ಪ್ರಯಾಗರಾಜ ಕುಂಭಮೇಳ 2025

ಪ್ರಯಾಗರಾಜ, ಜನವರಿ 31 (ಸುದ್ದಿ) – ಮಹಾಕುಂಭ ಕ್ಷೇತ್ರಕ್ಕೆ ಬರುವ ಭಕ್ತರಿಗೆ ದಿನಕ್ಕೆ ಎರಡು ಬಾರಿ ಶುದ್ಧ ಮಹಾಪ್ರಸಾದ ಸಿಗಬೇಕು, ಅವರಿಗೆ ಊಟದ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು, ‘ಅಕ್ಷಯಪಾತ್ರ ಫೌಂಡೇಶನ’ ವತಿಯಿಂದ ಮಹಾಕುಂಭ ಕ್ಷೇತ್ರದಲ್ಲಿ ಪ್ರತಿದಿನ 30 ಸಾವಿರ ಭಕ್ತರಿಗೆ ಅನ್ನದಾನ ಸೇವೆಯನ್ನು ನೀಡಲಾಗುತ್ತಿದೆ. ಅಕ್ಷಯ ಪಾತ್ರ ಫೌಂಡೇಶನ’ ಇದು ಇಸ್ಕಾನನೊಂದಿಗೆ ಸಂಯೋಜಿತ ಸಂಸ್ಥೆಯಾಗಿದೆ, ಎಂದು `ಅಕ್ಷಯಪಾತ್ರ ಫೌಂಡೇಶನ’ನ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಭರತರ್ಷಭಾ ದಾಸ ಅವರು ‘ಸನಾತನ ಪ್ರಭಾತ’ಗೆ ಮಾಹಿತಿ ನೀಡಿದರು. ಈ ಸಮಯದಲ್ಲಿ ಅವರು `ಅಕ್ಷಯಪಾತ್ರ’ದ ಅಡುಗೆ ಮನೆಗೆ ಕರೆದೊಯ್ದು ಅಲ್ಲಿ ಆಹಾರವನ್ನು ತಯಾರಿಸುವ ಪ್ರಕ್ರಿಯೆಯ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.
ಶ್ರೀ. ಭರತರ್ಷಭಾ ದಾಸ ಮಾತು ಮುಂದುವರೆಸಿ,
ಈ ಕಾರ್ಯವು ಪ್ರಭು ಶ್ರೀಲಾ ಪ್ರಭುಪಾದರ ಪ್ರೇರಣೆಯಿಂದ ನಡೆಯುತ್ತಿದೆ !

ನಾನು 32 ವರ್ಷಗಳಿಂದ ಈ ಸೇವೆಯಲ್ಲಿದ್ದೇನೆ. ಇಲ್ಲಿ, ಕುಂಭಮೇಳದಲ್ಲಿ ‘ಅಕ್ಷಯಪಾತ್ರ ಫೌಂಡೇಶನ್’ ಮಂಟಪದ ವ್ಯವಸ್ಥೆಗಳನ್ನು ನೋಡುತ್ತಿದ್ದೇವೆ. ಈ ಕಾರ್ಯವು ಭಗವಾನ್ ಶ್ರೀಲ ಪ್ರಭುಪಾದರ ಪ್ರೇರಣೆಯಿಂದ ಪ್ರಾರಂಭಿಸಲ್ಪಟ್ಟಿದೆ. ಅವರು 1971 ಮತ್ತು 1977 ರ ಮಹಾಕುಂಭಗಳಲ್ಲಿ ಭಾಗವಹಿಸಿದ್ದರು. ಅಂದಿನಿಂದ ಈ ಅನ್ನದಾನ ಸೇವೆ ನಡೆಯುತ್ತಿದೆ. ಅನ್ನದಾನ ಸೇವೆಯು ನಮಗೆ ಮುಖ್ಯ ಸೇವೆಯಾಗಿದೆ. ಎಲ್ಲರಿಗೂ ಪೌಷ್ಟಿಕ ಆಹಾರ ಲಭ್ಯವಾಗುವಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.
ಪ್ರತಿದಿನವೂ ದಿನವಿಡೀ ಪೂರ್ಣ ಭೋಜನ ನೀಡಲಾಗುತ್ತಿದೆ!

ಅಕ್ಷಯ ಪಾತ್ರವು ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ನಡೆಯುತ್ತದೆ. ಒಂದು ತಟ್ಟೆಯಲ್ಲಿ ಚಪಾತಿ, ಪಲ್ಯ, ಅನ್ನ, ಬೇಳೆ ಮತ್ತು ಸಿಹಿ ತಿನಿಸುಗಳನ್ನು ಬಡಿಸಲಾಗುತ್ತದೆ. ‘ಅಕ್ಷಯ ಪಾತ್ರ ಫೌಂಡೇಶನ’ ಪ್ರತಿದಿನ ದೇಶಾದ್ಯಂತ 22 ರಿಂದ 23 ಲಕ್ಷ ಮಕ್ಕಳಿಗೆ ಅನ್ನದಾನವನ್ನು ಮಾಡುತ್ತದೆ. ಈ ಸೇವೆಯನ್ನು 16 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಒದಗಿಸಲಾಗುತ್ತಿದೆ. ಮಹಾಕುಂಭದಲ್ಲಿ ಪ್ರತಿದಿನ 15 ಸಾವಿರ ಜನರಿಗೆ ಅನ್ನದಾನ ಮಾಡುತ್ತಿದ್ದೇವೆ. ಸೆಕ್ಟರ್ 4 ರಲ್ಲಿ ಒಂದು ಮೊಬೈಲ್ ಅಡುಗೆಮನೆ ಕಾರ್ಯನಿರ್ವಹಿಸುತ್ತಿದೆ. ಅಲ್ಲಿಯೂ 10 ರಿಂದ 15 ಸಾವಿರ ಜನರಿಗೆ ಅನ್ನದಾನದ ಕಾರ್ಯ ನಡೆಯುತ್ತಿದೆ.

ಪೂರ್ವ ನಿಯೋಜನೆ ಇರುವುದರಿಂದ ಯಾವುದೇ ಆಹಾರ ವ್ಯರ್ಥವಾಗುವುದಿಲ್ಲ !

ಪ್ರತಿದಿನ ಅನ್ನದಾನವಾಗುತ್ತಿರುವ ಸಂಖ್ಯೆಯಿಂದ ನಮ್ಮ ಮುಂದಿನ ನಿಯೋಜನೆಯಾಗುತ್ತಿರುವುದರಿಂದ ಭಗವಂತನ ಕೃಪೆಯಿಂದ ಆಹಾರ ವ್ಯರ್ಥವಾಗುವುದಿಲ್ಲ. ಸುಮಾರು 60-70 ಜನರು ಈ ಸೇವೆ ಮಾಡುತ್ತಿದ್ದಾರೆ. ನಾವು ಅನೇಕರ ಮಾಧ್ಯಮದಿಂದ ನಮಗೆ ಸಹಾಯವಾಗುತ್ತಿದೆ, ಹಾಗೆಯೇ `ಹುಡಕೊ, ಆಕ್ಷನ್ ಟೆಸ್ಸಾ ಸೇರಿದಂತೆ, ಇತರ ಸಂಸ್ಥೆಗಳು ನಮಗೆ ಮಹಾಕುಂಭಮೇಳದಲ್ಲಿ ಆರ್ಥಿಕವಾಗಿ ಕೊಡುಗೆ ನೀಡುತ್ತಿವೆ. ನಮ್ಮ ಅನ್ನದಾನ ಸೇವೆಯನ್ನು ಸಂಪೂರ್ಣ ನಿಯೋಜನೆಯೊಂದಿಗೆ ನಡೆಸಲಾಗುವುದರಿಂದ, ಸಾರಿಗೆ ಅಥವಾ ಇತರ ತೊಂದರೆಗಳು ನಮ್ಮ ಮೇಲೆ ಪರಿಣಾಮವಾಗುವುದಿಲ್ಲ.