ಸನಾತನ ಗ್ರಂಥ ಪ್ರದರ್ಶನದಿಂದ ಭಕ್ತರಿಗೆ ಧಾರ್ಮಿಕ ಜ್ಞಾನ ಮತ್ತು ಹೊಸ ದಿಕ್ಕ ಸಿಗಲಿದೆ ! – ಟಿ. ರಾಜಾ ಸಿಂಗ್, ಶಾಸಕ, ಭಾಜಪ, ಭಾಗ್ಯನಗರ

ಪ್ರಯಾಗರಾಜ್ ಕುಂಭಮೇಳ 2025

ಗ್ರಂಥ ಪ್ರದರ್ಶನದ ಸಂದರ್ಭದಲ್ಲಿ (ಎಡಗಡೆ) ಶಾಸಕ ಶ್ರೀ.ಟಿ. ರಾಜಾಸಿಂಗ್, (ಬಲಗಡೆ) ಸದ್ಗುರು ಡಾ. ಚಾರುದತ್ತ ಪಿಂಗಳೆ, ಶ್ರೀ. ಚೇತನ ರಾಜಹಂಸ ಮತ್ತು ಇತರ ಗಣ್ಯರು

ಪ್ರಯಾಗರಾಜ್, ಜನವರಿ 29 (ಸುದ್ದಿ) – ಸನಾತನ ಸಂಸ್ಥೆಯು ಮಹಾಕುಂಭ ಪ್ರಯಾಗರಾಜ್‌ನಲ್ಲಿ ಧರ್ಮ ಪ್ರಚಾರಕ್ಕಾಗಿ ಅತ್ಯಂತ ಮುಖ್ಯವಾದ ಗ್ರಂಥ ಪ್ರದರ್ಶನವನ್ನು ಆಯೋಜಿಸಿದೆ. ಪೂಜೆ ಮಾಡುವ ಪದ್ದತಿ ಏನು ? ಕುಂಭ ಕ್ಷೇತ್ರದಲ್ಲಿ ಸ್ನಾನ ಮಾಡುವುದು ಹೇಗೆ? ಅದರ ಮಹತ್ವವೇನು? ಮನೆಯಲ್ಲಿ ದೇವರ ಮನೆ ಎಲ್ಲಿ ಇರಬೇಕು? ಈ ಬಗ್ಗೆ ಮಾಹಿತಿ ನೀಡುವ ಗ್ರಂಥ ಪ್ರದರ್ಶನವಿದೆ. ಈ ಪ್ರದರ್ಶನವನ್ನು ನೋಡಲು ಸಾವಿರಾರು ಭಕ್ತರು ಪವಿತ್ರ ಸ್ನಾನ ಮಾಡಲು ಬರುತ್ತಿದ್ದಾರೆ. ಸನಾತನದ ಗ್ರಂಥಗಳ ಪ್ರದರ್ಶನವನ್ನು ಖಂಡಿತ ನೋಡಬೇಕೆಂದು ಭಕ್ತರಲ್ಲಿ ನಾನು ಮನವಿ ಮಾಡುತ್ತೇನೆ. ಇಲ್ಲಿ ನೀವು ಧಾರ್ಮಿಕ ಜ್ಞಾನ ಮತ್ತು ಸಾಧನೆಯ ಕುರಿತು ಮಾರ್ಗದರ್ಶನ ಪಡೆಯುತ್ತೀರಿ. ಇದು ನಮ್ಮ ಜೀವನಕ್ಕೆ ಹೊಸ ದಿಕ್ಕನ್ನು ನೀಡುತ್ತದೆ ಮತ್ತು ನಮ್ಮ ಜೀವನವನ್ನು ಪರಿವರ್ತಿಸುತ್ತದೆ ಎಂದು ಭಾಗ್ಯನಗರ (ಹೈದರಾಬಾದ್) ಭಾಜಪ ಶಾಸಕ ಶ್ರೀ. ಟಿ. ರಾಜಾಸಿಂಗ್ ಇವರು ಹೇಳಿದರು.

ಕುಂಭ ಕ್ಷೇತ್ರಿ ಸೆಕ್ಟರ್ 19 ರಲ್ಲಿ ನಡೆದ ಸನಾತನದ ಗ್ರಂಥಗಳು ಮತ್ತು ಧರ್ಮ ಶಿಕ್ಷಣಗಳ ಪ್ರದರ್ಶನದಲ್ಲಿ ಶ್ರೀ. ಟಿ. ರಾಜಾಸಿಂಗ್ ಇವರು ಜನವರಿ 27 ರಂದು ಭೇಟಿ ನೀಡಿ ಪರಿಶೀಲಿಸಿದರು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ
ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರ ವಂದನೀಯ ಉಪಸ್ಥಿತಿ ಇತ್ತು. ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸರು ಶ್ರೀ. ಟಿ. ರಾಜಾಸಿಂಗ್ ಅವರಿಗೆ ಪ್ರದರ್ಶನದ ಬಗ್ಗೆ ಮಾಹಿತಿ ನೀಡಿ ಇತರ ವಿಷಯಗಳ ಕುರಿತು ಅವರೊಂದಿಗೆ ಸಂವಾದ ನಡೆಸಿದರು.