‘ದೆಹಲಿಯಲ್ಲಿ ರಕ್ತಪಾತ ನಡೆಸಿ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವ ಸಮಯ ಬಂದಿದೆಯಂತೆ !’

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ `ಹಮಾಸ್’ ಮತ್ತು ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಗಳ ಘೋಷಣೆ

ನವದೆಹಲಿ – ಇಸ್ರೇಲಿನಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಿರುವ ಹಮಾಸ, ಫೆಬ್ರವರಿ 5 ರಂದು ಕಾಶ್ಮೀರದಲ್ಲಿ ಜೈಶ್-ಎ-ಮಹಮ್ಮದ್ ಮತ್ತು ಲಷ್ಕರ್-ಎ-ತೊಯಬಾದಂತಹ ಜಿಹಾದಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಕೈಜೋಡಿಸಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ರಾವಲಕೋಟದಲ್ಲಿರುವ ಶಹೀದ ಸಾಬೀರ ಕ್ರೀಡಾಂಗಣದಲ್ಲಿ ಆಯೋಜಿಸಲಾದ ‘ಕಾಶ್ಮೀರ ಏಕತಾ ದಿನ’ ಮತ್ತು ‘ಹಮಾಸ್ ಆಪರೇಷನ್ ಅಲ್ ಅಕ್ಸಾ ಫ್ಲಡ್ ಕಾನ್ಫರೆನ್ಸ್’ ಕಾರ್ಯಕ್ರಮದಲ್ಲಿ ಜೈಶ್-ಎ-ಮಹಮ್ಮದನ ಭಯೋತ್ಪಾದಕನೊಬ್ಬ ವೇದಿಕೆಯಿಂದ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವುದಾಗಿ ಘೋಷಿಸಿದನು. ಈ ಭಯೋತ್ಪಾದಕನು ಭಾರತವನ್ನು ಬೆದರಿಸುತ್ತ, ಪ್ಯಾಲೆಸ್ಟೈನ್ ಮತ್ತು ಕಾಶ್ಮೀರದ ಮುಜಾಹಿದ್ದೀನಗಳು (ಇಸ್ಲಾಂ ಧರ್ಮಕ್ಕಾಗಿ ಜಿಹಾದ ನಡೆಸುವ ಜನರು) ಈಗ ಒಂದಾಗಿದ್ದಾರೆ. ದೆಹಲಿಯಲ್ಲಿ ರಕ್ತಪಾತ ನಡೆಸಿ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವ ಸಮಯ ಬಂದಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಜೈಶ್-ಎ-ಮಹಮ್ಮದ ಮುಖ್ಯಸ್ಥ ಮಸೂದ ಅಜಹರನ ಸಹೋದರ ತಲ್ಹಾ ಸೈಫ, ಜೈಶನ ಕಮಾಂಡರ್ ಅಸಗರ ಖಾನ ಕಾಶ್ಮೀರಿ ಮತ್ತು ಮಸೂದ ಇಲಿಯಾಸ ಮತ್ತು ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಹಮಾಸ ಭಯೋತ್ಪಾದಕ ಡಾ. ಖಾಲಿದ ಅಲ್-ಕದೌಮಿ ಕೂಡ ಉಪಸ್ಥಿತರಿದ್ದರು. ಇದು ಹಮಾಸ ಭಯೋತ್ಪಾದಕರು ಕಾಶ್ಮೀರಕ್ಕೆ ನೀಡಿದ ಮೊದಲ ಭೇಟಿಯಾಗಿತ್ತು. ಇದಲ್ಲದೆ, ಅನೇಕ ಪ್ಯಾಲೆಸ್ಟೀನಿ ನಾಯಕರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಾಕಿಸ್ತಾನವು ಫೆಬ್ರವರಿ 5 ರಂದು ‘ಕಾಶ್ಮೀರ ಏಕತಾ ದಿನ’ವನ್ನು ಆಚರಿಸುತ್ತದೆ.

ಸಂಪಾದಕೀಯ ನಿಲುವು

ಪಾಕಿಸ್ತಾನಿ ಭಯೋತ್ಪಾದಕರಿಗೆ ಇಲ್ಲಿಯ ವರೆಗೆ ಸಾಧ್ಯವಾಗದಿರುವುದು ಮುಂದೆಯೂ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಹಮಾಸನ್ನು ತನ್ನೊಂದಿಗೆ ಸೇರಿಸಿಕೊಳ್ಳುವ ಪ್ರಯತ್ನವೂ ವಿಫಲಗೊಳ್ಳುತ್ತದೆ ಎಂಬುದನ್ನು ಅವರು ಗಮನಲ್ಲಿಡಬೇಕು. ಇದಕ್ಕಾಗಿ ಭಾರತವು ಹಮಾಸಗೆ ಎಚ್ಚರಿಕೆ ನೀಡಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ !