(ಎಫ್‌ಬಿಐ ಎಂದರೆ ‘ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್’ – ಒಂದು ತನಿಖಾ ಸಂಸ್ಥೆ)
ವಾಷಿಂಗ್ಟನ (ಅಮೇರಿಕಾ) – ಭಾರತೀಯ ಮೂಲದ ಅಮೇರಿಕನ್ ನಾಗರಿಕರಾಗಿರುವ ಕಶ್ಯಪ (ಕಾಶ) ಪಟೇಲ ಅವರು `ಫೆಡರಲ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ನಿರ್ದೇಶಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ವಿಶೇಷವೆಂದರೆ, ಅವರು ಶ್ರೀಮದ್ ಭಗವದ್ಗೀತೆಯ ಮೇಲೆ ಕೈ ಇಟ್ಟು ಪ್ರಮಾಣ ವಚನ ಸ್ವೀಕರಿಸಿದರು. ಕಾಶ ಪಟೇಲ ಅವರ ಅಧಿಕಾರಾವಧಿ 10 ವರ್ಷಗಳ ವರೆಗೆ ಇರಲಿದೆ.
ಈ ಹಿಂದೆ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರು, ಕಾಶ ಅವರನ್ನು ಇಷ್ಟಪಡಲು ಒಂದು ಪ್ರಮುಖ ಕಾರಣವೆಂದರೆ ಎಲ್ಲಾ ಉದ್ಯೋಗಿಗಳಿಗೆ ಅವರ ಬಗ್ಗೆ ಇರುವ ಗೌರವ ಎಂದು ಹೇಳಿದ್ದರು. ಕಾಶ ಪಟೇಲ ಅವರನ್ನು ಇದುವರೆಗಿನ ಅತ್ಯುತ್ತಮ ನಿರ್ದೇಶಕರೆಂದು ಕರೆಯಲಾಗುತ್ತದೆ. ಅವರು ಒಬ್ಬ ಅತ್ಯಂತ ಶ್ರಮವಹಿಸುವ ಮತ್ತು ದೃಢ ವ್ಯಕ್ತಿತ್ವವುಳ್ಳ ವ್ಯಕ್ತಿಯಾಗಿದ್ದಾರೆ. ಅವರಿಗೆ ಅವರದೇ ಆದ ನಿಲುವುಗಳಿವೆ’, ಎಂದು ಹೇಳಿದರು.
ಕಾಶ ಪಟೇಲ ಯಾರು?
ಕಾಶ ಪಟೇಲ ಅವರ ತಂದೆ-ತಾಯಿ 1970 ರಲ್ಲಿ ಗುಜರಾತ್‌ನಿಂದ ಮೊದಲು ಕೆನಡಾಕ್ಕೆ ವಲಸೆ ಬಂದರು ಮತ್ತು ನಂತರ ನ್ಯೂಯಾರ್ಕ್ನ ಗಾರ್ಡನರ ಸಿಟಿಯಲ್ಲಿ ನೆಲೆಸಿದರು. ಕಾಶ ಪಟೇಲ ಕಾನೂನು ಪದವಿ ಪಡೆದಿದ್ದಾರೆ. ಪಟೇಲ್ ಅವರು ಆಗಿನ ಟ್ರಂಪ್ ಆಡಳಿತದ ಕೊನೆಯ ಕೆಲವು ದಿನಗಳವರೆಗೆ ‘ಚೀಫ್ ಆಫ್ ಸ್ಟಾಫ್’ (ಕಚೇರಿ ಮುಖ್ಯಸ್ಥ) ಆಗಿಯೂ ಸೇವೆ ಸಲ್ಲಿಸಿದ್ದರು.