USAID Elon Musk : ಭಾರತದಲ್ಲಿ ಮತದಾನವನ್ನು ಹೆಚ್ಚಿಸಲು ಅಮೆರಿಕ 182 ಕೋಟಿ ರೂಪಾಯಿಗಳ ಹಣವನ್ನು ಒದಗಿಸುತ್ತಿತ್ತು! – ಎಲಾನ್ ಮಸ್ಕ್

  • ಅಮೆರಿಕದ ಸರಕಾರಿ ಕಾರ್ಯದಕ್ಷತೆ ಇಲಾಖೆಯ ಅಧ್ಯಕ್ಷ ಎಲಾನ್ ಮಸ್ಕ್ ಆರೋಪ

  • USAID ಯಿಂದ ನೀಡಿದ್ದ ಈ ಹಣ ರದ್ದು !

ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್

ವಾಷಿಂಗ್ಟನ್ (ಅಮೇರಿಕಾ) – ಅಮೆರಿಕದ ಬಿಲಿಯನೇರ್ ಮತ್ತು ಸರಕಾರಿ ಕಾರ್ಯಾದಕ್ಷತೆ ಇಲಾಖೆಯ ಅಧ್ಯಕ್ಷ ಎಲೋನ್ ಮಸ್ಕ್ ಇವರು, ವಿದೇಶಗಳಲ್ಲಿ ಅಮೆರಿಕ ಬೆಂಬಲಿತ ಯೋಜನೆಗಳನ್ನು ನಿರ್ಮೂಲನೆ ಮಾಡುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಭಾರತದಲ್ಲಿ ಮತದಾನದ ಶೇಕಡಾವಾರು ಹೆಚ್ಚಿಸಲು ಅಮೆರಿಕದ ಸಂಸ್ಥೆಗಳು ಭಾರತಕ್ಕೆ 21 ದಶಲಕ್ಷ ಡಾಲರ್ (ಸುಮಾರು ರೂ. 182 ಕೋಟಿ) ಕಳುಹಿಸಿತ್ತು ಎಂದು ಮಸ್ಕ್ ಆರೋಪಿಸಿದ್ದಾರೆ.

ವಿಶೇಷವೆಂದರೆ, ಬಾಂಗ್ಲಾದೇಶದ ರಾಜಕೀಯ ಪರಿಸ್ಥಿತಿಯನ್ನು ಬದಲಾಯಿಸಲು ನೀಡಲಾಗಿದ್ದ 29 ದಶಲಕ್ಷ ಡಾಲರ್ (ಅಂದಾಜು ರೂ. 251 ಕೋಟಿ) ಮೌಲ್ಯದ ಯೋಜನೆಯನ್ನು ಸಹ ರದ್ದುಗೊಳಿಸಲಾಗಿದೆ. ಮಸ್ಕ್ USAID ಅನ್ನು “ಕ್ರಿಮಿನಲ್ ಸಂಸ್ಥೆ” ಎಂದು ಕರೆದಿದ್ದಾರೆ. ಅಷ್ಟೇ ಅಲ್ಲದೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು USAID ಕೆಲವು ಕಟ್ಟರವಾದಿ ಹುಚ್ಚರು ನಡೆಸುತ್ತಿದ್ದರು ಮತ್ತು ನಾವು ಅವರನ್ನು ಹೊರಗೆಳೆಯುತ್ತಿದ್ದೇವೆ’, ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಈ ನಿಧಿಯನ್ನು ಮಾಜಿ ಅಧ್ಯಕ್ಷ ಜೋ ಬಿಡೆನ್ ಅವರ ಸರಕಾರದಲ್ಲಿರುವ ‘ಡೀಪ್ ಸ್ಟೇಟ್’ ಒದಗಿಸಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಭಾರತದಲ್ಲಿ ಮತದಾನದ ಶೇಕಡಾವಾರು ಹೆಚ್ಚಿಸಲು ನೀಡಲಾದ ಹಣವನ್ನು ಯಾವ ರಾಜಕೀಯ ಪಕ್ಷಕ್ಕೆ ಮತ್ತು ಯಾರಿಗೆ ನೀಡಲಾಗಿದೆ ಎಂಬುದನ್ನು ಹೇಳಬೇಕಾಗಿಲ್ಲ !
  • ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಗೆ ಮುನ್ನ, ರಾಜಕೀಯ ಪಕ್ಷಗಳು ಪಡೆಯುತ್ತಿದ್ದ ‘ಚುನಾವಣಾ ಬಾಂಡ್‌ಗಳನ್ನು’ (ಭಾರತದಲ್ಲಿ ರಾಜಕೀಯ ಪಕ್ಷಗಳಿಗೆ ಹಣಕಾಸು ಒದಗಿಸುವ ಒಂದು ವಿಧಾನ) ರದ್ದುಗೊಳಿಸಲು ಕಾಂಗ್ರೆಸ್ ಆಕಾಶ-ಪಾತಾಳ ಒಂದು ಮಾಡಿತ್ತು. ಈಗ ಅಮೆರಿಕದ ಹಣಕಾಸಿನ ವಿಷಯ ಮುನ್ನೆಲೆಗೆ ಬಂದಿದೆ. ಇದು ಕಾಂಗ್ರೆಸ್ ಅಮೆರಿಕದಿಂದ ಈ ಹಣವನ್ನು ಪಡೆದಿದೆಯೇ ಎಂಬುದರ ಕುರಿತು ತನಿಖೆ ಆಗಬೇಕು !