Padma Awards 2025 : ಕೇಂದ್ರ ಸರಕಾರದಿಂದ ಪದ್ಮ ಪ್ರಶಸ್ತಿಗಳ ಘೋಷಣೆ

  • 7 ಪದ್ಮವಿಭೂಷಣ, 19 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಿದೆ

  • ಹಿರಿಯ ನಟ ಅನಂತನಾಗ, ಮನೋಹರ ಜೋಶಿ, ಗಜಲ್ ಗಾಯಕ ಪಂಕಜ ಉದಾಸ, ಸಾಧ್ವಿ ಋತಂಭರ ಅವರಿಗೆ ಪದ್ಮಭೂಷಣ ಪ್ರಶಸ್ತಿ

ನವದೆಹಲಿ – ಕೇಂದ್ರ ಸರಕಾರ ಗಣರಾಜ್ಯೋತ್ಸವದ ಮುನ್ನಾದಿನ, ಅಂದರೆ ಜನವರಿ 25 ರ ಸಂಜೆ, ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ 139 ಜನರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಿತು. 7 ಜನರಿಗೆ ಪದ್ಮವಿಭೂಷಣ, 19 ಜನರಿಗೆ ಪದ್ಮಭೂಷಣ ಮತ್ತು 113 ಜನರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಈ ಪ್ರಶಸ್ತಿ ವಿಜೇತರಲ್ಲಿ 23 ಮಹಿಳೆಯರು ಮತ್ತು 10 ಮಂದಿ ವಿದೇಶಿ ನಾಗರಿಕರಿದ್ದಾರೆ. ಹದಿಮೂರು ಜನರಿಗೆ ಮರಣೋತ್ತರ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಲೋಕಸಭೆಯ ಮಾಜಿ ಸ್ಪೀಕರ್ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ ಜೋಶಿ, ಹಿರಿಯ ಗಜಲ ಗಾಯಕ ಪಂಕಜ ಉದಾಸ(ಮರಣೋತ್ತರ), ಸಾಧ್ವಿ ಋತಂಭರ ಅವರಿಗೆ ಪದ್ಮಭೂಷಣ, ವನ್ಯಜೀವಿ ಅಧ್ಯಯನಕಾರ ಮತ್ತು ಬರಹಗಾರ ಅರಣ್ಯಋಷಿ ಮಾರುತಿ ಚಿತಮಪಳ್ಳಿ, ಹಿರಿಯ ನಟ ಅಶೋಕ ಸರಾಫ ಮತ್ತು ಸುಲೇಖನಕಾರ ಅಚ್ಯುತ ಪಾಲವ ಅವರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

ಪದ್ಮ ಪ್ರಶಸ್ತಿಗಳನ್ನು ಪಡೆದ ಕೆಲವು ಗಣ್ಯರ ಹೆಸರುಗಳು

ಪದ್ಮ ವಿಭೂಷಣ ಪಡೆದ ಗಣ್ಯರು

ಮಾಜಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ, ಮಾಜಿ ಸುಜುಕಿ ಮೋಟಾರ್ ಮುಖ್ಯಸ್ಥ ಒಸಾಮು ಸುಜುಕಿ (ಮರಣೋತ್ತರ), ಕಥಕ್ ನರ್ತಕಿ ಕುಮುದಿನಿ ಲಾಖಿಯಾ, ಗಾಯಕಿ ಶಾರದಾ ಸಿನ್ಹಾ (ಮರಣೋತ್ತರ) ಮುಂತಾದವರು

ಪದ್ಯಭೂಷಣ

ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ (ಮರಣೋತ್ತರ), ಗಜಲ್ ಗಾಯಕ ಪಂಕಜ ಉದಾಸ (ಮರಣೋತ್ತರ), ಚಲನಚಿತ್ರ ನಿರ್ಮಾಪಕ ಶೇಖರ ಕಪೂರ, ಹಿರಿಯ ನಟ ಅನಂತ ನಾಗ್, ಮಾಜಿ ಹಾಕಿ ಆಟಗಾರ ಪಿ.ಆರ್. ಶ್ರೀಜೇಶ್, ಸಾಧ್ವಿ ರಿತಂಬರ, ಹಿರಿಯ ಭಾಜಪ ನಾಯಕ ಸುಶೀಲ ಕುಮಾರ ಮೋದಿ (ಮರಣೋತ್ತರ), ಭಾರತೀಯ-ಅಮೇರಿಕನ ಎಂಜಿನಿಯರ್ ಮತ್ತು ಉದ್ಯಮಿ ವಿನೋದ ಧಾಮ ಮುಂತಾದವರು

ಪದ್ಮಶ್ರೀ

ಮಾರುತಿ ಚಿತಮಪಲ್ಲಿ, ನಟ ಅಶೋಕ ಸರಾಫ, ಸುಂದರ ಬರಹಗಾರ ಅಚ್ಯುತ ಪಾಲವ, ಬ್ಯಾಂಕ ಉದ್ಯಮಿ ಅರುಂಧತಿ ಭಟ್ಟಾಚಾರ್ಯ, ಶಾಸ್ತ್ರೀಯ ಗಾಯಕಿ ಅಶ್ವಿನಿ ಭಿಡೆ-ದೇಶಪಾಂಡೆ, ಹೋಮಿಯೋಪತಿ ವೈದ್ಯ ಡಾ. ವಿಲಾಸ ಡಾಂಗರೆ, ವನ್ಯಜೀವಿ ಸಂವರ್ಧಕ ಚೈತ್ರಾಮ ಪವಾರ, ಸಾಂಪ್ರದಾಯಿಕ ನೇಯ್ಗೆ ಮತ್ತು ಕೈಮಗ್ಗ ಕಲಾವಿದೆ ಸಾಲಿ ಹೋಳ್ಕರ, ಚಿತ್ರಕಾರ ವಾಸುದೇವ ಕಾಮತ, ಗೋವಾ ವಿಮೋಚನಾ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ 100 ವರ್ಷ ವಯಸ್ಸಿನ ಸ್ವಾತಂತ್ರ್ಯ ಹೋರಾಟಗಾರ ಲಿಬಿಯಾ ಲೋಬೊ ಸರದೇಸಾಯಿ, ಬ್ರೆಝಿಲ್ ನಲ್ಲಿ ವೇದ ಮತ್ತು ಗೀತೆಯನ್ನು ಕಲಿಸುವ ಆಧ್ಯಾತ್ಮಿಕ ಗುರು ಜೋನಾಸ ಮಾಸೆಟ್ಟಿ ಮತ್ತು ಕುವೈತ್‌ನ ಯೋಗ ಬೋಧಕಿ ಶೇಖಾ ಎಜೆ ಅಲ್. ಸಬಾ, ಮಾಜಿ ಕ್ರಿಕೆಟಿಗ ಆರ್. ಅಶ್ವಿನ್, ಪ್ಯಾರಾಲಿಂಪಿಕ್ (ಅಂಗವಿಕಲ ಕ್ರೀಡಾಪಟು) ಬಿಲ್ಲುಗಾರ ಹರ್ವಿಂದರ ಸಿಂಗ, ಗಾಯಕಿ ಜಸ್ಪಿಂದರ ನರುಲಾ, ಗಾಯಕ ಅರಿಜಿತ ಸಿಂಗ ಮುಂತಾದವರು.