ಪಾಕಿಸ್ತಾನದಲ್ಲಿ ಅಪರಿಚಿತರಿಂದ ಭಯೋತ್ಪಾದಕ ಹಾಫೀಜ್ ಸೈಯಿದನ ಸಹೋದರ ಸಂಬಂಧಿಸಿದಯ ಹತ್ಯೆ

ಇಸ್ಲಾಮಾಬಾದ್ (ಪಾಕಿಸ್ತಾನ) – ಬಹಳ ದಿನದ ನಂತರ ಪಾಕಿಸ್ತಾನದಲ್ಲಿ ಮತ್ತೊಮ್ಮೆ ಅಪರಿಚಿತರಿಂದ ಭಯೋತ್ಪಾದಕನ ಹತ್ಯೆ ನಡೆದಿದೆ. ಹತ್ಯೆಗೀಡಾದ ಭಯೋತ್ಪಾದಕನ ಹೆಸರು ಮೌಲಾನ ಕಾಶಿಫ್ ಅಲಿ ಎಂದಾಗಿದ್ದು ಅವನು ಲಸ್ಕರ್-ಏ-ತೋಯ್ಬಾದ ಹಿರಿಯ ಕಮಾಂಡರ್ ಆಗಿದ್ದ. ಅಷ್ಟೇ ಅಲ್ಲದೆ, ಈ ಸಂಘಟನೆಯ ಮುಖ್ಯಸ್ಥ ಹಾಫೀಜ್ ಸಯೀದ್ ನ ಪತ್ನಿಯ ಸಹೋದರನಾಗಿದ್ದನು. ಕಾಶಿಫ್ ಇವನ ಸಂಘಟನೆಯ, ‘ಪಾಕಿಸ್ತಾನ್ ಮರಕಝಿ ಮುಸ್ಲಿಮ್ ಲೀಗ್’ ರಾಜಕೀಯ ವಿಭಾಗದ ಸದಸ್ಯನು ಆಗಿದ್ದನು. ಪಾಕಿಸ್ತಾನದಲ್ಲಿನ ಖೈಬರ್ ಪಖ್ಟುನಖ್ವಾ ಪ್ರಾಂತದಲ್ಲಿನ ಸ್ವಾಬಿ ಜಿಲೆಯಲ್ಲಿ ಅಪರಿಚಿತ ಬೈಕ್ ಸವಾರನು ಮೌಲಾನ ಕಾಶಿಫ್ ನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದರು.

೧. ಭಯೋತ್ಪಾದಕ ಕಾಶೀಫ್ ಅಲಿ ಮುಸಲ್ಮಾನ ಯುವಕರನ್ನು ಭಯೋತ್ಪಾದಕ ಸಂಘಟನೆಯಲ್ಲಿ ಭರ್ತಿ ಮಾಡುತ್ತಿದ್ದನು. ಕಾಶಿಫ್ ಅಲಿ ಇವನು ಅನೇಕ ಮಸೀದಿ ಮತ್ತು ಮದರಸಾಗಳ ಮುಖ್ಯಸ್ಥ ಕೂಡ ಆಗಿದ್ದನು. ಅವನು ಭಯೋತ್ಪಾದಕರಿಗೆ ಶಿಕ್ಷಣ ನೀಡಿ ಮದರಸಾದಲ್ಲಿ ಕಲಿಯುವ ಯುವಕರನ್ನು ಭಯೋತ್ಪಾದಕ ಸಂಘಟನೆಯಲ್ಲಿ ಸೇರಿಸುತ್ತಿದ್ದನು. ಅದಲ್ಲದೆ ಅವನು ಭಯೋತ್ಪಾದಕರಿಗೆ ಪ್ರಶಿಕ್ಷಣ ಕೇಂದ್ರದಲ್ಲಿ ಜಿಹಾದಿ ಪಾಠಗಳನ್ನು ಕಲಿಸುತ್ತಿದ್ದನು.

೨. ಕಾಶಿಫ್ ಅಲಿಯ ಹತ್ಯೆಯ ನಂತರ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ಅನೇಕ ಸಂಘಟನೆಗಳು ಪಾಕಿಸ್ತಾನ ಸರಕಾರವನ್ನು ಟೀಕಿಸಿದರು. ಹತ್ಯೆ ಮಾಡುವ ಆರೋಪಿಯನ್ನು ತಕ್ಷಣ ಬಂದಿಸಲು ಆಗ್ರಹಿಸಿದ್ದಾರೆ. ಕಾಶಿಫ್ ಅಲಿ ಪಾಕಿಸ್ತಾನವನ್ನು ಪ್ರೀತಿಸುತ್ತಿದ್ದನು ಇದೊಂದೇ ಕಾರಣವಾಗಿತ್ತು, ಎಂದು ಒಂದು ರೀತಿಯ ಪೋಸ್ಟ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ.