ಭರೂಚ(ಗುಜರಾತ್) ಇಲ್ಲಿನ ಚಿತ್ರಮಂದಿರದಲ್ಲಿನ ಘಟನೆ
ಭರೂಚ (ಗುಜರಾತ್) – ಇಲ್ಲಿನ ಆರ್.ಕೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಜೀವನಾಧಾರಿತ ‘ಛಾವಾ’ ಸಿನಿಮಾ ಪ್ರದರ್ಶನಗೊಳ್ಳುತ್ತಿತ್ತು. ಈ ಸಮಯದಲ್ಲಿ, ಛತ್ರಪತಿ ಸಂಭಾಜಿ ಮಹಾರಾಜರ ಮೇಲೆ ಮೊಘಲರು ಅಮಾನವೀಯ ಅನ್ಯಾಯ-ಅತ್ಯಾಚಾರ ಚಿತ್ರಹಿಂಸೆ ಮಾಡಿದ್ದನ್ನು ತೋರಿಸಲಾಗಿದೆ. ಇದನ್ನು ಸಹಿಸಲಾಗದ ಯುವಕನೊಬ್ಬ ಬೆಂಕಿ ನಂದಿಸುವ ಉಪಕರಣವನ್ನು ತೆಗೆದು ಸಿನಿಮಾ ಪರದೆಯ ಮೇಲೆ ಎಸೆದನು, ಹಾಗಾಗಿ ಪರದೆಯ ಹರಿಯಿತು. ಅಷ್ಟಕ್ಕೆ ನಿಲ್ಲದೆ ಕೈಯಿಂದ ಪರದೆಯನ್ನು ಹರಿದು ಹಾಕಿದನು. ಚಿತ್ರಮಂದಿರದಲ್ಲಿ ಅಡ್ಡಿಪಡಿಸಿದ ಕಾರಣ ಇತರ ಪ್ರೇಕ್ಷಕರು ಅವನನ್ನು ಕೂಗಾಡಲು ಪ್ರಾರಂಭಿಸಿದರು; ಆದರೆ ಅದನ್ನು ಕೇಳುವ ಸ್ಥಿತಿ ಇರಲಿಲ್ಲ. ಪೊಲೀಸರು ಈ ಯುವಕನನ್ನು ವಶಕ್ಕೆ ಪಡೆದರು. ಆತನ ಹೆಸರು ಜಯೇಶ್ ವಸಾವಾ ಎಂದಿದೆ. ಇದಾದ ನಂತರ ಇನ್ನೊಂದು ಪರದೆಯಲ್ಲಿ ಚಲನಚಿತ್ರ ಪ್ರದರ್ಶನಗೊಂಡಿತು.
ಸಂಪಾದಕೀಯ ನಿಲುವುಮೊಘಲರು ಛತ್ರಪತಿ ಸಂಭಾಜಿ ಮಹಾರಾಜರ ಮೇಲೆ ದೌರ್ಜನ್ಯ ಮಾಡಿದರು, ಅದನ್ನು ಚಲನಚಿತ್ರದಲ್ಲಿ ತೋರಿಸುತ್ತಿರುವಾಗ ಯುವಕರಿಗೆ ಸಹನೆ ಆಗುವುದಿಲ್ಲ; ಆದರೆ ಅದನ್ನು ರಾಜರು ಧರ್ಮಕ್ಕಾಗಿ ಹೇಗೆ ಸಹಿಸಿಕೊಂಡಿರಬಹುದು ? ಇದರಿಂದ ಪಾಠ ಕಲಿತು ಹಿಂದೂಗಳು ಧರ್ಮದ ಶಕ್ತಿಯನ್ನು ಜಾಗೃತ ಗೊಳಿಸುವುದು ಅವಶ್ಯಕವಾಗಿದೆ ! |