Prayagraj Airfare : ಪ್ರಯಾಗರಾಜಗೆ ವಿಮಾನ ಟಿಕೆಟ್ ಬೆಲೆ ಲಕ್ಷ ತಲುಪಿದೆ !

ಬಾಡಿಗೆ 10 ಪಟ್ಟು ಹೆಚ್ಚಾಗಿದೆ !

ಪ್ರಯಾಗರಾಜ (ಉತ್ತರ ಪ್ರದೇಶ) – ಪ್ರಯಾಗರಾಜನಲ್ಲಿ ನಡೆಯುತ್ತಿರುವ ಮಹಾಕುಂಭದ ಮೌನಿ ಅಮಾವಾಸ್ಯೆಯಂದು ಅಮೃತ ಸ್ನಾನ ಮಾಡಲು 10 ಕೋಟಿ ಭಕ್ತರು ಪ್ರಯಾಗರಾಜಗೆ ಬರುತ್ತಾರೆ ಎಂದು ಅಂದಾಜಿಸಲಾಗಿದೆ. ದೇಶದ ಮೂಲೆ ಮೂಲೆಗಳಿಂದ ಭಕ್ತರು ಇಲ್ಲಿಗೆ ಬರುತ್ತಿದ್ದಾರೆ. ಆದ್ದರಿಂದ, ಪ್ರಯಾಗರಾಜಗೆ ಬರುವ ಬಸ್ಸುಗಳು ಮತ್ತು ರೈಲುಗಳಲ್ಲಿ ಭಾರಿ ಜನದಟ್ಟಣೆ ಇರುತ್ತದೆ. ವಿಮಾನ ತಿಕೀಟುಗಳ ಬೇಡಿಕೆ 10 ಪಟ್ಟು ಹೆಚ್ಚಾಗಿದ್ದು, ತಿಕೀಟುಗಳ ದರಗಳು ಕೂಡ ಲಕ್ಷದ ಗಡಿಯನ್ನು ತಲುಪಿವೆ.

ಚೆನ್ನೈನಿಂದ ಪ್ರಯಾಗರಾಜ್‌ಗೆ ‘ರೌಂಡ್ ಟ್ರಿಪ್’ ಟಿಕೆಟ್‌ಗಳ ಬೆಲೆ 1 ಲಕ್ಷದಿಂದ 1 ಲಕ್ಷ 50 ಸಾವಿರವರೆಗೆ ತಲುಪಿದೆ. ಜನವರಿ 29 ರಂದು ಮೌನಿ ಅಮಾವಾಸ್ಯೆಯಂದು ಚೆನ್ನೈನಿಂದ ಮುಂಬಯಿ ಮೂಲಕ (ಒಂದು ನಿಲುಗಡೆ ವಿಮಾನ) ಮಧ್ಯಾಹ್ನ 1.14 ಗಂಟೆಗೆ ಪ್ರಯಾಗರಾಜಗೆ ತಲುಪುವ ವಿಮಾನವು ಜನವರಿ 30 ರಂದು ಮಧ್ಯಾಹ್ನ 2 ಗಂಟೆಗೆ ಚೆನ್ನೈಗೆ ಹೊರಡಲಿದೆ. ಇದಕ್ಕಾಗಿ ಪ್ರಯಾಣಿಕರು 1 ಲಕ್ಷದ 13 ಸಾವಿರ ರೂಪಾಯಿಗಳಷ್ಟು ಭಾರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ರಾಜಧಾನಿ ದೆಹಲಿಯಿಂದ ಪ್ರಯಾಗರಾಜಗೆ `ಏರ್ ಇಂಡಿಯಾ’, ‘ಆಕಾಸಾ ಏರ್’, ‘ಇಂಡಿಗೋ’ ಮತ್ತು ‘ಸ್ಪೈಸ್ ಜೆಟ್’ ವಿಮಾನಯಾನ ಸಂಸ್ಥೆಗಳಲ್ಲಿ ತಿಕೀಟುಗಳು 50 ಸಾವಿರ ರೂಪಾಯಿನಿಂದ 70 ಸಾವಿರ ರೂಪಾಯಿ ವರೆಗೆ ಏರಿವೆ. ‘ಫ್ಲೆಕ್ಸಿ ಫೇರ’ದಿಂದಾಗಿ ವಿಮಾನ ದರಗಳು ಒಂದು ಲಕ್ಷ ರೂಪಾಯಿಗಳವರೆಗೆ ಹೋಗಬಹುದು.

ಹೆಚ್ಚುತ್ತಿರುವ ವಿಮಾನ ದರ !

ರಾಯಪುರ-ಪ್ರಯಾಗರಾಜ 48 ಸಾವಿರ ರೂಪಾಯಿ
ಭುವನೇಶ್ವರ-ಪ್ರಯಾಗರಾಜ 49 ಸಾವಿರ ರೂಪಾಯಿ
ಗುವಾಹಟಿ-ಪ್ರಯಾಗರಾಜ 50 ಸಾವಿರ ರೂಪಾಯಿ
ಜೈಪುರ-ಪ್ರಯಾಗರಾಜ 54 ಸಾವಿರ ರೂಪಾಯಿ
ಕರ್ಣಾವತಿ-ಪ್ರಯಾಗರಾಜ 54 ಸಾವಿರ ರೂಪಾಯಿ
ಭಾಗ್ಯನಗರ-ಪ್ರಯಾಗರಾಜ 54 ಸಾವಿರ ರೂಪಾಯಿ
ಮುಂಬಯಿ-ಪ್ರಯಾಗರಾಜ 60 ಸಾವಿರ ರೂಪಾಯಿ
ಕೋಲಕಾತಾ-ಪ್ರಯಾಗರಾಜ 70 ಸಾವಿರ ರೂಪಾಯಿ
ಬೆಂಗಳೂರು-ಪ್ರಯಾಗರಾಜ 70 ಸಾವಿರ ರೂಪಾಯಿಗಳು
ಲಕ್ಷ್ಮಣಪುರಿ-ಪ್ರಯಾಗರಾಜ 49 ಸಾವಿರ ರೂಪಾಯಿ