
‘ಒಮ್ಮೆ ಪರಾತ್ಪರ ಗುರುದೇವರು ನನಗೆ ಎರಡು ದಿನ ಸತತವಾಗಿ ಅವರ ಮಹಾಮೃತ್ಯುಯೋಗದ ಬಗ್ಗೆ ಹೇಳುತ್ತಿದ್ದರು. ನಾವು ಯಾವುದೇ ವಿಷಯದ ಬಗ್ಗೆ ಮಾತನಾಡುವಾಗ ಅವರ ಮೃತ್ಯುಯೋಗದ ವಿಷಯದಿಂದ ಮಾತು ಮುಗಿಯುತ್ತಿತ್ತು. ಅದರಲ್ಲಿನ ಕೆಲವು ಅಂಶಗಳನ್ನು ಇಲ್ಲಿ ನೀಡಲಾಗಿದೆ.
ಪರಾತ್ಪರ ಗುರು ಡಾಕ್ಟರ : ನಾನು ಇನ್ನು ಮುಂದೆ ಮಲಗಿಯೇ ಇರುವೆನು ಮತ್ತು ನಂತರ ನಾನು ಇರುವುದಿಲ್ಲ. (ನನಗೆ ಮರಣ ಬರುವುದು.)
ನಾನು : ಪರಾತ್ಪರ ಗುರು ಡಾಕ್ಟರ್, ನೀವು ನಿಮ್ಮ ಬಗ್ಗೆ ಇಷ್ಟೊಂದು ತ್ರಯಸ್ಥವಾಗಿ ಹೇಗೆ ವಿಚಾರ ಮಾಡುತ್ತೀರಿ ? (‘ಪರಾತ್ಪರ ಗುರು ಡಾಕ್ಟರರ ಆಧ್ಯಾತ್ಮಿಕ ಮಟ್ಟವು ಉನ್ನತವಾಗಿದೆ’, ಎಂದು ನನಗೆ ಗೊತ್ತಿದ್ದರೂ ‘ಅವರ ದೃಷ್ಟಿಕೋನದಿಂದ ಕಲಿಯಲು ಸಿಗಬೇಕು’, ಎಂಬ ಉದ್ದೇಶದಿಂದ ನಾನು ಅವರಿಗೆ ಈ ಪ್ರಶ್ನೆಯನ್ನು ಕೇಳಿದೆ.)
ಪರಾತ್ಪರ ಗುರು ಡಾಕ್ಟರ : ನಾವು ಯಾವುದೇ ಪರಿಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಅಳುತ್ತ ಅಳುತ್ತ ಕಾಯಿಲೆಯನ್ನು ಸಹಿಸುವುದಕ್ಕಿಂತ ನಗುನಗುತ್ತ ಬದುಕಬೇಕು.
ಠೇವಿಲೆ ಅನಂತೆ ತೈಸೇಚಿ ರಾಹಾವೆ | ಚಿತ್ತಿ ಅಸೋ ದ್ಯಾವೆ ಸಮಾಧಾನ ||
(ಅರ್ಥ : ಭಗವಂತನು ನಮಗೆ ಯಾವ ಸ್ಥಿತಿಯಲ್ಲಿ ಇಟ್ಟಿದ್ದಾನೆಯೋ, ಆ ಸ್ಥಿತಿಯಲ್ಲಿರಬೇಕು. ಮನಸ್ಸಿನಲ್ಲಿ ಸಮಾಧಾನವಿರಬೇಕು.)
ಇದು ಸಂತ ತುಕಾರಾಮ ಮಹಾರಾಜರ ಅಭಂಗವು ನಿನಗೆ ಗೊತ್ತಿದೆಯಲ್ಲ ! ನಾನು ಹಾಗೆ ಇರುತ್ತೇನೆ. ಮುಖ್ಯವಾಗಿ ನನಗೆ ಯಾವುದೇ ಕಾಳಜಿ ಎನಿಸುವುದಿಲ್ಲ. ಪುನಃ ಸ್ವಲ್ಪ ಸಮಯದ ನಂತರ..
ಪರಾತ್ಪರ ಗುರು ಡಾಕ್ಟರ : ನನ್ನ ಮಹಾಮೃತ್ಯುಯೋಗವಿದೆ. ನಾನು ಇರಲಾರೆನು.
ನಾನು : ಪರಾತ್ಪರ ಗುರು ಡಾಕ್ಟರ, ನೀವು ನಮ್ಮೆಲ್ಲ ಸಾಧಕರಿಗೆ ಹೀಗೆ ಬಿಟ್ಟು ಹೋಗಲು ಸಾಧ್ಯವಿಲ್ಲ. ನಿಮ್ಮ ಹೊರತು ಈ ಕಾರ್ಯ (ಈಶ್ವರೀ ರಾಜ್ಯದ ಸ್ಥಾಪನೆ)ವನ್ನು ಯಾರು ಮಾಡುವರು ? ನೀವು ನಮಗೆ ಬೇಕು.
ಪರಾತ್ಪರ ಗುರು ಡಾಕ್ಟರ : ದೇವರಿದ್ದಾನಲ್ಲವೇ !
ನಾನು : ನಮ್ಮೆಲ್ಲ ಸಾಧಕರಿಗೆ ನೀವು ಸಗುಣದಲ್ಲಿಯೇ ಬೇಕು. ದೇವರು ನಿರ್ಗುಣವಾಗಿದ್ದಾನೆ. ಅವನು ನಮ್ಮೊಂದಿಗೆ ಮಾತನಾಡುವುದಿಲ್ಲ ಮತ್ತು ಅವನು ಮಾತನಾಡುತ್ತಿದ್ದರೂ, ನಮಗೆ ಅದು ತಿಳಿಯುವುದಿಲ್ಲ !
ಪರಾತ್ಪರ ಗುರು ಡಾಕ್ಟರ : ಅದಕ್ಕಾಗಿ ನೀವು ನಿಮ್ಮ ಸಾಧನೆಯನ್ನು ಹೆಚ್ಚಿಸಬೇಕು.
ಇದಕ್ಕೆ ನಾನು ಏನು ಉತ್ತರಿಸಲೇ ಇಲ್ಲ.
ಪರಾತ್ಪರ ಗುರು ಡಾಕ್ಟರ (ನಗುತ್ತ) : ನಾನು ಹೋದ ಮೇಲೆ (ನಾನು ನಿಧನನಾದ ನಂತರ) ‘ಡಾಕ್ಟರ್ ಇಲ್ಲದಿದ್ದರೂ, ಅವರು ಸತತವಾಗಿ ನನ್ನ ಜೊತೆಯಲ್ಲಿದ್ದಾರೆ’, ಎಂದು ನನಗೆ ಅರಿವಾಗುತ್ತದೆ. ಈ ಅನುಭೂತಿಯನ್ನು ನೀನು ಬರೆದು ಕೊಡುವೆ.
ಪರಾತ್ಪರ ಗುರು ಡಾಕ್ಟರರ ಈ ಮಾತಿನಿಂದ ನಾನು ಸುಮ್ಮನಾದೆನು. ಅನಂತರ ಪರಾತ್ಪರ ಗುರು ಡಾಕ್ಟರರು ನನಗೆ ಅವರ ಮೃತ್ಯು ಯೋಗದ ಬಗ್ಗೆ ಹೇಳಿದರೂ ನಾನು ಅವರಿಗೆ ಮತ್ತೆ ಎಂದಿಗೂ ಅವರ ಸಗುಣ ಅಸ್ತಿತ್ವಕ್ಕಾಗಿ ಒತ್ತಾಯ ಪಡಿಸಲಿಲ್ಲ.’
– ಸುಶ್ರೀ (ಕು.) ರೂಪಾಲಿ ಕುಲಕರ್ಣಿ (ಆಧ್ಯಾತ್ಮಿಕ ಮಟ್ಟ ಶೇ. ೬೧), ಢವಳಿ, ಫೊಂಡಾ, ಗೋವಾ.