ಮೌನಿ ಅಮಾವಾಸ್ಯೆಯ ದುರಂತದ ಹಿನ್ನೆಲೆಯಲ್ಲಿ ಸರಕಾರದಿಂದ ಭಕ್ತರಿಗೆ ಸ್ನಾನ ದಡದಲ್ಲಿ ನಿಲ್ಲದಿರಲು ಸೂಚನೆ !

ಪ್ರಯಾಗರಾಜ ಕುಂಭಮೇಳ 2025

ಪ್ರಯಾಗರಾಜ, ಫೆಬ್ರುವರಿ ೨ (ಸುದ್ಧಿ.) – ಮೌನಿ ಅಮಾವಾಸ್ಯೆಯ ದಿನದಂದು ಕುಂಭಮೇಳದ ಅಮೃತಸ್ನಾನದ ಸಮಯದಲ್ಲಿ ನಡೆದ ದುರಂತದ ಹಿನ್ನೆಲೆಯಲ್ಲಿ ಫೆಬ್ರುವರಿ ಇವತ್ತಿನ ಅಮೃತಸ್ನಾನದ ದೃಷ್ಟಿಯಿಂದ ಸರಕಾರದಿಂದ ಎಚ್ಚರಿಕೆ ವಹಿಸಲಾಗಿದೆ. ಸ್ನಾನಕ್ಕಾಗಿ ತ್ರಿವೇಣಿ ಸಂಗಮದಲ್ಲಿ ಜನಜಂಗುಳಿ ಆಗದಿರುವ ಉದ್ದೇಶದಿಂದ ನಾಗರೀಕರು ತ್ರಿವೇಣಿ ಸಂಗಮದ ಬದಲು ಸ್ನಾನ ದಡಗಳಲ್ಲಿ ಸ್ನಾನ ಮಾಡಲು ಕರೆ ನೀಡಲಾಗುತ್ತಿದೆ ಹಾಗೂ ಸ್ನಾನ ಆದ ನಂತರ ದಡಗಳಲ್ಲಿ ನಿಲ್ಲದಿರಲು ಸರಕಾರದಿಂದ ಸೂಚನೆ ನೀಡಲಾಗಿದೆ.
ಮೌನಿ ಅಮಾವಾಸ್ಯೆಯ ದುರಂತದ ಹಿನ್ನೆಲೆಯಲ್ಲಿ ಫೆಬ್ರುವರಿ ೧ ರಿಂದ ಸಂಪೂರ್ಣ ಮಹಾಕುಂಭಮೇಳದಲ್ಲಿ ಧ್ವನಿವರ್ಧಕದ ಮೂಲಕ ಈ ಕುರಿತಾದ ಸೂಚನೆಗಳು ನಿರಂತರವಾಗಿ ನೀಡಲಾಗುತ್ತಿದೆ. ಮೌನಿ ಅಮಾವಾಸ್ಯೆಯ ನಂತರ ಮಹಾಕುಂಭ ಕ್ಷೇತ್ರದಲ್ಲಿ ಜನಜಂಗುಳಿ ಕಡಿಮೆ ಆಗಿತ್ತು. ಫೆಬ್ರುವರಿ ೩ ರಂದು ಇರುವ ಅಮೃತಸ್ನಾನದ ಪ್ರಯುಕ್ತ ಮಹಾ ಕುಂಭ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದೆ. ಮೌನಿ ಅಮಾವಾಸ್ಯೆಯ ಬೆಳಗಿನ ಜಾವದ ಸ್ನಾನಕ್ಕಾಗಿ ಭಕ್ತರು ರಾತ್ರಿಯಿಂದಲೇ ತ್ರಿವೇಣಿ ದಡದಲ್ಲಿ ಬಹಳಷ್ಟು ಜಂಗುಳಿ ಸೇರಿತ್ತು. ಈ ಜನಜಂಗುಳಿ ತಡೆಯುವುದು ಪೊಲೀಸರಿಗೆ ಹರಸಾಹಸ ಪಡಬೇಕಾಗಿತ್ತು. ಆದ್ದರಿಂದ ಇಂದು ಸ್ನಾನಕ್ಕಾಗಿ ತ್ರಿವೇಣಿ ಸಂಗಮದಲ್ಲಿ ಗದ್ದಲ ಆಗಬಾರದೆಂದು ಸರಕರದಿಂದ ವಿಶೇಷ ಜಾಗ್ರತೆ ವಹಿಸಲಾಗಿದೆ. ತ್ರಿವೇಣಿ ಸಂಗಮದಲ್ಲಿ ಬರುವ ಭಕ್ತರನ್ನು ಇತರ ದಡಗಳಲ್ಲಿ ವಿಭಜಿಸಲು ಸರಕಾರ ಪ್ರಯತ್ನಿಸುತ್ತಿದೆ.

ತಾತ್ಕಾಲಿಕವಾಗಿ ಕಟ್ಟಿರುವ ಸೇತುವೆಗಳನ್ನು ಮುಚ್ಚುವ ಸಾಧ್ಯತೆ !

ಅಮೃತಸ್ನಾನದ ದಿನದಂದು ಪಾಂಟುನ ಸೇತುವೆ (ತಾತ್ಕಾಲಿಕ ಕಟ್ಟಿರುವ ಸೇತುವೆ) ಮುಚ್ಚುವ ಸಾಧ್ಯತೆ ಇದೆ ಎಂದು ಸರಕಾರದಿಂದ ಧ್ವನಿವರ್ಧಕದ ಮೂಲಕ ಸೂಚನೆ ನೀಡಲಾಗಿದೆ. ಮೌನಿ ಅಮಾವಾಸ್ಯೆಯ ದಿನದಂದು ಪಾಂಟುನ ಸೇತುವೆ ಮೇಲೆ ಬಹಳಷ್ಟು ಜನಜಂಗುಳಿ ಸೇರಿ ಕಾಲ್ತುಳಿತದ ಪರಿಸ್ಥಿತಿ ನಿರ್ಮಾಣವಾಗಿತ್ತು. ತ್ರಿವೇಣಿ ಸಂಗಮದಲ್ಲಿನ ಪಾಂಟುನ ಸೇತುವೆ ಮೇಲೆ ಸೇರಿರುವ ಜನಜಂಗುಳಿಯಿಂದ ಭಕ್ತರು ಸೇತುವೆ ಮೇಲಿಂದ ಕೆಳಗೆ ಜಿಗಿದಿದ್ದರು.

ಸರಕಾರವು ಈ ಜಾಗ್ರತೆ ವಹಿಸಬೇಕು !

ಪಾಂಟುನ ಸೇತುವೆ ಮುಚ್ಚಿದರೆ ವೃದ್ಧರಿಗೆ, ಮಹಿಳೆಯರಿಗೆ ಮತ್ತು ಬಾಲಕರಿಗೆ ಬಹಳ ತೊಂದರೆ ಆಗುವುದು. ಅದಕ್ಕಾಗಿ ಪಾಂಟುನ ಸೇತುವೆ ಮುಚ್ಚುವ ಬದಲು ಯಾವ ಪಾಂಟುನ ಸೇತುವೆ ಗಣ್ಯ ವ್ಯಕ್ತಿಗಳಿಗಾಗಿ ಇದೆ, ಯಾವುದು ಭಕ್ತರಿಗಾಗಿ ಇದೆ, ಇದರ ಬಗ್ಗೆ ಜನರಿಗೆ ಆಯಾ ಸಮಯದಲ್ಲಿ ಸೂಚನೆ ನೀಡುವುದು ಆವಶ್ಯಕವಾಗಿದೆ. ಇದರ ಬಗ್ಗೆ ಫಲಕಗಳು ಪಾಂಟುನ ಸೇತುವೆಯ ಮಾರ್ಗಗಳಲ್ಲಿ ಹಾಕುವುದು ಅಗತ್ಯವಾಗಿದೆ. ಪಾಂಟುನ ಸೇತುವೆ ಮೇಲೆ ಭಕ್ತರನ್ನು ಒಂದೇ ಸಲ ಕಳಿಸುವ ಬದಲು ಗುಂಪು ಗುಂಪಾಗಿ ಕಳಿಸುವುದು ಅಗತ್ಯವಾಗಿದೆ. ಹೊಸದಾಗಿ ಬರುವ ಭಕ್ತರಿಗೆ ಕ್ಷೇತ್ರದ ಮಾಹಿತಿ ಇಲ್ಲದಿರುವುದರಿಂದ ಸ್ನಾನಕ್ಕಾಗಿ ಎಲ್ಲಿ ಹೋಗುವುದು, ಇದು ನಿಖರವಾಗಿ ತಿಳಿಯುವುದಿಲ್ಲ. ಜನರು ಗಂಟೆಗಟ್ಟಲೆ ದಾರಿತಪ್ಪಿ ತಿರುಗುತ್ತಾರೆ ಮತ್ತು ಅಲ್ಲಲ್ಲಿಯೇ ಅವರನ್ನು ಪೊಲೀಸರು ತಡೆಯುತ್ತಾರೆ. ಇದರಿಂದಲೇ ಮಾಘೀ ಅಮಾವಾಸ್ಯೆಯ ದಿನದಂದು ಭಕ್ತರಲ್ಲಿ ಆಕ್ರೋಶವಿತ್ತು. ಆದ್ದರಿಂದ ಜನರಿಗೆ ದಡಕ್ಕೆ ಹೋಗಲು ಯಾವ ಮಾರ್ಗ ಇದೆ, ಅದರ ಸೂಚನೆ ಮಾರ್ಗದಲ್ಲಿ ಅಲ್ಲಲ್ಲಿಯೇ ಹಾಕುವುದು ಅಗತ್ಯವಾಗಿದೆ.