ಅಮೇರಿಕಾದ ರಕ್ಷಣಾ ಬಜೆಟ್ ನಲ್ಲಿ ಕಡಿತ !

ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರ ನಿರ್ಣಯ

ವಾಷಿಂಗ್ಟನ್ (ಅಮೇರಿಕ) – ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ತಕ್ಷಣ ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅವರು ಈಗ ಅಮೇರಿಕಾದ ಹಿರಿಯ ಸೇನಾ ಅಧಿಕಾರಿಗಳಿಗೆ ರಕ್ಷಣಾ ಬಜೆಟ್‌ನಲ್ಲಿ ಕಡಿತಗೊಳಿಸುವ ಯೋಜನೆಯನ್ನು ರೂಪಿಸಲು ಹೇಳಿದ್ದಾರೆ. ಇದರಿಂದ ಅಮೇರಿಕಾದ ರಕ್ಷಣಾ ಬಜೆಟ್‌ನಲ್ಲಿ ವಾರ್ಷಿಕ 8 ಪ್ರತಿಶತದಷ್ಟು ಕಡಿತವಾಗಬಹುದು. ಇದರಿಂದ ಮುಂದಿನ 5 ವರ್ಷಗಳ ಒಟ್ಟು ಕಡಿತವನ್ನು ನೋಡಿದರೆ, ಅದು 290 ಬಿಲಿಯನ್ ಡಾಲರ್ (ಸುಮಾರು 25 ಲಕ್ಷ ಕೋಟಿ ರೂಪಾಯಿ) ಆಗುವ ಸಾಧ್ಯತೆಯಿದೆ.

1. ಅಮೇರಿಕಾದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಅಮೇರಿಕಾದ ರಕ್ಷಣಾ ಇಲಾಖೆಯ ಮುಖ್ಯ ಕಛೇರಿಯಾಗಿರುವ ಪೆಂಟಗಾನ್‌ಗೆ ದೊಡ್ಡ ಪ್ರಮಾಣದಲ್ಲಿ ಕಡಿತಗೊಳಿಸಲು ಹೇಳಿದ್ದಾರೆ. ಸದ್ಯಕ್ಕೆ ಅಮೇರಿಕಾದ ರಕ್ಷಣಾ ಬಜೆಟ್ 850 ಬಿಲಿಯನ್ ಡಾಲರ್ (ಸುಮಾರು 73 ಲಕ್ಷ ಕೋಟಿ ರೂಪಾಯಿ) ಆಗಿದೆ. ಈ ಕಡಿತವನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಿದರೆ, 5 ವರ್ಷಗಳಲ್ಲಿ ಈ ಅಂಕಿ ಅಂಶವು ಪ್ರತಿ ವರ್ಷ ಕಡಿಮೆಯಾಗುತ್ತಾ ಹೋಗಿ ಸುಮಾರು 560 ಬಿಲಿಯನ್ ಡಾಲರ್ (ಸುಮಾರು 48 ಲಕ್ಷ ಕೋಟಿ ರೂಪಾಯಿ) ಆಗುತ್ತದೆ.

2. ಕಳೆದ ವಾರ ಎಲಾನ್ ಮಸ್ಕ್ ಅವರ ಸರಕಾರಿ ಕಾರ್ಯಕ್ಷಮತೆ ವಿಭಾಗವು ಪೆಂಟಗಾನ್‌ಗೆ ಭೇಟಿ ನೀಡಿದ ನಂತರ ಈ ವರದಿ ಬಂದಿದೆ. ಈ ಬಗ್ಗೆ ಅವರ ಮೇಲೆ ಸೇನೆ ಮತ್ತು ಕಾಂಗ್ರೆಸ್ ಎರಡರಿಂದಲೂ ತೀವ್ರ ಟೀಕೆಗಳು ಬರುತ್ತಿವೆ.