೧. ’ಸಾಧಕರು ಗುರುಗಳಿಗೆ ಪ್ರಾಪಂಚಿಕ ವಸ್ತುಗಳ ಬದಲು ಸಾಧನೆಯನ್ನು ಮಾಡಿ ಆಧ್ಯಾತ್ಮಿಕ ಪ್ರಗತಿ ಸಾಧಿಸ್ಸಬೇಕು’, ಎಂಬ ತತ್ತ್ವ ವನ್ನು ಕೃತಿಯಿಂದ ಕಲಿಸುವ ಪರಾತ್ಪರ ಗುರು ಡಾ. ಆಠವಲೆ

’ಪರಾತ್ಪರ ಗುರು ಡಾ. ಆಠವಲೆಯವರಿಗೆ ಉಚ್ಚ ಮಟ್ಟದ ಸುಖ-ಸೌಕರ್ಯಗಳು ಸಹಜವಾಗಿ ಪ್ರಾಪ್ತವಾಗುತ್ತಿದ್ದರೂ ಅವರು ಅವುಗಳಿಂದ ಅಲಿಪ್ತರಾಗಿರುತ್ತಾರೆ, ಹಾಗೆಯೇ ಅವರ ಜೀವನ ವೈರಾಗ್ಯಮಯವಾಗಿದೆ. ಈ ಸಂದರ್ಭದ ಒಂದು ಉದಾಹರಣೆ ಯನ್ನು ಮುಂದೆ ಕೊಡಲಾಗಿದೆ.
೨೦೦೨ ರಲ್ಲಿ ನಾಶಿಕದಲ್ಲಿ ಸನಾತನ ಸಂಸ್ಥೆಯ ಕಾರ್ಯಕ್ಕಾಗಿ ತಾತ್ಕಾಲಿಕವಾಗಿ ಒಂದು ಸೇವಾಕೇಂದ್ರ ಸಿಕ್ಕಿತ್ತು. ಅದರಲ್ಲಿನ ಒಂದು ಕೋಣೆ ಪರಾತ್ಪರ ಗುರು ಡಾಕ್ಟರರಿಗಾಗಿ ಇತ್ತು. ಆ ಕೋಣೆಯಲ್ಲಿ ಮಂಚ, ಕುರ್ಚಿಗಳು ಮತ್ತು ಇತರ ಆವಶ್ಯಕ ಸಾಹಿತ್ಯಗಳಿದ್ದವು. ಒಂದು ಸಲ ಪರಾತ್ಪರ ಗುರು ಡಾಕ್ಟರರು ಒಂದು ಸೇವೆಯ ನಿಮಿತ್ತ ಗೋವಾದಿಂದ ನಾಶಿಕ್‌ಗೆ ಬರುವವರಿದ್ದರು. ಆಗ ಓರ್ವ ಸಾಧಕನ ಮನಸ್ಸಿನಲ್ಲಿ, ’ಪರಾತ್ಪರ ಗುರು ಡಾಕ್ಟರರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಮತ್ತು ಅವರಿಗೆ ಇರಲು ಉತ್ತಮ ಸೌಕರ್ಯವಾಗಬೇಕು; ಎಂಬುದಕ್ಕಾಗಿ ತನ್ನ ಮನೆಯಲ್ಲಿರುವ ಬೆಲೆಬಾಳುವ ಸಾಹಿತ್ಯ, ಪೀಠೋಪಕರಣ, ಮಂಚ, ಇತ್ಯಾದಿಗಳನ್ನು ಸೇವಾಕೇಂದ್ರಕ್ಕೆ ತರಬೇಕು’, ಎಂಬ ವಿಚಾರ ಬಂದಿತು. ಆ ಸಾಧಕನು ಪರಾತ್ಪರ ಗುರು ಡಾಕ್ಟರರ ಕೋಣೆಯಲ್ಲಿನ ಸಾಹಿತ್ಯ ಗಳನ್ನು ಬದಲಾಯಿಸಿ ಅಲ್ಲಿ ತನ್ನ ಮನೆಯಲ್ಲಿನ ಎಲ್ಲ ಹೊಸ ವಸ್ತುಗಳನ್ನು ಇಟ್ಟನು. ಮರುದಿನ ಪರಾತ್ಪರ ಗುರು ಡಾಕ್ಟರರು ಗೋವಾದಿಂದ ನಾಶಿಕ್‌ಗೆ ಬಂದರು. ಅವರು ತಮ್ಮ ಕೋಣೆಯನ್ನು ನೋಡಿದರು ಮತ್ತು ಜವಾಬ್ದಾರ ಸಾಧಕನಿಗೆ, ”ನೀವು ವಿಚಿತ್ರವಾಗಿ ಮಾಡಿರುವಿರಿ ! ನನ್ನ ಕೋಣೆಯನ್ನು ಪಂಚತಾರಾ ಹೊಟೇಲಿನಂತೆ ಮಾಡಿರುವಿರಿ. ಹೀಗೆ ಮಾಡುವುದು ಸರಿಯಲ್ಲ. ’ಆ ಸಾಧಕನಿಗೆ ನೋವಾಗಬಾರದು’, ಎಂಬುದಕ್ಕಾಗಿ ನಾನು ನಾಶಿಕ್‌ನಲ್ಲಿ ಇರುವವರೆಗೆ ಈ ವಸ್ತುಗಳು ನನ್ನ ಕೋಣೆಯಲ್ಲಿರಲಿ. ನಾನು ಗೋವಾಕ್ಕೆ ಹಿಂದಿರುಗಿದ ನಂತರ ಸಾಧಕನು ನನಗಾಗಿ ನೀಡಿದ ಸಾಹಿತ್ಯಗಳನ್ನು ಅವನ ಮನೆಗೆ ತಲುಪಿಸಿ”, ಎಂದರು. ಅನಂತರ ೨-೩ ದಿನಗಳ ನಂತರ ನಾಶಿಕ್ ಜಿಲ್ಲೆಯಲ್ಲಿ ಸಾಧಕರಿಗಾಗಿ ಒಂದು ಸತ್ಸಂಗವಿತ್ತು. ಅದರಲ್ಲಿ ಪರಾತ್ಪರ ಗುರು ಡಾಕ್ಟರರು ಮೇಲಿನ ಪ್ರಸಂಗವನ್ನು ಮಾರ್ಗದರ್ಶನದಲ್ಲಿ ಉಚ್ಚರಿಸುತ್ತಾ, ”ಇದು ನಮ್ಮ ಆಶ್ರಮವಾಗಿದೆ. ಇದನ್ನು ಪಂಚತಾರಾ ಹೊಟೇಲ್‌ನಂತೆ ರೂಪಾಂತರಿಸಬಾರದು. ನನಗೆ ಸಾಧಕರ ಭಾವವು ಮಹತ್ವದ್ದಾಗಿದೆ. ಸಾಧಕರು ಇಂತಹ ಐಹಿಕ ವಿಷಯ ಗಳಲ್ಲಿ ಸಿಲುಕದೇ ಸಾಧನೆಯನ್ನು ಮಾಡಿ ಈಶ್ವರಪ್ರಾಪ್ತಿಯನ್ನು ಮಾಡಿಕೊಂಡರೆ ನನಗೆ ಇಷ್ಟವಾಗುತ್ತದೆ”, ಎಂದು ಹೇಳಿದರು. ಈಗಲೂ ಪರಾತ್ಪರ ಗುರು ಡಾಕ್ಟರರ ಜೀವನಶೈಲಿ ಬಹಳ ಸರಳವಾಗಿದೆ. ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿನ ಅವರ ಕೋಣೆಯಲ್ಲಿ ಮೊದಲಿನಿಂದಲೂ ಒಂದು ಮಂಚ, ಬರವಣಿಗೆಗಾಗಿ ಒಂದು ಮೇಜು, ಕುರ್ಚಿ ಮತ್ತು ಕಪಾಟು, ಇಂತಹ ಅಗತ್ಯದ ಸಾಮಾನುಗಳು ಮಾತ್ರ ಇವೆ. ಇದು ಅವರ ವೈರಾಗ್ಯವೃತ್ತಿಯನ್ನು ತೋರಿಸುತ್ತದೆ.
೨. ಛತ್ರಪತಿ ಶಿವಾಜಿ ಮಹಾರಾಜರ ಅಮೂಲ್ಯ ಉಡುಗೊರೆಯನ್ನು ನಿರಾಕರಿಸಿ ಅವರಿಗೆ ಸಾಧನೆಯನ್ನು ಉಪದೇಶಿಸುವ ಜಗದ್ಗುರು ತುಕಾರಾಮ ಮಹಾರಾಜರು !
ನಾಶಿಕದಲ್ಲಾದ ಮೇಲಿನ ಪ್ರಸಂಗದಲ್ಲಿ ನನಗೆ ’ಸಂತ ತುಕಾರಾಮ’ರ ಒಂದು ಹಳೆಯ ಚಲನಚಿತ್ರದ ಪ್ರಸಂಗದ ನೆನಪಾಯಿತು. ಅದರಲ್ಲಿ ಒಂದು ಬಾರಿ ಛತ್ರಪತಿ ಶಿವಾಜಿ ಮಹಾರಾಜರು ಒಬ್ಬ ಸೇವಕನ ಮೂಲಕ ತುಕಾರಾಮ ಮಹಾರಾಜರಿಗೆ ಉತ್ತಮ ಗುಣಮಟ್ಟದ ಬಟ್ಟೆ ಮತ್ತು ಚಿನ್ನಾಭರಣಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಆಗ ಸಂತ ತುಕಾರಾಮ ಮಹಾರಾಜರು ಆ ಉಡುಗೊರೆಯನ್ನು ಸ್ವೀಕರಿಸಲು ನಿರಾಕರಿಸುತ್ತಾರೆ. ಆ ಸೇವಕನು ಸಂತ ತುಕಾರಾಮ ಮಹಾರಾಜರಿಗೆ, ”ಛತ್ರಪತಿ ಶಿವಾಜಿ ಮಹಾರಾಜರಿಗೆ ತಮಗೆ ಏನಾದರೂ ಕೊಡಬೇಕೆಂಬ ಇಚ್ಛೆ ಇದೆ”, ಎಂದು ಹೇಳಿದರು. ಆಗ ಸಂತ ತುಕಾರಾಮ ಮಹಾರಾಜರು ಅವನಿಗೆ ಮುಂದಿನ ದ್ವಿಪದಿಯ ಮೂಲಕ ಉತ್ತರವನ್ನು ನೀಡುತ್ತಾರೆ.
ಆಮ್ಹೀ ತೇಣೇ ಸುಖೀ | ಮ್ಹಣಾ ವಿಠ್ಠಲ ವಿಠ್ಠಲ ಮುಖೀ ||
ತುಮಚೇಂ ಯೇರ ವಿತ್ತ ಧನ | ಹೇ ಮಜ ಮೃತ್ತಿಕೆ ಸಮಾನ ||
ಕಂಠೀ ಮಿರವಾ ತುಳಶೀ | ವ್ರತ ಕರಾ ಏಕಾದಶೀ ||
ಮ್ಹಣವಾ ಹರಿಚೇ ದಾಸ | ತುಕಾ ಮ್ಹಣೇ ಮಜ ಹೇ ಆಸ ||
ಅರ್ಥ : ತುಕಾರಾಮ ಮಹಾರಾಜರು, ’ವಿಠ್ಠಲನ ಸ್ಮರಣೆಯಲ್ಲಿಯೇ ನಮಗೆ ನಿಜವಾದ ಆನಂದವಿದೆ. ನಿಮ್ಮ ಬಳಿ ಇರುವ ಧನ ಮತ್ತು ಸಂಪತ್ತು ನನಗೆ ಮಣ್ಣಿಗೆ ಸಮಾನವಾಗಿದೆ. ಈ ಬಗ್ಗೆ ನಾವು ಹೇಳುವುದು ಇಷ್ಟೇ, ’ಕೊರಳಲ್ಲಿ ತುಳಸಿ ಮಾಲೆಯನ್ನು ಧರಿಸಿ. ಏಕಾದಶಿಯ ವ್ರತವನ್ನು ಮಾಡಿ, ನೀವು ಹರಿಯ ದಾಸರಾಗಬೇಕು’, ಎಂಬುದೇ ನನ್ನ ಇಚ್ಛೆಯಾಗಿದೆ. ಇದರಿಂದ ’ಸಂತ ತುಕಾರಾಮ ಮಹಾರಾಜರು ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಬೋಧನೆಯಲ್ಲಿ ಹೋಲಿಕೆ ಯಿದೆ’, ಎಂದು ಗಮನಕ್ಕೆ ಬರುತ್ತದೆ.’ – ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೧೦.೨೦೨೪)