ಭಾರತದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವತ್ತ ಒಂದು ಪ್ರಮುಖ ಹೆಜ್ಜೆ!
(AI ಚಾಟ್‌ಬಾಟ್ ಅಥವಾ AI ಚಾಟ್ ಎನ್ನುವುದು ಯಾವುದೇ ಪ್ರಶ್ನೆಗೆ ಉತ್ತರಗಳನ್ನು ಪಡೆಯಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸುವ ಕಂಪ್ಯೂಟರ್ ವ್ಯವಸ್ಥೆಯಾಗಿದೆ. ಉದಾ. ಚಾಟ್ GPT, ಜೆಮಿನಿ, ಇತ್ಯಾದಿ.)
ನವದೆಹಲಿ – ಮುಂದಿನ 10 ತಿಂಗಳಲ್ಲಿ ಭಾರತ ತನ್ನದೇ ಆದ ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್ ಅನ್ನು ಸಿದ್ಧಪಡಿಸಲಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
1. ವೈಷ್ಣವ ಇವರು, AI ಗೆ ಕಂಪ್ಯೂಟಿಂಗ್ ಮೂಲಸೌಕರ್ಯವು ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಭಾರತವು 10 ಸಾವಿರ GPU (ಗ್ರಾಫಿಕ್ಸ್ ಸಂಸ್ಕರಣಾ ಘಟಕ) ಸಾಮರ್ಥ್ಯದ ಗುರಿಯನ್ನು ಸಾಧಿಸಿದೆ. ಈಗ ಅದನ್ನು 18 ಸಾವಿರದ 600 GPU ಗಳಿಗೆ ಹೆಚ್ಚಿಸಲಾಗುವುದು. ಯಾವುದೇ ರೀತಿಯ ಭಾಷಾ ಮಾದರಿಯನ್ನು ಸಿದ್ಧತುಪಡಿಸಲು ಅತ್ಯಾಧುನಿಕ GPU ಗಳು ಬೇಕಾಗುತ್ತವೆ. ಚೀನಾದ ಡೀಪ್‌ಸೆಕ್ AI ಚಾಟ್‌ಬಾಟ್ ‘R-1’ 20,000 GPU ಗಳನ್ನು ಬಳಸುತ್ತದೆ ಹಾಗೂ ಅಮೇರಿಕನ್ AI ಸ್ಟಾರ್ಟ್ಅಪ್ ‘ಓಪನ್ AI’ ತನ್ನ ‘ಚಾಟ್ GPT’ ಗಾಗಿ 25 ಸಾವಿರ GPU ಕ್ಷಮತೆಯನ್ನು ಬಳಸುತ್ತದೆ. ಭಾರತವು ಪ್ರಸ್ತುತ 15 ಸಾವಿರ GPU ಗಳ ಸಾಮರ್ಥ್ಯವನ್ನು ಹೊಂದಿದೆ. ನಾವು 18 ಸಾವಿರ GPU ಗಳೊಂದಿಗೆ ಹಂಚಿಕೆಯ ಕಂಪ್ಯೂಟಿಂಗ್ ಸೌಲಭ್ಯವನ್ನು ಪ್ರಾರಂಭಿಸಿದ್ದೇವೆ, ಇದು ಸಂಶೋಧಕರು ಮತ್ತು ಡೆವಲಪರ್‌ಗಳಿಗೆ ಲಭ್ಯವಿರುತ್ತದೆ.
2. ಭಾರತದ AI ಚಾಟ್‌ಬಾಟ್ ಕೃತಕ ಬುದ್ಧಿಮತ್ತೆ (AI) ಯೋಜನೆಯ ಭಾಗವಾಗಿದೆ. ಈ ಅಭಿಯಾನಕ್ಕಾಗಿ ಭಾರತ 10 ಸಾವಿರದ 750 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ದೇಶವನ್ನು ಮುಂದುವರಿದ ತಂತ್ರಜ್ಞಾನ ಕೇಂದ್ರವನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ. ಈ ಚಾಟ್‌ಬಾಟ್ ಎಲ್ಲಾ ಭಾರತೀಯ ಭಾಷೆಗಳಲ್ಲಿ ಉತ್ತರಗಳು ಮತ್ತು ಪಠ್ಯವನ್ನು ಹೊಂದಿರುತ್ತದೆ. ಈ 4 ಡೆವಲಪರ್ ಕಂಪನಿಗಳನ್ನು ಸಿದ್ಧಪಡಿಸುತ್ತಿದೆ. ಇವುಗಳಲ್ಲಿ ರಿಲಯನ್ಸ್, ಟಾಟಾ ಕಮ್ಯುನಿಕೇಷನ್, ನೆಕ್ಸ್ಟ್‌ಜೆನ್ ಡೇಟಾ ಸೆಂಟರ್ ಮತ್ತು NOTTA ಸೇರಿವೆ.