ಪ್ರಯಾಗರಾಜ ಮಹಾಕುಂಭ ಮೇಳ 2025

ಪ್ರಯಾಗರಾಜ, ಜನವರಿ 30 (ಸುದ್ದಿ) – ‘ಶಾಸ್ತ್ರ ಧರ್ಮಪ್ರಚಾರ ಸಭಾ’ ಈ ಸಂಘಟನೆಯು ಆಯೋಜಿಸಿದ್ದ ಮಾಘ-ಮೇಳ ವಾರ್ಷಿಕ ಅಧಿವೇಶನದಲ್ಲಿ, ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಅವರು `ಗಂಗಾ ನದಿಯ ಮಹಾನತೆ ಮತ್ತು ಗಂಗಾನದಿಯಲ್ಲಿ ಹೇಗೆ ಸ್ನಾನ ಮಾಡಬೇಕು?’ ಎನ್ನುವ ವಿಷಯದಲ್ಲಿ ಮಾರ್ಗದರ್ಶನ ನೀಡಿದರು. ಅಲೋಪಿ ಬಾಗ್ ಮಾರ್ಗ, ಸೆಕ್ಟರ್ 6 ರಲ್ಲಿ ನಡೆದ ಈ ಅಧಿವೇಶನದಲ್ಲಿ 100 ಕ್ಕೂ ಹೆಚ್ಚು ಭಕ್ತರು ಈ ಮಾರ್ಗದರ್ಶನದ ಲಾಭ ಪಡೆದರು.

ಈ ಸಂದರ್ಭದಲ್ಲಿ ಶ್ರೀ. ರಾಜಹಂಸ ಇವರು ಮಾತನಾಡಿ, ಯಾವುದೇ ಧಾರ್ಮಿಕ ಕೃತಿಯನ್ನು ಮಾಡುವಾಗ ಅದರ ಹಿಂದಿರುವ ಅಧ್ಯಾತ್ಮಿಕ ಶಾಸ್ತ್ರವನ್ನು ತಿಳಿದುಕೊಂಡರೆ, ಆ ಕೃತಿಯನ್ನು ಮಾಡುವಾಗ ಭಕ್ತನ ಭಾವ ವೃದ್ಧಿಸುತ್ತದೆ ಮತ್ತು ಅವನಿಗೆ ಅಧ್ಯಾತ್ಮಿಕ ಮಟ್ಟದಲ್ಲಿ ಅದರ ಲಾಭವಾಗುತ್ತದೆ. ಅದೇ ರೀತಿ, ಗಂಗಾ ಸ್ನಾನದ ಶಾಸ್ತ್ರವನ್ನು ಅರ್ಥಮಾಡಿಕೊಂಡು ಗಂಗಾ ಸ್ನಾನ ಮಾಡಿದರೆ, ಅದು ಖಂಡಿತವಾಗಿಯೂ ಭಕ್ತರಿಗೆ ಲಾಭವಾಗುತ್ತದೆ’, ಎಂದು ಹೇಳಿದರು.