ಪಾಲ್ಘರ್ – ಸನಾತನ ಸಂಸ್ಥೆಯ ಶ್ರದ್ಧಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜ (ಇಂದೋರ್) ಇವರ ಕೃಪಾಛತ್ರದಡಿಯಲ್ಲಿ ಪ.ಪೂ. ರಮಾನಂದ ಮಹಾರಾಜರ ಆಶೀರ್ವಾದದೊಂದಿಗೆ ಪಾಲ್ಘರ್ ಜಿಲ್ಲೆಯ ಮೊಖಾಡಾ ತಾಲೂಕಿನ ಮೋರ್ಚೊಂಡಿ ಇಲ್ಲಿನ ಪ.ಪೂ. ಭಕ್ತರಾಜ ಮಹಾರಾಜ ಆಶ್ರಮದಲ್ಲಿ ಶ್ರೀ ಮಯೂರೇಶ್ವರ ಮಹಾದೇವ ಮಹಾಶಿವರಾತ್ರಿ ಮಹೋತ್ಸವ ಫೆಬ್ರವರಿ ೨೫ ರಿಂದ ನಡೆಯಲಿದೆ.
ಮಂಗಳವಾರ, ಫೆಬ್ರವರಿ ೨೫ ರಂದು ಸಂಜೆ ೭.೩೦ ರಿಂದ ೮ ರವರೆಗೆ ನಿತ್ಯ ಆರತಿ ಮತ್ತು ರಾತ್ರಿ ೮ ರಿಂದ ೯ ರವರೆಗೆ ಭೋಜನ ಇರುತ್ತದೆ. ರಾತ್ರಿ ೯ ಗಂಟೆಗೆ ಪ.ಪೂ. ಭಕ್ತರಾಜ ಮಹಾರಾಜ ರಚಿತ ಭಜನೆಯ ಕಾರ್ಯಕ್ರಮ ನಡೆಯಲಿದೆ.
ಬುಧವಾರ, ಫೆಬ್ರವರಿ ೨೬ ರಂದು ಮಹಾಶಿವರಾತ್ರಿ ಇದೆ. ಆ ನಿಮಿತ್ತ ಬೆಳಗ್ಗೆ ೯ ಗಂಟೆಗೆ ಶಿವಪೂಜೆ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಮೂರ್ತಿಯ ಪೂಜೆ ಇರುತ್ತದೆ. ಬೆಳಗ್ಗೆ ೧೦ ಗಂಟೆಗೆ ಪ.ಪೂ. ಭಕ್ತರಾಜ ಮಹಾರಾಜರ ಪಾದುಕೆಗಳ ಪಲ್ಲಕ್ಕಿ ಮೆರವಣಿಗೆ ಇರುತ್ತದೆ. ಬೆಳಗ್ಗೆ ೧೧ ಗಂಟೆಗೆ ಕಲಶ ಪೂಜೆ ಮತ್ತು ಧ್ವಜಾರೋಹಣ, ನಂತರ ೧೧.೩೦ ರಿಂದ ಮಧ್ಯಾಹ್ನ ೨ ರವರೆಗೆ ಪ್ರಸಾದ ಇರುತ್ತದೆ. ಸಂಜೆ ೭.೩೦ ರಿಂದ ೮ ರವರೆಗೆ ನಿತ್ಯ ಆರತಿ ಮತ್ತು ರಾತ್ರಿ ೮ ರಿಂದ ೯ ರವರೆಗೆ ಪ್ರಸಾದ ಇರುತ್ತದೆ. ರಾತ್ರಿ ೯.೩೦ ಗಂಟೆಗೆ ಪ.ಪೂ. ಭಕ್ತರಾಜ ಮಹಾರಾಜ ರಚಿತ ಭಜನೆಯ ಕಾರ್ಯಕ್ರಮ ನಡೆಯಲಿದೆ.
ಗುರುವಾರ, ಫೆಬ್ರವರಿ ೨೭ ರಂದು ಮಧ್ಯಾಹ್ನ ೧೧ ರಿಂದ ೨ ಗಂಟೆಯವರೆಗೆ ಮಹಾಪ್ರಸಾದ (ಭಂಡಾರ) ಇರುತ್ತದೆ. ಈ ಉತ್ಸವದಲ್ಲಿ ಉಪಸ್ಥಿತರಿದ್ದು ಭಜನೆ ಮತ್ತು ಮಹಾಪ್ರಸಾದದ ಲಾಭವನ್ನು ಪಡೆಯಬೇಕೆಂದು ಶ್ರೀ. ಜಯರಾಮ ಪಾಂಡುರಂಗ ಕಡು (ಮೋರ್ಚೊಂಡಿ) ಮತ್ತು ಶ್ರೀ. ಛಂದಾ ದೀಕ್ಷಿತ ಇವರು ಕರೆ ನೀಡಿದ್ದಾರೆ.