ಸನಾತನ ಹಿಂದೂ ರಾಷ್ಟ್ರಕ್ಕಾಗಿ ಹಸ್ತಾಕ್ಷರ ಅಭಿಯಾನ

ಪ್ರಯಾಗರಾಜ, ಜನವರಿ 28 (ಸುದ್ದಿ) – ಸನಾತನ ಬೋರ್ಡ ಬೇಡಿಕೆಗಾಗಿ ಜನವರಿ 27 ರಂದು ಬೆಳಿಗ್ಗೆ 11 ಗಂಟೆಗೆ ಸೆಕ್ಟರ್ ಸಂಖ್ಯೆ 18 ರಲ್ಲಿರುವ ‘ಶಾಂತಿ ಸೇವಾ ಶಿಬಿರ’ ಮಂಟಪದ ಮುಂದೆ ಪ್ರತಿಭಟನೆ ನಡೆಸಲಾಯಿತು. ಈ ಸಮಯದಲ್ಲಿ, ರಸ್ತೆಯಲ್ಲಿ ಹಾದುಹೋಗುವ ಹಿಂದೂಗಳಿಗೆ ಅವರ ಸಂಪೂರ್ಣ ಮಾಹಿತಿಯೊಂದಿಗೆ ಒಂದು ಫಾರ್ಮ್ ಅನ್ನು ನೀಡಿ, ಅದನ್ನು ಭರ್ತಿ ಮಾಡಿಸಿಕೊಂಡು ಹಸ್ತಾಕ್ಷರ ಮಾಡಿಸಿಕೊಳ್ಳಲಾಗುತ್ತಿತ್ತು.

ಈ ಸಮಯದಲ್ಲಿ, ಪ್ರತಿಭಟನಾ ನಿರತ ಹಿಂದೂ ಧರ್ಮಾಭಿಮಾನಿಗಳಿಂದ ‘ಬಹುತ್ ಸಹ ಲಿಯಾ, ಅಬ್ ನಹಿ ಸಹೇಂಗೆ, ಸನಾತನ ಮಂಡಳಿ ಲೇಕರ್ ರಹೇಂಗೆ!’ (ನಾವು ಇಲ್ಲಿಯವರೆಗೆ ಬಹಳಷ್ಟು ಸಹಿಸಿಕೊಂಡಿದ್ದೇವೆ; ಆದರೆ ಈಗ ನಾವು ಅದನ್ನು ಸಹಿಸುವುದಿಲ್ಲ. ನಾವು ಸನಾತನ ಮಂಡಳಿಯನ್ನು ಸ್ಥಾಪಿಸುತ್ತೇವೆ!), ‘ಬಟೇಂಗೆ ತೋ ಕಟೇಂಗೆ (ನಾವು ವಿಭಜಿಸಲ್ಪಟ್ಟರೆ, ಕೊಲ್ಲಲ್ಪಡುತ್ತೇವೆ’)’ ಮತ್ತು ‘ಹಿಂದೂ ಧರ್ಮ ಕಿ ಜಯ’’ ಎಂಬ ಘೋಷಣೆಗಳನ್ನು ಕೂಗಲಾಯಿತು. ನೂರಾರು ಹಿಂದೂಗಳು ‘ಸನಾತನ ಹಿಂದೂ ರಾಷ್ಟ್ರ’ಕ್ಕಾಗಿ ಹಸ್ತಾಕ್ಷರ ಆಂದೋಲನದ ಅರ್ಜಿಗೆ ಸಹಿ ಹಾಕುವ ಮೂಲಕ ಹಿಂದೂ ರಾಷ್ಟ್ರ ಮತ್ತು ಸನಾತನ ಬೋರ್ಡ್‌ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

ಹಿಂದೂಗಳು ಹಸ್ತಾಕ್ಷರ ಹಾಕುವುದರ ಹಿಂದಿನ ಉದ್ದೇಶವನ್ನು ವಿವರಿಸಿ ಸಹಿ ಮಾಡುವಂತೆ ಕೇಳಲಾಗುತ್ತಿತ್ತು. ಈ ಸಮಯದಲ್ಲಿ, ಸನಾತನ ಬೋರ್ಡ್‌ನ ಬೆಂಬಲಕ್ಕಾಗಿ 99273 00037 ಸಂಖ್ಯೆಯನ್ನು ಬಿಡುಗಡೆ ಮಾಡಿ ಅದನ್ನು ಸಂಪರ್ಕ(ಮಿಸ್ಡ್ ಕಾಲ್) ಮಾಡುವಂತೆ ಮನವಿ ಮಾಡಲಾಗುತ್ತಿತ್ತು.