ಮ್ಯಾನ್ಮಾರ್ ಗಡಿಯಲ್ಲಿ ಚೀನಾದಿಂದ ಬೃಹತ್ ರೇಡಾರ್ ನಿರ್ಮಾಣ: ಭಾರತಕ್ಕೆ ಅಪಾಯ

(ವಸ್ತುವಿನ ಸ್ಥಾನ ಮತ್ತು ವೇಗದ ಮಾಹಿತಿಯನ್ನು ನೀಡುವ ಸಾಧನವನ್ನು ‘ರೇಡಾರ್’ ಎಂದು ಕರೆಯಲಾಗುತ್ತದೆ.)

ಬೀಜಿಂಗ್ – ಚೀನಾವು ಇತ್ತೀಚೆಗೆ ಮ್ಯಾನ್ಮಾರ್ ಗಡಿಯ ಬಳಿ ಯುನಾನ ಪ್ರಾಂತ್ಯದಲ್ಲಿ ಹೊಸ ಬೃಹತ್ ರೇಡಾರ್ ವ್ಯವಸ್ಥೆಯನ್ನು ಸ್ಥಾಪಿಸಿದೆ, ಇದು ಭಾರತದ ಕ್ಷಿಪಣಿ ಕಾರ್ಯಕ್ರಮಕ್ಕೆ ಅಪಾಯಕಾರಿಯಾಗಿದೆ. “ಲಾರ್ಜ್ ಫೊಲ್ಡ ಎರ್ ರೇಡಾರ್ (ಎಲ್.ಪಿ.ಎ.ಆರ್.) ಈ ಸುಧಾರಿತ ರೇಡಾರ್ ವ್ಯವಸ್ಥೆಯ ವ್ಯಾಪ್ತಿಯು 5 ಸಾವಿರ ಕಿಲೋಮೀಟರ್‌ಗಿಂತಲೂ ಹೆಚ್ಚಿದೆ. ಈ ರೇಡಾರ್ ವ್ಯವಸ್ಥೆಯ ಮೂಲಕ, ಚೀನಾವು ಹಿಂದೂ ಮಹಾಸಾಗರದ ದೊಡ್ಡ ಪ್ರದೇಶವನ್ನು ಮತ್ತು ಭಾರತೀಯ ಗಡಿಯೊಳಗೆ ಆಳವಾಗಿ ಮೇಲ್ವಿಚಾರಣೆ ಮಾಡಬಹುದು. ಚೀನಾದ ಈ ರೇಡಾರ್ ವ್ಯವಸ್ಥೆಯ ದೊಡ್ಡ ಅಪಾಯವೆಂದರೆ ಅದು ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮವನ್ನು ಟ್ರ್ಯಾಕ್ ಮಾಡಬಹುದು.

1. “ಎಲ್.ಪಿ.ಎ.ಆರ್.” ಅತ್ಯಾಧುನಿಕ ಬ್ಯಾಲಿಸ್ಟಿಕ್ ಕ್ಷಿಪಣಿ ಮುನ್ನೆಚ್ಚರಿಕೆ ನೀಡುವ ರೇಡಾರ್ ಆಗಿದೆ. ಬ್ಯಾಲಿಸ್ಟಿಕ್ ಕ್ಷಿಪಣಿಗಳು ಜೈವಿಕ, ರಾಸಾಯನಿಕ ಅಥವಾ ಪರಮಾಣು ಶಸ್ತ್ರಾಸ್ತ್ರಗಳನ್ನು ಸಾಗಿಸಬಲ್ಲವು. “ಎಲ್.ಪಿ.ಎ.ಆರ್.” ವ್ಯವಸ್ಥೆಯು ಚೀನಾದ ವಿಸ್ತೃತ ರಕ್ಷಣೆಯ ಆಧಾರಸ್ತಂಭವಾಗಿದೆ ಎಂದು ಹೇಳಲಾಗುತ್ತದೆ. ಈ ವ್ಯವಸ್ಥೆಯಿಂದಾಗಿ ಚೀನಾಗೆ ಭಾರತದ ಕ್ಷಿಪಣಿಯ ಮೇಲೆ ಸೂಕ್ಷ್ಮ ನಿಗಾ ಇಡುವ ಸಾಮರ್ಥ್ಯ ಸಿಕ್ಕಿದೆ.

2. ಭಾರತದೊಂದಿಗಿನ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಚೀನಾವು ಯುನಾನ ಪ್ರಾಂತ್ಯದಲ್ಲಿ “ಎಲ್.ಪಿ.ಎ.ಆರ್.” ಅನ್ನು ಸ್ಥಾಪಿಸಿದೆ. ಇದು ಚೀನಾದ ಆಕ್ರಮಣಶೀಲತೆ ಮತ್ತು ಅದರ ಸುಧಾರಿತ ವ್ಯವಸ್ಥೆಗಳ ಉದಾಹರಣೆಯಾಗಿದೆ.

3. ಭಾರತವು ಇತ್ತೀಚೆಗೆ “ಅಗ್ನಿ-5” ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪ್ರಕ್ಷೇಪಿಸಿದೆ, ಇದರಿಂದ ಚೀನಾ ಹೆದರಿದೆ. ಭಾರತವು ತನ್ನ ಹೈಪರ್ಸಾನಿಕ್ ಕ್ಷಿಪಣಿಯನ್ನು ವೇಗವಾಗಿ ಮುನ್ನಡೆಸುತ್ತಿದೆ ಮತ್ತು ಚೀನಾ ಅದನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದೆ.

ಸಂಪಾದಕೀಯ ನಿಲುವು

ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಮತ್ತು ಅದಕ್ಕಿಂತ ಹೆಚ್ಚಾಗಿ ರಕ್ಷಣಾ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಯುದ್ಧಕ್ಕೆ ಸಿದ್ಧವಾಗುವುದು ಏಕೆ ಅಗತ್ಯ ಎಂಬುದನ್ನು ಇದು ತೋರಿಸುತ್ತದೆ!