ಛತ್ರಪತಿ ಸಂಭಾಜಿ ಮಹಾರಾಜರ ಇತಿಹಾಸ ನಮಗೆ ಶಾಲೆಯಲ್ಲಿ ಏಕೆ ಕಲಿಸಲಿಲ್ಲ ? – ಮಾಜಿ ಕ್ರಿಕೆಟ ಪಟು ಆಕಾಶ ಚೋಪ್ರಾ

‘ಛಾವಾ’ ಚಲನಚಿತ್ರದ ಕುರಿತು ಮಾಜಿ ಕ್ರಿಕೆಟ ಪಟು ಮತ್ತು ವಿಮರ್ಶಕ ಆಕಾಶ ಚೋಪ್ರಾ ಇವರ ಪ್ರಶ್ನೆ

ಮುಂಬಯಿ – ನಾನು ‘ಛಾವಾ’ ಚಲನಚಿತ್ರ ನೋಡಿದೆ. ಶೌರ್ಯ ಮತ್ತು ಸಾಹಸ ಪರಾಕ್ರಮ, ದೇಶದ ಕುರಿತಾದ ಕರ್ತವ್ಯ ತೋರಿಸುವಾಗ ಯಾವ ನಿಸ್ವಾರ್ಥ ವೃತ್ತಿಯ ದರ್ಶನವಾಯಿತು, ಅದರಿಂದ ನನ್ನಲ್ಲಿ ಕೆಲವು ಪ್ರಶ್ನೆಗಳು ಉದ್ಭವಿಸಿವೆ. ಶಾಲೆಯಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಇತಿಹಾಸ ನಮಗೆ ಏಕೆ ಕಲಿಸಲಿಲ್ಲ ?, ಎಂದು ಪ್ರಸಿದ್ಧ ಮಾಜಿ ಕ್ರಿಕೆಟ್ ಪಟು ಮತ್ತು ವಿಮರ್ಶಕ ಆಕಾಶ ಚೋಪ್ರಾ ಇವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡುತ್ತಾ ಕೇಳಿದ್ದಾರೆ.

ನಮಗೆ ‘ಅಕ್ಬರ್ ಎಷ್ಟು ಮಹಾನ’ ಎಂದು ಕಲಿಸಿದರು !

ಆಕಾಶ ಚೋಪ್ರಾ ಇವರು ಮಾತು ಮುಂದುವರೆಸುತ್ತಾ, ಛತ್ರಪತಿ ಸಂಭಾಜಿ ಮಹಾರಾಜರ ಇತಿಹಾಸ ಅಂತೂ ಬಿಡಿ; ಆದರೆ ಅವರ ಸಾಮಾನ್ಯ ಉಲ್ಲೇಖ ಕೂಡ ಎಲ್ಲೂ ಇಲ್ಲ. ನಮಗೆ ಅಕ್ಬರ್ ಎಷ್ಟು ಮಹಾನ ಮತ್ತು ನ್ಯಾಯಪ್ರಿಯ ರಾಜನಾಗಿದ್ದನು, ಇದನ್ನು ಕಲಿಸಿದ್ದಾರೆ. ಆದರೆ ರಾಜಧಾನಿ ದೆಹಲಿಯ ಒಂದು ರಸ್ತೆಯ ಹೆಸರು ಔರಂಗಜೇಬ್ ಇದೆ. ಇದೆಲ್ಲಾ ಏಕೆ ಮತ್ತು ಹೇಗೆ ಘಟಿಸಿದೆ ? ಎಂದು ಪ್ರಶ್ನಿಸಿದರು.

ಸಂಪಾದಕೀಯ ನಿಲುವು

ಕಾಂಗ್ರೆಸ್ಸಿನ ಕಾಲದಲ್ಲಿ ಮುಘಲರನ್ನು ಹಾಡಿಹೊಗಳಲಾಯಿತು ಮತ್ತು ಅದನ್ನೆ ದೇಶದಲ್ಲಿನ ವಿದ್ಯಾರ್ಥಿಗಳಿಗೆ ಕಲಿಸಲಾಯಿತು ಹಾಗೂ ಭಾರತೀಯ ಹಿಂದೂ ರಾಜರು ಮತ್ತು ಅವರ ಇತಿಹಾಸವನ್ನು ಹತ್ತಿಕ್ಕಲಾಯಿತು. ಆದ್ದರಿಂದ ಇಂದು ‘ಛಾವಾ’ ಚಲನಚಿತ್ರದಲ್ಲಿ ಅದನ್ನು ತೋರಿಸಲಾಗಿರುವುದರಿಂದ ದೇಶ ಮತ್ತು ವಿದೇಶದಲ್ಲಿನ ಜನರಿಗೆ ಅದು ತಿಳಿಯುತ್ತಿದೆ !