ಗುರು ತೇಗ ಬಹಾದೂರ್ ಅವರ ತ್ಯಾಗ ಹಿಂದೂ ಧರ್ಮದ ರಕ್ಷಣೆಗಾಗಿ ! – ಸ್ವಾಮಿ ಜ್ಞಾನದೇವ ಸಿಂಗ್ ಮಹಾರಾಜ, ಮಹಂತ, ನಿರ್ಮಲ ಪಂಚಾಯತಿ ಆಖಾಡಾ

ನಿರ್ಮಲ ಪಂಚಾಯತಿ ಆಖಾಡಾದ ಸಂತ ಸಮ್ಮೇಳನದಲ್ಲಿ ಸನಾತನ ಧರ್ಮದ ರಕ್ಷಣೆಗೆ ಎಲ್ಲಾ ಆಖಾಡಾಗಳನ್ನು ಒಟ್ಟಾಗುವಂತೆ ಕರೆ !

ಸಂತ ಸಭೆಯಲ್ಲಿ ಭಾಗವಹಿಸಿದ ಸಂತಗಣ

ಪ್ರಯಾಗರಾಜ, ೨೬ ಜನವರಿ (ವಾರ್ತೆ.) – ಸನಾತನ ಧರ್ಮದ ರಕ್ಷಣೆಗೆ ಎಲ್ಲಾ ಆಖಾಡಾಗಳ ಒಗ್ಗಟ್ಟು ಅಗತ್ಯವಿದೆ. ಸನಾತನ ಧರ್ಮದ ರಕ್ಷಣೆಗೆ ಸಿಖ್‌ಗಳು ಸದಾ ಸಿದ್ಧರಿರುತ್ತಾರೆ. ಗುರು ತೇಗ್ ಬಹಾದ್ದೂರ್ ಅವರು ಕೇವಲ ಸಿಖ್‌ಗಳಿಗೆ ಮಾತ್ರವಲ್ಲ, ಸನಾತನ ಧರ್ಮದ ರಕ್ಷಣೆಗೆ ತಮ್ಮ ಪ್ರಾಣವನ್ನು ತ್ಯಜಿಸಿದ್ದಾರೆ ಎಂದು ನಿರ್ಮಲ ಪಂಚಾಯತಿ ಆಖಾಡಾದ ಪೀಠಾಧೀಶ್ವರ ಮಹಂತ್ ಸ್ವಾಮಿ ಜ್ಞಾನನದೇವ ಸಿಂಗ್ ಮಹಾರಾಜ ಇವರು ಹೇಳಿದರು. ನಿರ್ಮಲ ಆಖಾಡದ ವತಿಯಿಂದ ಜನವರಿ 25 ರಂದು ಮಹಾಕುಂಭಮೇಳದಲ್ಲಿ ಸಂತ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಈ ಸಂತ ಸಮ್ಮೇಳನದಲ್ಲಿ ವಿವಿಧ ಆಖಾಡಾಗಳ ಮುಖ್ಯ ಸಂತಗಣ ಭಾಗವಹಿಸಿದ್ದರು. ಸಿಖ್ ಧರ್ಮಗುರು ತೇಗ್ ಬಹಾದ್ದೂರ್ ಅವರ ೩೫೦ನೇ ಹುತಾತ್ಮ ವರ್ಷಾಚರಣೆ ಪ್ರಯುಕ್ತ ಈ ಸಮ್ಮೇಳನವನ್ನು ಅವರ ಚರಣಕ್ಕೆ ಸಮರ್ಪಿಸಲಾಯಿತು. “ಭಾಜಪಾದ ಸಂಸದರಾದ ಸ್ವಾಮಿ ಸಾಕ್ಷಿ ಮಹಾರಾಜ ಕೂಡ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ನಿರ್ಮಲ ಪಂಚಾಯತಿ ಆಖಾಡಾದ ಜೊತೆಗೆ ಭಾಗವಹಿಸಿದ ಇತರ ಆಖಾಡಾಗಳ ಪ್ರತಿನಿಧಿಗಳು ಕೂಡ ಈ ಸಂದರ್ಭದಲ್ಲಿ ಮಾರ್ಗದರ್ಶನ ಮಾಡಿದರು. ಈ ಮಾರ್ಗದರ್ಶನದಲ್ಲಿ ಎಲ್ಲಾ ಗಣ್ಯರು ಸನಾತನ ಧರ್ಮದ ರಕ್ಷಣೆಗೆ ಒಟ್ಟಾಗುವಂತೆ ಕರೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಂತ ಸಮ್ಮೇಳನದಲ್ಲಿ ಭಾಗವಹಿಸಿದ ವಿವಿಧ ಗಣ್ಯರಿಂದ ಮಹಂತ ಸ್ವಾಮಿ ಜ್ಞಾನದೇವ ಸಿಂಗ್ ಮಹಾರಾಜ ಅವರಿಗೆ ಗೌರವ ಸಲ್ಲಿಸಲಾಯಿತು.

ಪೀಠಾಧೀಶ್ವರ ಮಹಂತ ಸ್ವಾಮಿ ಜ್ಞಾನದೇವ ಸಿಂಗ್ ಮಹಾರಾಜ ಇವರು ಮಾತನಾಡುತ್ತಾ, “ಒಂದು ಬೆರಳಿನಿಂದ ಪ್ರತಿಕಾರ ಮಾಡಲು ಸಾಧ್ಯವಿಲ್ಲ. ೫ ಬೆರಳುಗಳ ಮುಷ್ಟಿಯಾದರೆ ಮಾತ್ರ ಪ್ರಹಾರ ಮಾಡಲು ಸಾಧ್ಯ ಹೀಗೆ ಸಂಘಟಿತವಾಗಿ ಸನಾತನ ಧರ್ಮದ ರಕ್ಷಣೆ ಮಾಡಿ ತೋರಿಸಬೇಕಾಗಿದೆ. ಗುರು ತೇಗ್ ಬಹಾದ್ದೂರ್ ಅವರ ತ್ಯಾಗ ಮತ್ತು ಶೌರ್ಯವನ್ನು ಸ್ಮರಿಸಿ ಸನಾತನ ಧರ್ಮದ ರಕ್ಷಣೆಗೆ ಎಲ್ಲರೂ ಒಗ್ಗಟ್ಟಾಗಬೇಕು”, ಎಂದು ಹೇಳಿದರು.

ಸಂತ ಸಮ್ಮೇಳನಕ್ಕೆ ಹಿಂದೂ ಜನಜಾಗೃತಿ ಸಮಿತಿಗೆ ಆಹ್ವಾನ !

ನಿರ್ಮಲ ಪಂಚಾಯತಿ ಆಖಾಡಾದ ವತಿಯಿಂದ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರಿಗೆ ಸನ್ಮಾನ

ಈ ಸಂತ ಸಮ್ಮೇಳನಕ್ಕೆ ನಿರ್ಮಲ ಪಂಚಾಯತಿ ಆಖಾಡದಿಂದ ಹಿಂದೂ ಜನಜಾಗೃತಿ ಸಮಿತಿಗೆ ಆಹ್ವಾನ ನೀಡಲಾಯಿತು. ಸಮಿತಿಯ ರಾಷ್ಟ್ರಿಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಾಗಿದ್ದರು. ಈ ಸಂದರ್ಭದಲ್ಲಿ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರು ಮಹಂತ್ ಸ್ವಾಮಿ ಜ್ಞಾನನದೇವ ಸಿಂಗ್ ಮಹಾರಾಜ ಅವರಿಗೆ ಹೂವಿನ ಹಾರ ಮತ್ತು ಶಾಲ ನೀಡಿ ಗೌರವ ಸಲ್ಲಿಸಿದರು ಮತ್ತು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ ಹಿಂದೂ ರಾಷ್ಟ್ರ ಅಧಿವೇಶನದ ಆಹ್ವಾನವೂ ನೀಡಿದರು. ನಿರ್ಮಲ ಪಂಚಾಯತಿ ಆಖಾಡಾದ ವತಿಯಿಂದ ಶಾಲು ನೀಡಿ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರಿಗೆ ಈ ವೇಳೆ ಗೌರವಿಸಲಾಯಿತು. ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ಸಂಘಟಕರಾದ ಶ್ರೀ. ಸುನೀಲ ಘನವಟ್ ಮತ್ತು ಸಮಿತಿಯ ಮಧ್ಯಪ್ರದೇಶ ಮತ್ತು ರಾಜಸ್ಥಾನ ಸಮನ್ವಯಕರಾದ ಶ್ರೀ. ಆನಂದ ಜಾಖೋಟಿಯಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.”

‘ಸಿಖ್ ಗುರುಗಳ ಹಿಂದು ಧರ್ಮ ಮತ್ತು ರಾಷ್ಟ್ರ ರಕ್ಷಣೆಯ ಪರಂಪರೆ ಸನಾತನ ಧರ್ಮದ ವೈಶಿಷ್ಟ್ಯ ! – ಸದ್ಗುರು (ಡಾ.) ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕ, ಹಿಂದೂ ಜನಜಾಗೃತಿ ಸಮಿತಿ

ಗುರು ತೇಗ್ ಬಹಾದೂರ್ ಅವರು ಹಿಂದುಗಳ ರಕ್ಷಣೆಗೆ ವಿಶೇಷವಾಗಿ ಕಾಶ್ಮಿರಿ ಪಂಡಿತಗಳ ರಕ್ಷಣೆಗೆ ಬಲಿದಾನ ಮಾಡಿದ್ದಾರೆ. ಹಿಂದು ಧರ್ಮಕ್ಕಾಗಿ ಸಿಖ್ ಗುರುಗಳ ಪರಂಪರೆ ಇದು ಸನಾತನ ಧರ್ಮದ ವೈಶಿಷ್ಟ್ಯವಾಗಿದೆ. ನಾಮಧಾರಿ, ನೀಲಂಗ್ ಅಥವಾ ನಿರ್ಮಲ್ ಪಂಥದ ಸಿಖ್‌ಗಳು ನೂರಾರು ವರ್ಷಗಳಿಂದ ಹಿಂದು ಧರ್ಮ ಮತ್ತು ಭಾರತ ರಕ್ಷಣೆಯ ಕಾರ್ಯವನ್ನು ಮಾಡುತ್ತಿದ್ದಾರೆ.

ಮಹಂತ್ ಸ್ವಾಮಿ ಜ್ಞಾನದೇವ ಸಿಂಗ್ ಮಹಾರಾಜ ಅವರಿಗೆ ಹಿಂದೂ ರಾಷ್ಟ್ರ ಅಧಿವೇಶನದ ಆಹ್ವಾನ ನೀಡುತ್ತಿರುವ ಸದ್ಗುರು ಡಾ. ಚಾರುದತ್ತ ಪಿಂಗಳೆ

ಈ ಕಾರ್ಯವು ಹೀಗೆಯೇ ಮುಂದುವರಿಯುವುದು. ಕ್ರಿಸ್ತರಾದ ಕೆಲವು ತಥಕಥಿತ ಸಿಖ್‌ರು, ಹಾಗೆಯೇ ಕೆಲವು ಬೆರೆಳೆಣಿಕೆಯಷ್ಟು ಜನರು ಮಾತ್ರ ಖಾಲಿಸ್ತಾನ್‌ದ ಬೇಡಿಕೆಯನ್ನು ಇಡುತ್ತಿದ್ದಾರೆ. ಆದರೆ ಬಹುಸಂಖ್ಯೆಯ ಸಿಖ್‌ರು ಮಾತ್ರ ಭಾರತದಲ್ಲೇ ಉಳಿಯಲು ಇಚ್ಛಿಸುತ್ತಾರೆ.’ ಎಂದು ಹೇಳಿದರು.