜ್ಯವನ್ನು ಒಪ್ಪಿದ್ದರು, ಹೀಗೆ ಇರುವಾಗ ಈ ರೀತಿಯ ಹೇಳಿಕೆ ನೀಡುವುದು ಎಂದರೆ ಅತಿಬುದ್ದಿವಂತಿಕೆ ಆಗಿದೆ ! – ಸಂಪಾದಕರು) ನಮಗೆ, ಸಂವಿಧಾನ ಭೂತಕಾಲದ ನಾಗರಿ ಮೌಲ್ಯವನ್ನು ನಿರ್ಲಕ್ಷಿಸುತ್ತದೆ, ಎಂದು ನಮಗೆ ಹೇಳಲಾಗಿದೆ; ಆದರೆ ನಿಖರವಾಗಿ ಭೂತಕಾಲ ಎಂದರೆ ಏನು ? ಎಂಬ ಪ್ರಶ್ನೆ ಉದ್ಭವಿಸುತ್ತದೆ, ನಾನು ಹೇಳಿರುವ ಹಾಗೆ ಸಂವಿಧಾನ ನಿರ್ಮಾಣ ಮಾಡುವಾಗ ನಾವು ಒಂದು ಖಾಲಿ ಸ್ಲೇಟ್ ನಲ್ಲಿ ಕಾರ್ಯ ಮಾಡಿದ್ದೇವೆ.
೨. ನಾವು ಸಂವಿಧಾನದ ರಕ್ಷಣೆ ಮಾಡುವೆವು !
ನಾಗರಿಕರ ಜೊತೆಗೆ ವ್ಯವಹರಿಸುವಾಗ, ಸಂವಿಧಾನ ಅವರಿಗೆ ಮೂಲಭೂತ ಅಧಿಕಾರ ನೀಡುತ್ತದೆ, ರಾಜ್ಯಗಳು ಅದರ ಉಲ್ಲಂಘನೆ ಮಾಡಲು ಸಾಧ್ಯವಿಲ್ಲ. ಪ್ರಸ್ತುತ ಸಂವಿಧಾನ ನಿರಾಕರಿಸುವ ಸವಾಲುಗಳು ಹೆಚ್ಚುತ್ತಿದೆ. ಭಾರತೀಯ ಸಂವಿಧಾನದ ‘ಜಾತ್ಯತೀತ’ನಂತಹ ಮೂಲಭೂತ ತತ್ವಗಳಿಗೆ ಅನೇಕ ಸವಾಲುಗಳು ಎದುರಾಗುತ್ತಿವೆ. ದೇಶದ ಸಂವಿಧಾನದ ಪವಿತ್ರ ಮತ್ತು ಮಹತ್ವ ರಕ್ಷಿಸುವುದಕ್ಕಾಗಿ ನ್ಯಾಯ ವ್ಯವಸ್ಥೆಯ ಮಹತ್ವ ಅನನ್ಯ ಸಾಧಾರಣವಾಗಿದೆ. ದೇಶದಿಂದ ಸಂವಿಧಾನ ಗಡಿಪಾರು ಮಾಡುವ ಪ್ರಯತ್ನ ನಡೆಯುತ್ತಿದ್ದರೆ, ಆಗ ನಾವು ಅದನ್ನು ಎದುರಿಸುವೆವು. ನಾವು ಸಂವಿಧಾನದ ರಕ್ಷಣೆ ಮಾಡುವೆವು. ಇಲ್ಲಿ ನಾವು ಅದಕ್ಕಾಗಿಯೇ ಇರುವುದು. ಸಂವಿಧಾನದ ರಕ್ಷಣೆ ಹೇಗೆ ಮಾಡಬೇಕು ಎಂಬುದು ನಮಗೆ ತಿಳಿದಿದೆ; ಆದರೆ ಸ್ಪಷ್ಟ ಮಾತನಾಡುವ ಧೈರ್ಯ ಇಲ್ಲದಿರುವುದರಿಂದ ಅರ್ಧ ವಾಕ್ಯದಲ್ಲಿ ಹೇಳುವುದು, ಇದು ಹೆದರ ಪುಕ್ಕಲ ಜನರ ಲಕ್ಷಣವಾಗಿದೆ.
೩. ನ್ಯಾಯ ಪಾಲಿಕೆಯು ಅದರ ಪಾತ್ರ ಯಶಸ್ವಿಯಾಗಿ ನೆರವೇರಿಸಿದೆಯೇ ?
ನ್ಯಾಯ ಪಾಲಿಕೆ ಇದು ನಾಗರಿಕರ ಹಕ್ಕುಗಳ ರಕ್ಷಕರಾಗಿರಬೇಕು. ಆದರೆ ಅದು ನಿಜವಾಗಿಯೂ ತನ್ನ ಪಾತ್ರ ಯಶಸ್ವಿಯಾಗಿ ನೆರವೇರಿಸಿದೆಯೇ ? ಹೀಗೆ ಯೋಚನೆ ಮಾಡುವ ಸಮಯ ಬಂದಿದೆ.
೪. ವೈಯಕ್ತಿಕ ಕಾನೂನುಗಳಿಗೆ ಕಾನೂನ ಬಾಹಿರ ಎಂದು ಹೇಳುವಲ್ಲಿ ನ್ಯಾಯಪಾಲಿಕೆ ಹಿಂಜರಿಯುತ್ತದೆ !
ಸಂವಿಧಾನ ಜಾರಿಗೊಳಿಸಿದ ನಂತರ ಕೂಡ ಜಾರಿ ಆಗಿರುವ ವೈಯಕ್ತಿಕ ಕಾನೂನುಗಳು ಕಾನೂನ ಬಾಹಿರ ಎಂದು ಹೇಳುವಲ್ಲಿ ನ್ಯಾಯಪಾಲಿಗೆ ಹಿಂಜರಿಯುತ್ತದೆ. ಸಾಯರಾ ಬಾನು ತೀರ್ಪಿನಲ್ಲಿ (ತಿಹೆರಿ ತಲಾಕ) ಅವರ ಹತ್ತಿರ ಇರುವ ನರಿಮನ್ ಇವರು ಒಬ್ಬರೇ ಈ ಕಾನೂನು ಸಂವಿಧಾನ ವಿರೋಧಿ ಆಗಿದೆ ಎಂದು ಹೇಳಿರುವ ಏಕೈಕ ನ್ಯಾಯಾಧೀಶರಾಗಿದ್ದರು.
೫. ನ್ಯಾಯಾಲಯವು ಮನುಸ್ಮೃತಿ ಓದುವ ಸಲಹೆ ನೀಡುವುದು ತಪ್ಪು !
ಗುಜರಾತ್ ಉಚ್ಚ ನ್ಯಾಯಾಲಯದ ಒಂದು ವಿಭಾಗೀಯ ಪೀಠವು ಗರ್ಭಪಾತದ ಸಂದರ್ಭದ ಮೊಕದ್ದಮೆಯಲ್ಲಿ ಮನುಸ್ಮೃತಿ ಓದುವ ಸಲಹೆ ನೀಡಿತ್ತು. ಹಾಗೂ ‘ಹಿಂದೆ ಹೆಣ್ಣು ಮಕ್ಕಳ ಮದುವೆ ೧೪-೧೫ ವರ್ಷದ ವಯಸ್ಸಿನಲ್ಲಿ ಆಗುತ್ತಿದ್ದವು ಮತ್ತು ಅವರು ೧೭ ವರ್ಷದ ಮುಂಚೆಯೇ ಮಗುವಿಗೆ ಜನ್ಮ ನೀಡುತ್ತಿದ್ದರು’, ಹೀಗೆ ಹೇಳಿದ್ದರು. ಇದರ ಆಧಾರ ನೀಡುತ್ತಾ ಜಯಸಿಂಹ ಇವರು, ಡಾ. ಬಾಬಾ ಸಾಹೇಬ ಅಂಬೇಡ್ಕರ್ ಇವರು ೧೯೨೭ ರಲ್ಲಿ ಮನಸುೃತಿಯನ್ನು ನಿರಾಕರಿಸಿದ್ದರು ಮತ್ತು ಯಾವ ದಿನದಂದು ಅವರು ಮನುಸ್ಮೃತಿ ಸುಟ್ಟು ಹಾಕಿದ್ದರು ಆ ದಿನದಂದು ಇಂದಿಗೂ ಮಹಿಳಾ ಮುಕ್ತಿ ದಿನ ಎಂದು ಆಚರಿಸಲಾಗುತ್ತದೆ, ಎಂದು ಹೇಳಿದರು. (ಯಾವುದೇ ಗ್ರಂಥ ಸುಡುವುದರಿಂದ ಅದರಲ್ಲಿನ ವಿಚಾರ ನಾಶವಾಗುವುದಿಲ್ಲ, ಇದನ್ನು ಇಂತಹ ಬುದ್ಧಿವಂತರಿಗೆ ಯಾರು ಹೇಳುವರು ? – ಸಂಪಾದಕರು)
೬. ಜಾತ್ಯತೀತ ಇಲ್ಲದಿದ್ದರೆ, ಭಾರತದಲ್ಲಿ ಗೃಹಕಲಹ ನಿರ್ಮಾಣವಾಗುವ ಅಪಾಯ !
ಜಾತ್ಯತೀತತೆಯ ರಕ್ಷಣೆ ಮಾಡುವುದು ಎಂದರೆ ‘ಮುಸಲ್ಮಾನ ಜನಾಂಗವನ್ನು ಓಲೈಸುವುದು’ ಹೀಗೆ ಅಲ್ಲ. ತದ್ವಿರುದ್ಧ ಅದು ಭಾರತದ ಐಕ್ಯತೆ ಮತ್ತು ಅಖಂಡತೆಗಾಗಿ ಅಗತ್ಯವಾಗಿದೆ. ಭಾರತ ಜಾತ್ಯತೀತವಾಗಿ ಉಳಿಯದಿದ್ದರೆ, ಇಲ್ಲಿ ಗೃಹ ಯುದ್ಧ ಅಥವಾ ಬಾಹ್ಯ ದಾಳಿಗಳ ಅಪಾಯ ಉಂಟಾಗುತ್ತದೆ. ಬಹುಸಂಖ್ಯಾತ ವಿಚಾರಧಾರೆಯ ಜೊತೆಗೆ ಹೊಂದಿಕೊಳ್ಳುವುದಕ್ಕಾಗಿ ಕಾನೂನಿನ ಅರ್ಥ ಮಾಡಿಕೊಳ್ಳುವುದರಿಂದ ಬಹುಧರ್ಮಿಯ ದೇಶದಲ್ಲಿ ಜಾತ್ಯತೀತತೆ ಅಪಾಯಕ್ಕೆ ಸಿಲುಕುತ್ತದೆ.
ಸಂಪಾದಕೀಯ ನಿಲುವುಪ್ರತಿಯೊಂದು ವಿಷಯದಲ್ಲಿ ಬದಲಾವಣೆ ಮಾಡಲಾಗುತ್ತದೆ. ೧೯೭೫ ರಲ್ಲಿ ಇಂದಿರಾಗಾಂಧಿ ಇವರು ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿ ಸಂವಿಧಾನದಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಈ ಪದಗಳನ್ನು ಬಲವಂತವಾಗಿ ಸೇರಿಸಿದರು. ಅವರು ಹಾಗೆ ಮಾಡಬಹುದಾದರೆ, ಆಗ ಅದೇ ಪದಗಳನ್ನು ಸಂಸತ್ತಿನ ಬಹುಮತದ ಆಧಾರದಲ್ಲಿ ಪ್ರಜಾಪ್ರಭುತ್ವದ ಮಾರ್ಗದಿಂದ ಅವುಗಳು ತೆಗೆದು ಅಲ್ಲಿ ‘ಹಿಂದೂ ರಾಷ್ಟ್ರ’ ಈ ಪದಗಳನ್ನು ಸೇರಿಸಬಹುದು, ಹೀಗೆ ಸಂವಿಧಾನದಲ್ಲಿ ಅಧಿಕಾರ ನೀಡಿದ್ದಾರೆ. ಹೀಗಿರುವಾಗ ಈ ರೀತಿಯ ಹೇಳಿಕೆ ನೀಡುವವರು ‘ಹಿರಿಯ ನ್ಯಾಯವಾದಿ’ ಆಗಿರುವವರು ಎಂದು ಹೇಳುವುದೇ ವಿನೋದವೇ ಆಗುತ್ತದೆ ! |