ನೇಪಾಳದ ಕಠ್ಮಂಡುವಿನ ಶಿವಲಿಂಗಕ್ಕೆ ‘ಪಶುಪತಿನಾಥ’ ಎಂದು ಹೇಳಲಾಗುತ್ತದೆ. ಪಶುಪತಿನಾಥನು ಮಹಿಷನ (ಎಮ್ಮೆಯ) ರೂಪ ತಾಳಿದ್ದನು ಎನ್ನುವ ಕಥೆಯಿದೆ. ಎಮ್ಮೆಯ ಮುಂಡ ಕೇದಾರನಾಥ (ಹಿಮಾಲಯ) ಮತ್ತು ಪಶುಪತಿನಾಥ ಅಂದರೆ ರುಂಡ ಎನ್ನುವ ನಂಬಿಕೆಯಿದೆ. ಇದು ಸ್ವಯಂಭೂ ಶಿವಲಿಂಗ ಆಗಿದೆ. ಪಶುಪತಿನಾಥನ ಪೀಠ (ಮೂರ್ತಿ ಪೀಠ) ೪ ಕೈಯಷ್ಟು ಎತ್ತರವಿದೆ. ಅದರ ಮೇಲೆ ಚತುರ್ಮುಖಿ ಶಿವಲಿಂಗವಿದೆ. ಆ ನಾಲ್ಕೂ ಮುಖಗಳಿಗೆ ಮುಖವಾಡ ಹಾಕಲಾಗಿದೆ. ‘ಮಧ್ಯದಲ್ಲಿರುವ ಮುಖ ಐದನೆ ಮುಖವಾಗಿದೆ’, ಎಂದು ನಂಬಲಾಗುತ್ತದೆ. (ಈ ೫ ಮುಖಗಳು ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚ ಮಹಾಭೂತಗಳಿಗೆ ಸಂಬಂಧಿಸಿದೆಯೆಂದು ನಂಬಲಾಗುತ್ತದೆ – ಸಂಕಲನಕಾರರು)
ನೇಪಾಳದ ರಾಜನ ಕುಲದೇವತೆ ಆಗಿರುವ ಪಶುಪತಿನಾಥನಿಗೆ ಪ್ರತಿದಿನ ಮೂರು ಸಲ ಪೂಜೆಯಾಗುತ್ತದೆ. ಅಭಿಷೇಕದ ನಂತರ ದೇವತೆಯ ತಲೆಯ ಮೇಲಿರುವ ಶ್ರೀಯಂತ್ರದ ಪೂಜೆಯಾಗುತ್ತದೆ. ಪ್ರತಿ ಹುಣ್ಣಿಮೆಯಂದು ಮಂದಿರದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಶ್ರೀ ಗುಹ್ಯೇಶ್ವರೀದೇವಿ ಪಶುಪತಿನಾಥನ ಪತ್ನಿ ಆಗಿದ್ದಾಳೆ. ಅವಳ ಮಂದಿರ ಮುಖ್ಯ ಮಂದಿರದ ಸಮೀಪದಲ್ಲಿದೆ. ಪಶುಪತಿನಾಥನ ಸ್ಥಾನ ೧೨ ಜ್ಯೋತಿರ್ಲಿಂಗಗಳಲ್ಲಿ ಇಲ್ಲದಿದ್ದರೂ ಪಶುಪತಿನಾಥನ ಯಾತ್ರೆಯನ್ನು ಅತ್ಯಂತ ಪುಣ್ಯದಾಯಕವೆಂದು ನಂಬಲಾಗುತ್ತದೆ.
– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.