ಅಮೇರಿಕದಲ್ಲಿ ಡೆಮಾಕ್ರಟಿಕ್ ಸಂಸದರು ಹಿಂದೂಗಳ ವಿರುದ್ಧ ಧಾರ್ಮಿಕ ಕಟ್ಟರತೆಯನ್ನು ಹರಡುತ್ತಿದ್ದಾರೆ !

ಅಮೇರಿಕದ ‘ರಾಷ್ಟ್ರೀಯ ಗುಪ್ತಚರ’ದ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರಿಂದ ಛೀಮಾರಿ !

ವಾಷಿಂಗ್ಟನ (ಅಮೇರಿಕಾ) – ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಂಪುಟದಲ್ಲಿ ‘ರಾಷ್ಟ್ರೀಯ ಗುಪ್ತಚರ’ದ ನಿರ್ದೇಶಕಿಯಾಗಿರುವ ಭಾರತೀಯ ಮೂಲದ ಮಹಿಳೆ ತುಳಸಿ ಗಬ್ಬಾರ್ಡ್, ಅವರು ಡೆಮಾಕ್ರಟಿಕ ಸಂಸದರ ಕುರಿತು ಹಿಂದೂಗಳು ಮತ್ತು ಹಿಂದೂ ಧರ್ಮದ ವಿರುದ್ಧ ಕಟ್ಟರತೆಯನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು, ಡೆಮಾಕ್ರಟಿಕ್ ಪಕ್ಷವು ಹಿಂದೂಗಳ ವಿರುದ್ಧ ಕಟ್ಟರತೆಯನ್ನು ಉತ್ತೇಜಿಸುತ್ತಿದೆ. ಹಿಂದೆ, ಡೆಮಾಕ್ರಟಿಕ್ ಸಂಸದರು ಅಧ್ಯಕ್ಷ ಟ್ರಂಪ್ ಅವರ ನ್ಯಾಯಾಂಗ ಉಮೇದುವಾರರ ವಿರುದ್ಧ ಉದಾಹರಣೆಗೆ ಎಮಿ ಕೋನಿ ಬ್ಯಾರೆಟ್ ಮತ್ತು ಬ್ರಿಯಾನ್ ಬುಷರ್ ಅವರ ವಿರುದ್ಧ ಕ್ರೈಸ್ತ ವಿರೋಧಿ ಕಟ್ಟರತೆಯನ್ನು ಅವಲಂಬಿಸಿದ್ದರು. ಆ ಸಮಯದಲ್ಲಿ ಸಂಸತ್ತಿನಲ್ಲಿ ಒಬ್ಬ ಡೆಮೋಕ್ರಾಟ್ ಆಗಿ, ನಾನು ಆ ಕ್ರಮಗಳನ್ನು ಖಂಡಿಸಿದೆ; ಏಕೆಂದರೆ ನಾವೆಲ್ಲರೂ ಧಾರ್ಮಿಕ ಕಟ್ಟರತೆಯನ್ನು ಖಂಡಿಸಬೇಕು, ಅದು ಯಾವುದೇ ಧರ್ಮವಾಗಿರಲಿ. ದುರದೃಷ್ಟವಶಾತ್, ಕೆಲವು ಡೆಮಾಕ್ರಟಿಕ್ ಸಂಸದರಿಗೆ ಧಾರ್ಮಿಕ ಸ್ವಾತಂತ್ರ್ಯದ ಅರ್ಥ ತಿಳಿಯುವುದಿಲ್ಲ ಮತ್ತು ಅಮೇರಿಕೆಯ ಸಂವಿಧಾನ ವಿಧಿ 6ರ ಅನುಸಾರ ಯಾವುದೇ ಸರಕಾರಿ ಹುದ್ದೆಯನ್ನು ಅಲಂಕರಿಸಲು ನಿಮ್ಮ ಧಾರ್ಮಿಕ ಗುರುತು ಆವಶ್ಯಕತೆಯಿಲ್ಲ, ಎಂಬ ಅಂಶವನ್ನು ನಿರ್ಲಕ್ಷಿಸುತ್ತಾರೆ. ಈಗ ಅವರು (ನನ್ನ ಆಯ್ಕೆಯ ಬಗ್ಗೆ) ಹಿಂದೂ ಧರ್ಮದ ವಿರುದ್ಧ ಮತಾಂಧ ಕಟ್ಟರತೆಯನ್ನು ಹರಡುತ್ತಿದ್ದಾರೆ ಯಾರಾದರೂ ಹಿಂದೂ ಧರ್ಮದ ಬಗ್ಗೆ ಪ್ರಾಮಾಣಿಕವಾಗಿ ತಿಳಿದುಕೊಳ್ಳಲು ಬಯಸಿದರೆ, ಅವರು ನನ್ನ ‘ಎಕ್ಸ್’ ಖಾತೆಗೆ ಭೇಟಿ ನೀಡಬಹುದು. ಅಲ್ಲಿ ನಾನು ಈ ವಿಷಯದ ಕುರಿತು ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತೇನೆ’, ಎಂದು ಹೇಳಿದರು.

1. ಭಾರತದ ವಿರುದ್ಧದ ಪ್ರಶ್ನೆಗೆ ಉತ್ತರಿಸುತ್ತಾ ತುಳಸಿ ಗಬ್ಬಾರ್ಡ್ ಇವರು, ಅಮೇರಿಕನ್ನರ ಹತ್ಯೆಗೆ ಯಾವುದೇ ವಿದೇಶಿ ನಿರ್ದೇಶನ ನೀಡುತ್ತಿರುವುದು ತೀವ್ರ ಗಂಭೀರ ಕಳವಳಕಾರಿ ವಿಷಯವಾಗಿದ್ದು, ಅದರ ಬಗ್ಗೆ ತನಿಖೆ ನಡೆಸಬೇಕು ಎಂದು ಹೇಳಿದರು.

2. 2023 ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಅಮೇರಿಕನ್ ಪ್ರಜೆಯಾಗಿದ್ದ ಸಿಖ್ ಕಾರ್ಯಕರ್ತೆಯ ಹತ್ಯೆಗೆ ಪ್ರಯತ್ನದ ನೇತೃತ್ವ ವಹಿಸಿರುವ ಆರೋಪದ ಕುರಿತಾದ ಪ್ರಶ್ನೆಗಳಿಗೆ ಗಬ್ಬಾರ್ಡ್ ಉತ್ತರಿಸುತ್ತಿದ್ದರು. ಕೆನಡಾದ ಅಧಿಕಾರಿ ಜೂನ್ 2023 ರಲ್ಲಿ ಹರದೀಪ ಸಿಂಗ್ ನಿಜ್ಜರ್ ಕೆನಡಾದ ನಾಗರಿಕನ ಹತ್ಯೆ ಮಾಡಿರುವ ಬಗ್ಗೆ ಭಾರತ ಸರಕಾರದ ಮೇಲೆ ಆರೋಪ ಹೊರಸಿದ್ದಾರೆ.

ಭಾರತವು ಅಮೇರಿಕದ ಪ್ರಮುಖ ಪಾಲುದಾರ!

ತುಳಸಿ ಗಬ್ಬಾರ್ಡ್ ಮಾತು ಮುಂದುವರಿಸಿ, ಭಾರತವು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಪ್ರಮುಖ ಆರ್ಥಿಕ ಮತ್ತು ಭದ್ರತಾ ಪಾಲುದಾರ ಆಗಿದೆ. ಯಾವುದೇ ಆರೋಪವಿದ್ದರೆ, ಅದನ್ನು ತನಿಖೆ ಮಾಡಬೇಕು. ತನಿಖೆಯ ತೀರ್ಪು ಮತ್ತು ಗುಪ್ತಚರ ಮಾಹಿತಿಯನ್ನು ಅಧ್ಯಕ್ಷರು ಮತ್ತು ನೀತಿ ನಿರೂಪಕರಿಗೆ ಒದಗಿಸಬೇಕು, ಇದರಿಂದ ಅವರು ತಥಾಕಥಿತ ಘಟನೆಯೊಂದಿಗೆ ಮತ್ತು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.

ಸಂಪಾದಕೀಯ ನಿಲುವು

ಹಿಂದೂಗಳ ಪರವಾಗಿ ದೃಢವಾಗಿ ಮಂಡಿಸುವ ತುಳಸಿ ಗಬ್ಬಾರ್ಡ್ ಅವರಿಗೆ ಧನ್ಯವಾದಗಳು ! ಭಾರತದಲ್ಲಿ ಎಷ್ಟು ಸಂಸದರು ಸಂಸತ್ತಿನಲ್ಲಿ ಅಥವಾ ಸರಕಾರಿ ಮಟ್ಟದಲ್ಲಿ ಹಿಂದೂಗಳ ಪರವಾಗಿ ಮಂಡಿಸುತ್ತಾರೆ ?