150 ವರ್ಷಗಳ ನಂತರ ಕುಂಭಮೇಳಕ್ಕೆ ಶೃಂಗೇರಿ ಪೀಠದ ಶಂಕರಾಚಾರ್ಯರ ಆಗಮನ !

ಪ್ರಯಾಗರಾಜ ಕುಂಭಮೇಳ 2025

ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಂದ ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತಿ ಅವರ ಭೇಟಿ !

ಪ್ರಯಾಗರಾಜ (ಉತ್ತರ ಪ್ರದೇಶ), ಜನವರಿ 25 (ಸುದ್ದಿ) – 150 ವರ್ಷಗಳ ನಂತರ ಶೃಂಗೇರಿ ಪೀಠದ ಶಂಕರಾಚಾರ್ಯರು ಕುಂಭಮೇಳದಲ್ಲಿ ಭಾಗವಹಿಸಿದ್ದಾರೆ. ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತಿ ಅವರು ಮಹಾಕುಂಭ ಪ್ರದೇಶಕ್ಕೆ ಆಗಮಿಸಿದ್ದಾರೆ. ಇದಕ್ಕೂ ಮೊದಲು, ಶ್ರೀ ಶ್ರೀ ವಿಧುಶೇಖರ ಭಾರತಿಯವರ ಗುರುಗಳು ಕುಂಭಮೇಳಕ್ಕೆ ಬಂದಿದ್ದರು. ದಕ್ಷಿಣ ಭಾರತದ ಶಂಕರಾಚಾರ್ಯರು ಬಹಳ ಸಮಯದ ನಂತರ ಕುಂಭಮೇಳದಲ್ಲಿ ಭಾಗವಹಿಸಿದ್ದರಿಂದ ಈ ಮಂಗಲಕರ ಘಟನೆಯನ್ನು ವಿಶಿಷ್ಟವೆಂದು ಹೇಳಲಾಗುತ್ತಿದೆ.

ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತಿ ಅವರ ಆಗಮನದ ನಂತರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕುಂಭ ಕ್ಷೇತ್ರದಲ್ಲಿರುವ ಅವರ ಆಶ್ರಮಕ್ಕೆ ಬಂದು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತಿ ಅವರನ್ನು ಭೇಟಿ ಮಾಡಿ ಸನ್ಮಾನಿಸಿದರು. ‘ಶೃಂಗೇರಿ ಪೀಠದ ಶಂಕರಾಚಾರ್ಯರ ಆಗಮನದೊಂದಿಗೆ ಮಹಾಕುಂಭವು ಪೂರ್ಣತ್ವ ಪಡೆಯಿತು. ಇದರಿಂದ ಮಹಾಕುಂಭದ ವೈಭವ ಮತ್ತಷ್ಟು ಹೆಚ್ಚಿಸಿದೆ” ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಈ ಸಂದರ್ಭದಲ್ಲಿ ತಮ್ಮ ಭಾವನೆ ವ್ಯಕ್ತಪಡಿಸಿದರು.

ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತಿ ಅವರು ಕೂಡ ಮುಖ್ಯಮಂತ್ರಿಯವರನ್ನು ಶ್ರೀಫಲ ನೀಡುವ ಮೂಲಕ ಸ್ವಾಗತಿಸಿದರು. ಈ ಸಂದರ್ಭದಲ್ಲಿ, ಮುಖ್ಯಮಂತ್ರಿಗಳು ಶಂಕರಾಚಾರ್ಯರಿಗೆ ಮಹಾಕುಂಭದ ವ್ಯವಸ್ಥೆಗಳು, ಅದರಲ್ಲಿನ ಸಂತರ ಕೊಡುಗೆ ಮತ್ತು ಪ್ರಪಂಚದ ವಿವಿಧ ದೇಶಗಳಿಂದ ಮಹಾಕುಂಭಕ್ಕೆ ಬರುವ ಭಕ್ತರ ಬಗ್ಗೆ ಮಾಹಿತಿ ನೀಡಿದರು. ಈ ಶುಭ ಸಂದರ್ಭದಲ್ಲಿ, ಶ್ರೀ ಶ್ರೀ ವಿಧುಶೇಖರ ಭಾರತಿ ಅವರು ಮಹಾಕುಂಭ ಮೇಳದ ವ್ಯವಸ್ಥೆಗಳನ್ನು ಶ್ಲಾಘಿಸಿ ಯೋಗಿ ಆದಿತ್ಯನಾಥ ಅವರನ್ನು ಆಶೀರ್ವದಿಸಿದರು. ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತಿ ಮೌನಿ ಅಮವಾಸ್ಯೆಯವರೆಗೆ ಮಹಾಕುಂಭ ಕ್ಷೇತ್ರದಲ್ಲಿರುತ್ತಾರೆ.