“ಹೋಳಿ ಆಚರಿಸಿದರೆ, ಹೆಣ ಬಿಳುತ್ತೆ !” – ಮುಸಲ್ಮಾನರಿಂದ ಹಿಂದೂಗಳಿಗೆ ಬೆದರಿಕೆ

ಬರೇಲಿ (ಉತ್ತರಪ್ರದೇಶ) ಇಲ್ಲಿ ಮತಾಂಧ ಮುಸಲ್ಮಾನರಿಂದ ಹಿಂದುಗಳಿಗೆ ಥಳಿಸಿ ಬೆದರಿಕೆ

ಬರೇಲಿ (ಉತ್ತರಪ್ರದೇಶ) – ಬರೇಲಿ ಜಿಲ್ಲೆಯಲ್ಲಿನ ಹಾಜಿಯಾಪುರದಲ್ಲಿ ಹೋಳಿ ಆಚರಿಸಲು ಆಯೋಜನೆ ಮಾಡುವ ಹಿಂದುಗಳ ಮೇಲೆ ಮತಾಂಧ ಮುಸಲ್ಮಾನ ಯುವಕರು ದಾಳಿ ನಡೆಸಿರುವುದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಈ ಪ್ರಕರಣದಲ್ಲಿ ೬ ಮುಸಲ್ಮಾನರ ವಿರುದ್ಧ ದೂರು ದಾಖಲಿಸಿದ್ದಾರೆ. ‘ನೀವೇನಾದರೂ ಹೋಳಿ ಆಚರಿಸಿದರೇ, ಶವಗಳ ರಾಶಿಯೇ ಬೀಳುವುದು, ಎಂದು ಮತಾಂಧ ಮುಸಲ್ಮಾನರು ಬೆದರಿಕೆ ನೀಡಿದ್ದಾರೆಂದು ಹಿಂದುಗಳು ಆರೋಪಿಸಿದ್ದಾರೆ. ಹಾಜಿಯಾಪುರ್, ಜೋಗಿ ನವಾದ ಮತ್ತು ಚಕಮಹಪುರ ಈ ಪ್ರದೇಶ ಸೂಕ್ಷ್ಮ ಕ್ಷೇತ್ರಗಳಾಗಿವೆ. (ಕ್ಷೇತ್ರಗಳ ಹೆಸರುಗಳಿಂದಲೇ ಅಲ್ಲಿ ಯಾರು ಬಹುಸಂಖ್ಯಾತರಿರುವರು, ಇದು ತಿಳಿಯುತ್ತದೆ. ಆದ್ದರಿಂದ ಅಲ್ಲಿ ಯಾರು ಪ್ರಾಬಲ್ಯ ಇದೆ ಮತ್ತು ಈ ಸೂಕ್ಷ್ಮ ಕ್ಷೇತ್ರಗಳು ಏಕೆ ಇವೆ, ಇದು ಕೂಡ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ! – ಸಂಪಾದಕರು) ಈ ಹಿಂದೆ ಕೂಡ ಶ್ರಾವಣ ಮಾಸದಲ್ಲಿ ಇಲ್ಲಿ ವಿವಾದ ಸೃಷ್ಟಿಯಾಗಿತ್ತು. ಆಗ ಕಾವಡ ಯಾತ್ರಿಕರ ಮೇಲೆ ಮತಾಂಧ ಮುಸಲ್ಮಾನರು ಕಲ್ಲುತೂರಾಟ ನಡೆಸಿದ್ದರು.

೧. ಹಾಜಿಯಾಪುರ್ ನಿವಾಸಿ ಲಕ್ಷ್ಮಣ, ಮುನ್ನ, ಶನಿ ಮತ್ತು ಆಕಾಶ್ ಇವರು ಈ ಪರಿಸರದಲ್ಲಿ ಹೋಳಿಯ ಕಾರ್ಯಕ್ರಮದ ಬಗ್ಗೆ ಚರ್ಚಿಸುತ್ತಿದ್ದರು. ಅದೇ ಸಮಯದಲ್ಲಿ ಪರಿಸರದಲ್ಲಿನ ಅಯಾನ್, ಸಲ್ಮಾನ್, ಅಮನ್, ರೆಹಾನ್, ಭುರಾ ಮತ್ತು ಆಲಂ ಸಹಿತ ಇತರ ಅನೇಕ ಮುಸಲ್ಮಾನ ಯುವಕರು ಅಲ್ಲಿ ತಲುಪಿ ಹಠಾತ ದಾಳಿ ನಡೆಸಿ ಜೀವ ಬೆದರಿಕೆ ಕೂಡ ನೀಡಿದರು. ಇದರಲ್ಲಿ ಲಕ್ಷ್ಮಣ್ ಮುನ್ನಾ ಮತ್ತು ಆಕಾಶ್ ಗಾಯಗೊಂಡಿದ್ದಾರೆ. ಲಕ್ಷ್ಮಣ ಮತ್ತು ಅವನ ಜೊತೆಗಾರರ ಪ್ರಕಾರ, ಮುಸಲ್ಮಾನರು ಹೋಳಿಯ ಮೊದಲು ಪರಿಸರದಲ್ಲಿನ ವಾತಾವರಣ ಬೇಕಂತಲೇ ಹದಗೆಡಿಸಿದ್ದಾರೆ’, ಎಂದು ಹೇಳಿದರು.

೨. ಘಟನೆಯ ನಂತರ ಬಾರಾದರಿ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಪರಿಸ್ಥಿತಿಯನ್ನು ಹಿಡಿತಕ್ಕೆ ತಂದರು. ಈ ಪ್ರಕರಣ ಹಿಂದೂ ಮುಸ್ಲಿಮರಿಗೆ ಸಂಬಂಧಪಟ್ಟದಾಗಿರುವುದರಿಂದ ಪೊಲೀಸರು ಸತರ್ಕರಾಗಿದ್ದಾರೆ. ಆದ್ದರಿಂದ ಪರಿಸರದಲ್ಲಿ ಗಸ್ತು ಹೆಚ್ಚಿಸಲಾಗಿದೆ. ಪೊಲೀಸರ ಪ್ರಕಾರ, ಪ್ರಕರಣದ ಗಾಂಭೀರ್ಯತೆ ಗಮನಿಸಿ ಇತರ ಆರೋಪಿಗಳನ್ನು ಬಂಧಿಸುವ ಪ್ರಯತ್ನ ಮುಂದುವರೆದಿದೆ.

ಸಂಪಾದಕೀಯ ನಿಲುವು

ಉತ್ತರಪ್ರದೇಶದಲ್ಲಿ ಭಾಜಪದ ಯೋಗಿ ಆದಿತ್ಯನಾಥ್ ಇವರ ಕಠಿಣ ಕ್ರಮ ಕೈಗೊಳ್ಳುವ ಸರಕಾರ ಇರುವಾಗಲು ಮತಾಂಧರಿಗೆ ಕಡಿವಾಣ ಹಾಕಲಾಗಿಲ್ಲ, ಇದೇ ಇದರಿಂದ ತಿಳಿಯುತ್ತದೆ. ಇಂತಹ ಹಿಂಸಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಸರಕಾರ ಕಾನೂನು ರೂಪಿಸಿ ಅದನ್ನು ತಕ್ಷಣದಿಂದ ಜಾರಿಗೊಳಿಸಲು ಪ್ರಯತ್ನ ಮಾಡಬೇಕು, ಹೀಗೆಯೇ ಹಿಂದುಗಳಿಗೆ ಅನಿಸುತ್ತದೆ !