
ಮುಂಬಯಿ – ನಾಸಿಕ್-ತ್ರ್ಯಂಬಕೇಶ್ವರದಲ್ಲಿ ೨೦೨೭ ರಲ್ಲಿ ನಡೆಯಲಿರುವ ಸಿಂಹಸ್ಥ ಕುಂಭಮೇಳದ ಲಾಂಛನವನ್ನು ಸಹ್ಯಾದ್ರಿ ಅತಿಥಿಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ಸುನೇತ್ರಾ ಅಜಿತ್ ಪವಾರ್ ಅವರ ಹಸ್ತದಿಂದ ಅನಾವರಣ ಗೊಳಿಸಲಾಯಿತು. ಕುಂಭಮೇಳದ ಲಾಂಛನಕ್ಕಾಗಿ ‘ಕುಂಭಮೇಳ ಪ್ರಾಧಿಕಾರ’ದ ವತಿಯಿಂದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ಸುಮಾರು ೩,೦೦೦ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಈ ಸ್ಪರ್ಧಾಳುಗಳಲ್ಲಿ ಮೂರು ಅತ್ಯುತ್ತಮ ಸ್ಪರ್ಧಾಳುಗಳನ್ನು ಮುಖ್ಯಮಂತ್ರಿಗಳು ಸನ್ಮಾನಿಸಿದರು. ಇದರಲ್ಲಿ ಪ್ರಥಮ ಸ್ಥಾನ ಪಡೆದ ಪುಣೆಯ ಸುಮಿತ್ ಕಾಟೆ ಅವರಿಗೆ ೩ ಲಕ್ಷ ರೂಪಾಯಿಗಳ ಚೆಕ್ ಮತ್ತು ಸ್ಮರಣಿಕೆ, ದ್ವಿತೀಯ ಸ್ಥಾನ ಪಡೆದ ನೋಯ್ಡಾದ ಮಯಾಂಕ್ ನಾಯಕ್ ಅವರಿಗೆ ೨ ಲಕ್ಷ ರೂಪಾಯಿಗಳ ಚೆಕ್ ಮತ್ತು ಸ್ಮರಣಿಕೆ, ಹಾಗೂ ತೃತೀಯ ಸ್ಥಾನ ಪಡೆದ ಪಂಢರಪುರದ ಪಿಯೂಷ್ ಪಿಂಪಳನೇರ್ಕರ್ ಅವರಿಗೆ ೧ ಲಕ್ಷ ರೂಪಾಯಿಗಳ ಚೆಕ್ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪ್ರಾಧಿಕಾರದ ಆಯುಕ್ತ ಶೇಖರ್ ಸಿಂಗ್ ಅವರು ಪ್ರಾಸ್ತಾವಿಕ ಭಾಷಣದ ಮೂಲಕ ಕುಂಭಮೇಳದ ಆಯೋಜನೆಯ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಅಖಾಡಗಳ ಸಾಧು-ಸಂತರು ಉಪಸ್ಥಿತರಿದ್ದರು. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಉಪಸ್ಥಿತರಿದ್ದ ಸಾಧು-ಸಂತರಿಗೆ ಸ್ವಾಗತ ಕೋರಿದರು.
ಲಾಂಛನದ ಮಹತ್ವ!
![]() ಕುಂಭಮೇಳದ ಲಾಂಛನವು ನಾಸಿಕ್ ಮತ್ತು ತ್ರ್ಯಂಬಕೇಶ್ವರದ ಧಾರ್ಮಿಕ ಪರಂಪರೆಗಳನ್ನು ಆಧರಿಸಿದೆ. ಈ ಲಾಂಛನದಲ್ಲಿ ಭಗವಾನ್ ಶಂಕರನ ತ್ರಿಶೂಲವಿದ್ದು, ಅದು ಆಧ್ಯಾತ್ಮಿಕ ಶಕ್ತಿಯ ಸಂಕೇತವಾಗಿದೆ. ತ್ರ್ಯಂಬಕೇಶ್ವರ ದೇವಾಲಯ ಅಂದರೆ ಪ್ರಾದೇಶಿಕ ಪರಂಪರೆಯನ್ನು ಬಿಂಬಿಸುವ ದೇವಾಲಯದ ಪ್ರತಿಕೃತಿಯಾಗಿದೆ. ಲಾಂಛನದಲ್ಲಿ ಕಾಳಾರಾಮ್ ದೇವಾಲಯದ ಕಮಾನನ್ನು ತೋರಿಸಲಾಗಿದೆ. ಗೋದಾವರಿ ನದಿಯ ವೈಶಿಷ್ಟ್ಯವೆಂದರೆ ನದಿಯನ್ನು ‘ಶಿವಲಿಂಗ’ದ ರೂಪದಲ್ಲಿ ತೋರಿಸಲಾಗಿದ್ದು, ಈ ಮೂಲಕ ಕುಂಭಮೇಳದ ಪವಿತ್ರ ಅಮೃತ (ಶಾಹಿ) ಸ್ನಾನದ ಪರಂಪರೆಯ ಮಹತ್ವವನ್ನು ಎತ್ತಿ ತೋರಿಸಲಾಗಿದೆ. |

ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”